More

    ಬಿವಿಎನ್ ನಾಮಪತ್ರ ತಿರಸ್ಕೃತ: ಹತ್ತು ಜನರು ಕಣದಲ್ಲಿ

    ರಾಯಚೂರು: ನಗರದ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ರಾಯಚೂರು ಲೋಕಸಭೆ ಕ್ಷೇತ್ರದ ನಾಮಪತ್ರಗಳ ಪರಿಶೀಲನೆಯಲ್ಲಿ 11 ಜನರಿಂದ ಸಲ್ಲಿಕೆಯಾಗಿದ್ದ 21 ನಾಮಪತ್ರಗಳಲ್ಲಿ 3 ನಾಮಪತ್ರಗಳು ತಿರಸ್ಕೃತಗೊಂಡಿದ್ದು, ಅಂತಿಮವಾಗಿ 10 ಜನರು ಕಣದಲ್ಲಿ ಉಳಿದಂತಾಗಿದೆ.
    ಬಿಜೆಪಿ ಅಭ್ಯರ್ಥಿಯಾಗಿ ಸೂಚಕರ ಮೂಲಕ ಮಾಜಿ ಸಂಸದ ಬಿ.ವಿ.ನಾಯಕ ಮತ್ತು ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ್ದ ಕೆ.ದೇವಣ್ಣ ನಾಯಕ ಸಲ್ಲಿಸಿದ್ದ ನಾಮಪತ್ರಗಳನ್ನು ಎ ಮತ್ತು ಬಿ ಾರಂ ಇಲ್ಲದ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ. ಜತೆಗೆ ಸೂಚಕರಿಲ್ಲದ ಶಾಮರಾವ್ ಮೇದಾರ್ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಪಕ್ಷೇತರರಾಗಿ ಕೆ.ದೇವಣ್ಣ ನಾಯಕ ಮತ್ತು ಶಾಮರಾವ್ ಮೇದಾರ್ ಮತ್ತೊಂದು ನಾಮಪತ್ರವನ್ನು ಸ್ವೀಕರಿಸಲಾಗಿದೆ.
    ಇದರಿಂದಾಗಿ ಕಣದಲ್ಲಿ ಬಿಜೆಪಿಯ ರಾಜಾ ಅಮರೇಶ್ವರ ನಾಯಕ, ಕಾಂಗ್ರೆಸ್‌ನ ಜಿ.ಕುಮಾರನಾಯಕ, ಬಿಎಸ್‌ಪಿಯ ಎಸ್.ನರಸಣ್ಣಗೌಡ ನಾಯಕ, ಕರ್ನಾಟಕ ರಾಷ್ಟ್ರ ಸಮಿತಿಯ ಬಸವಪ್ರಭು ಮೇದ, ಎಸ್‌ಯುಸಿಐನ ರಾಮಲಿಂಗಪ್ಪ, ಭಾರತೀಯ ಜನ ಸಾಮ್ರಾಟ್ ಪಕ್ಷದ ಶಾಮರಾವ್ ಮೇದಾರ, ಪಕ್ಷೇತರ ಅಭ್ಯರ್ಥಿಗಳಾಗಿ ಕೆ.ದೇವಣ್ಣ ನಾಯಕ, ಅಮರೇಶ, ನರಸಿಂಹ ನಾಯಕ, ಯಲ್ಲಮ್ಮ ದಳಪತಿ ಕಣದಲ್ಲಿ ಉಳಿದಿದ್ದಾರೆ.
    ಮರೆಯಾದ ಆತಂಕ:
    ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರದ ಕುರಿತು ಕಲಬುರಗಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಸಂಕಷ್ಟದಲ್ಲಿದ್ದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸ್ವೀಕೃತಗೊಂಡಿದ್ದರಿಂದ ಜತೆಗೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಬಿ.ವಿ.ನಾಯಕ ನಾಮಪತ್ರ ಸ್ವೀಕಾರಗೊಂಡಿದ್ದರಿಂದ ನಿರಾಳವಾಗಿದ್ದಾರೆ. ಆದರೆ ಎಸ್ಟಿ ಪ್ರಮಾಣಪತ್ರದ ಬಗ್ಗೆ ಹೈಕೋರ್ಟ್‌ನಲ್ಲಿ ಶುಕ್ರವಾರ ನಡೆದ ವಿಚಾರಣೆಯನ್ನು ಏ.22ಕ್ಕೆ ಮುಂದೂಡಲಾಗಿರುವುದರಿಂದ ಅಮರೇಶ್ವರ ನಾಯಕ ಆತಂಕ ಪೂರ್ಣ ಪ್ರಮಾಣದಲ್ಲಿ ಮರೆಯಾಗದಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts