More

    ಕನ್ನಡ ಪ್ರೇಮ ಬೆಳೆಸುವಲ್ಲಿ ಚಾಲಕರ ಪಾತ್ರ ಹಿರಿದು

    ದೇವದುರ್ಗ: ಆಟೋ, ಕಾರು, ಟ್ಯಾಕ್ಸಿ ಸೇರಿ ಜನರಿಗೆ ಸೇವೆ ಒದಗಿಸುವ ಚಾಲಕರು ಕರ್ತವ್ಯ ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ತೋರಬೇಕಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಹೇಳಿದರು.

    ಚಾಲಕರಲ್ಲಿ ಕರ್ತವ್ಯ ನಿಷ್ಠೆ ಇರಲಿ

    ಪಟ್ಟಣದಲ್ಲಿ ಕೆಇಬಿ ರಸ್ತೆ ಸಮೀಪದ ಹಮ್ಮಿಕೊಂಡಿದ್ದ ಕರ್ನಾಟಕ ಕಾರು ಚಾಲಕರ ಒಕ್ಕೂಟ ಹಾಗೂ ವೃತ್ತ ಉದ್ಘಾಟನೆ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ನಾಡಿನಾದ್ಯಂತ ಕನ್ನಡ ಪ್ರೇಮ, ಭಾಷೆ ಬೆಳೆಸುವ ಕಾರ್ಯದಲ್ಲಿ ಚಾಲಕರ ಒಕ್ಕೂಟ ಅದ್ಭುತವಾದ ಕಾರ್ಯ ಮಾಡುತ್ತಿದೆ. ಸಂಘಟನೆಯಲ್ಲಿ ಐಕ್ಯತೆ ಮತ್ತು ಶಿಸ್ತನ್ನು ರೂಢಿಸಿಕೊಂಡು ಪರಸ್ಪರ ಸಂಘದ ಸದಸ್ಯರಲ್ಲಿ ಸಹಕಾರ ಮನೋಭಾವನೆ ಬೆಳೆಸಿಕೊಳ್ಳಬೇಕು. ಸಂಘಟನೆ ಮೂಲಕ ಸರ್ಕಾರದ ಜೀವ ವಿಮೆ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.

    ಇದನ್ನೂ ಓದಿ: ಸಮಸ್ಯೆ ಆಲಿಸಲು ಸಚಿವರೇ ಖುದ್ದು ಹೆಡಿಯಾಲಕ್ಕೆ ಭೇಟಿ

    ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ ಮಾತನಾಡಿ, ಸಂಘದ ಬೆಳವಣಿಗೆ ಪುರಸಭೆ ಆಡಳಿತದಿಂದ ಸೌಲಭ್ಯ ಮತ್ತು ಸಹಕಾರವನ್ನು ನೀಡಲಾಗುವುದು. ಚಾಲಕರು ಸಂಘಟಿತರಾಗಬೇಕಿದೆ. ಅಲ್ಲದೆ ಜನರಿಗೆ ಇನ್ನಷ್ಟು ಗುಣಮಟ್ಟದಿಂದ ಪ್ರಾಮಾಣಿಕವಾಗಿ ಸೇವೆಯನ್ನು ಒದಗಿಸಬೇಕಾಗಿದೆ ಎಂದರು.
    ಒಕ್ಕೂಟದ ಅಧ್ಯಕ್ಷ ರಂಗನಾಥ ಸೋಮಕರ್, ಉಪಾಧ್ಯಕ್ಷ ನಾಗರಾಜ್, ಜಿಲ್ಲಾಧ್ಯಕ್ಷ ವೆಂಕಟೇಶ್ ಮಡಿವಾಳ, ಪ್ರಕಾಶ ಅಂಗಡಿ, ಯಲ್ಲನಗೌಡ ಕೆ.ಇರಬಗೇರಾ, ನಿವೃತ್ತ ಶಿಕ್ಷಕ ಲಿಂಗಣ್ಣ ಪೂಜಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts