More

    968 ಕೋಟಿ ರೂಪಾಯಿ ಪಾವತಿಸಲು ಉದ್ಯಮಿ ಬಿ.ಆರ್​.ಶೆಟ್ಟಿಗೆ ಆದೇಶ

    ಲಂಡನ್: ಬ್ರಿಟನ್​ನ ಬಾಕ್ಲೇಸ್ ಕಂಪನಿಗೆ 131 ದಶಲಕ್ಷ ಡಾಲರ್ (ಸುಮಾರು 968 ಕೋಟಿ) ನೀಡುವಂತೆ ಕರ್ನಾಟಕದ ಉಡುಪಿ ಮೂಲದ ಉದ್ಯಮಿಯಾದ ಎನ್​ಎಂಸಿ ಹೆಲ್ತ್​ನ ಸಂಸ್ಥಾಪಕ ಬಿ.ಆರ್. ಶೆಟ್ಟಿಗೆ ಲಂಡನ್ ಕೋರ್ಟ್ ಆದೇಶಿಸಿದೆ. ಬಾವಗುತ್ತು ರಘುರಾಮ ಶೆಟ್ಟಿ ಅವರು ಭಾರತ, ನ್ಯೂಯಾರ್ಕ್ ಸಹಿತ ಅನೇಕ ಕಡೆ ಹಲವು ಕಾನೂನು ಮೊಕದ್ದಮೆಗಳನ್ನು ಎದುರಿಸುತ್ತಿದ್ದು ಪ್ರಮುಖ ಪ್ರಕರಣಗಳಲ್ಲಿ ಸೋಲು ಕಂಡಿದ್ದಾರೆ.

    ವಿದೇಶಿ ವಿನಿಮಯ ವ್ಯವಹಾರಕ್ಕೆ ಸಂಬಂಧಿಸಿ ಬಾಕ್ಲೇಸ್​ನೊಂದಿಗೆ 2020ರಲ್ಲಿ ಮಾಡಿಕೊಳ್ಳಲಾದ ಒಪ್ಪಂದವನ್ನು ಪೂರೈಸುವಲ್ಲಿ ಶೆಟ್ಟಿ ವಿಫಲವಾದ್ದರಿಂದ ಹಣವನ್ನು ಪಾವತಿಸುವಂತೆ ದುಬೈನ ಕೋರ್ಟ್ ಈ ಹಿಂದೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅವರು ಲಂಡನ್ ಕೋರ್ಟ್ ಮೊರೆ ಹೋಗಿದ್ದರು. ಶೆಟ್ಟಿ ಪರ ವಕೀಲರು, ತಮ್ಮ ಕಕ್ಷಿದಾರರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಸೂಕ್ತ ಕಾನೂನು ಪ್ರಾತಿನಿಧ್ಯ ದೊರಕುವಂತಾಗಲು ಮೊಕದ್ದಮೆಯ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದ್ದರು. ಆದರೆ, ಕೋರ್ಟ್ ಅದನ್ನು ತಿರಸ್ಕರಿಸಿತು. ತನಗೆ ಬರಬೇಕಿರುವ ಹಣವನ್ನು ವಸೂಲಿ ಮಾಡಲು ಜಗತ್ತಿನಾದ್ಯಂತ ಶೆಟ್ಟಿ ಹೊಂದಿರುವ ಆಸ್ತಿಪಾಸ್ತಿ ಮುಟ್ಟುಗೋಲಿಗೆ ಬಾಕ್ಲೇಸ್ ಜಾಗತಿಕ ಆದೇಶ ಪಡೆದಿದೆ.

    ಶಾಲಾ-ಕಾಲೇಜುಗಳಿಗೆ ರಜೆ ವಿಚಾರ; ಕರೊನಾ ನಿಯಂತ್ರಣ ನಿಟ್ಟಿನಲ್ಲಿ ಸಿಎಂ ಮಹತ್ವದ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts