More

    ಮೂಡಿಗೆರೆಯಲ್ಲಿ ಕಳಪೆ ಹಣ್ಣು, ತರಕಾರಿ ಮಾರಾಟ

    ಮೂಡಿಗೆರೆ: ಪಟ್ಟಣದ ಕೆಲ ತರಕಾರಿ ಹಾಗೂ ಹಣ್ಣಿನ ವ್ಯಾಪಾರಿಗಳು ಕಳಪೆ ತರಕಾರಿ ನೀಡಿ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

    ಎಸ್​ಬಿಐ ಪಕ್ಕ ಹಾಗೂ ಕೆಲ ಬೀದಿಗಳಲ್ಲಿರುವ ತರಕಾರಿ ಹಾಗೂ ಹಣ್ಣಿನ ವ್ಯಾಪಾರಿಗಳು ಸಾರ್ವಜನಿಕರಿಗೆ ಗುಣಮಟ್ಟದ ತರಕಾರಿ, ಹಣ್ಣು ನೀಡುತ್ತಿಲ್ಲ. ಸೇಬು, ದಾಳಿಂಬೆ, ಸಪೋಟ, ಬಾಳೆಹಣ್ಣು, ಪಪ್ಪಾಯಿ ಸೇರಿ ವಿವಿಧ ಹಣ್ಣುಗಳನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಿ ಮನೆಗೆ ಬಂದು ಕತ್ತರಿಸಿ ನೋಡಿದಾಗ ಹಣ್ಣು ಸಂಪೂರ್ಣ ಹಾಳಾಗಿರುತ್ತದೆ. ಮಾರಾಟಗಾರರು ಕಳಪೆ ಹಣ್ಣು ಮತ್ತು ತರಕಾರಿ ಮಾರಾಟ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

    ಜನರು ಹಣ್ಣು ಮತ್ತು ತರಕಾರಿ ಕೊಳ್ಳಲು ಮಾರುಕಟ್ಟೆಗೆ ಬಂದಾಗ ವ್ಯಾಪಾರಿಗಳು ನಿಷೇಧಿತ ಪ್ಲಾಸ್ಟಿಕ್ ಕವರ್​ನಲ್ಲಿ ತರಕಾರಿ ಹಾಕುತ್ತಾರೆ. ಕರೊನಾ ಅರಿವಿಲ್ಲದೆ ತರಕಾರಿ ಹಾಕಲು ಪ್ಲಾಸ್ಟಿಕ್ ಬಿಡಿಸುವಾಗ ಅದರೊಳಗೆ ಬಾಯಿಯಿಂದ ಊದುವುದು, ಬಾಯಿಂದ ಪ್ಲಾಸ್ಟಿಕ್ ಬಿಡಿಸುವುದು ಮಾಡುತ್ತಿದ್ದಾರೆ. ಸ್ವಚ್ಛತೆ ಕಾಪಾಡದ ಹಾಗೂ ಕಳಪೆ ಹಣ್ಣು, ತರಕಾರಿ ಮಾರುತ್ತಿರುವ ವ್ಯಾಪಾರಿಗಳ ವಿರುದ್ಧ ಪಪಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts