More

    ಎನ್​ಕೆವಿಎಲ್​ಐಸಿ ಆ್ಯಪ್​ ಲೋಕಾರ್ಪಣೆ

    ಹುಬ್ಬಳ್ಳಿ : ಉತ್ತರ ಕರ್ನಾಟಕ ವೀರಶೈವ ಲಿಂಗಾಯತ ವಾಣಿಜ್ಯೋದ್ಯಮ ಹಾಗೂ ವ್ಯಾಪಾರಸ್ಥರ ಬಿಜಿನೆಸ್ ಎನ್​ಕೆವಿಎಲ್​ಐಸಿ ಆ್ಯಪ್​ ಆರಂಭಿಸಲಾಗುತ್ತಿದೆ. ಅ. 16ರಂದು ಸಂಜೆ 4 ಗಂಟೆಗೆ ನಗರದ ಬಿವಿಬಿ ಬಯೋಟೆಕ್ ಸೆಮಿನಾರ್ ಹಾಲ್​ನಲ್ಲಿ ಆ್ಯಪ್​ ಲೋಕಾರ್ಪಣೆ ಸಮಾರಂಭ ಆಯೋಜಿಸಲಾಗಿದೆ.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಎನ್​ಕೆವಿಎಲ್​ಐಸಿ ಸಂಸ್ಥಾಪಕ ಅಧ್ಯಕ್ಷ ರಮೇಶ ಪಾಟೀಲ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಆ್ಯಪ್​ ಬಿಡುಗಡೆಗೊಳಿಸುವರು ಎಂದರು.

    ಕೆಎಲ್​ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಹಾಗೂ ಅಶೋಕ ಐರನ್ ಗ್ರುಪ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜಯಂತ ಹುಂಬರವಾಡಿ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.

    ಉತ್ತರ ಕರ್ನಾಟಕ ವೀರಶೈವ ಲಿಂಗಾಯತ ವಾಣಿಜ್ಯ ಮತ್ತು ಉದ್ಯಮಿಗಳ ಈ ಗುಂಪು ರಾಜಕೀಯವಲ್ಲದ ಹಾಗೂ ಉಪ ಜಾತಿಯನ್ನೆಲ್ಲ ಒಳಗೊಂಡು ರೂಪಗೊಂಡಿದೆ. ಇದು ಅಖಿಲ ಭಾರತ ವೀರಶೈವ ಮಹಾಸಭಾದ ಮತ್ತು ಅಂತಾರಾಷ್ಟ್ರೀಯ ವೀರಶೈವ ಲಿಂಗಾಯತ ಯುವ ವಿಭಾಗದ ಒಂದು ಭಾಗವಾಗಿದೆ ಎಂದು ತಿಳಿಸಿದರು.

    ಆರಂಭದಲ್ಲಿ 7-8 ಸದಸ್ಯರನ್ನು ಒಳಗೊಂಡಿದ್ದ ಈ ಗುಂಪು ಈಗ 760 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಉದ್ಯಮಿಗಳಿಗೆ ಹಾಗೂ ವ್ಯಾಪಾರಸ್ಥರಿಗೆ ವೇದಿಕೆ ಕಲ್ಪಿಸುವ ಉದ್ದೇಶವಿದೆ. ವ್ಯಾಪಾರ ಹಾಗೂ ಉದ್ಯಮಗಳ ವಿಸ್ತರಣೆಗಾಗಿ, ಸಮುದಾಯದ ಆರ್ಥಿಕ ಸುಭದ್ರತೆಗಾಗಿ ಈ ಆ್ಯಪ್​ ಆರಂಭಿಸಲಾಗುತ್ತಿದೆ ಎಂದರು.

    ವೀರಶೈವ ಲಿಂಗಾಯತ ಸಮುದಾಯದಲ್ಲಿಯೂ ಎಲ್ಲ ಸಮಾಜಗಳಂತೆ ಬಡವರು ಹಾಗೂ ಸಣ್ಣ ಕೈಗಾರಿಕೋದ್ಯಮಿಗಳಿದ್ದಾರೆ. ಅವರನ್ನು ಪ್ರೋತ್ಸಾಹಿಸಿ, ಆರ್ಥಿಕವಾಗಿ ಸುಭದ್ರರನ್ನಾಗಿಸಲು ಪ್ರಯತ್ನಿಸಲಾಗುವುದು. ಇದರಲ್ಲಿ ಯಾವುದೇ ರೀತಿಯ ರಾಜಕೀಯ ಇಲ್ಲ ಎಂದು ಹೇಳಿದರು.

    ನಾಗರಾಜ ಯಲಿಗಾರ, ಜಿ.ಜಿ. ದ್ಯಾವನಗೌಡ್ರ, ಗಿರೀಶ ನಲ್ವಡಿ, ದೀಪಕ ಪಾಟೀಲ, ವಿಜಯಕುಮಾರ ಪಾಟೀಲ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts