More

    ನಿಗದಿತ ಮಾರ್ಗದಲ್ಲಿ ಸಂಚರಿಸದ ಬಸ್

    ಉಳ್ಳಾಲ: ಹರೇಕಳ ಗ್ರಾಮ ಪಂಚಾಯಿತಿಯಲ್ಲಿ 20 ಅಂಶಗಳ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಅಭಿವೃದ್ಧಿ ಸಂಬಂಧಿತ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

    ಸರ್ಕಾರಿ ಬಸ್‌ಗಳು ನಿಗದಿತ ಮಾರ್ಗದಲ್ಲಿ ಸಂಚರಿಸದೆ ಬೇರೆ ರೂಟ್‌ನಲ್ಲಿ ತೆರಳುತ್ತಿವೆ. ಅಲ್ಲದೆ ಚಾಲಕರ ಕೊರತೆ ನೆಪ ಹೇಳುತ್ತಾರೆ. ಇದರಿಂದಾಗಿ ಶಾಲಾ ಮಕ್ಕಳಿಗೆ ತೊಂದರೆಯಾಗಿದೆ ಎಂದು ಶಿಕ್ಷಕರೋರ್ವರು ಆಕ್ರೋಶ ವ್ಯಕ್ತಪಡಿಸಿದರು.

    ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಬದ್ರುದ್ದೀನ್ ಹರೇಕಳ ಮಾತನಾಡಿ, ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಕೆಡಿಪಿ ಸಭೆ ಸಮರ್ಪಕವಾಗಿ ನಡೆಯುವಂತೆ ಗ್ರಾಮ ಪಂಚಾಯಿತಿ ಆಡಳಿತ ವರ್ಗ ನೋಡಿಕೊಳ್ಳಬೇಕು ಎಂದರು.

    ಪ್ರಮುಖ ಬೇಡಿಕೆಗಳು

    ಗ್ರಾಮದಲ್ಲಿ ಪಶು ವೈದ್ಯರು, ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಸಮುದಾಯ ಆರೋಗ್ಯ ಅಧಿಕಾರಿ ಮನೆ ಭೇಟಿ ನೀಡುತ್ತಿಲ್ಲ. ರಾಜಗುಡ್ಡೆ ಶಾಲೆಗೆ ಸೂಕ್ತ ರಸ್ತೆ ಇಲ್ಲದೆ ಮಕ್ಕಳಿಗೆ ತೊಂದರೆಯಾಗಿದೆ. ಹರೇಕಳ- ಅಡ್ಯಾರ್ ಸೇತುವೆ ನಿರ್ಮಾಣ ಬಳಿಕ ಗ್ರಾಮದಲ್ಲಿ ವಾಹನ ದಟ್ಟಣೆ ಜಾಸ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ಮುಂಭಾಗದ ರಸ್ತೆಗೆ ಹಂಪ್ಸ್ ಅಳವಡಿಸಬೇಕು ಎನ್ನುವ ಬೇಡಿಕೆ ಕೇಳಿ ಬಂತು.

    ಹರೇಕಳ ಪಂಚಾಯಿತಿ ಉಪಾಧ್ಯಕ್ಷೆ ಕಲ್ಯಾಣಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗುಲಾಬಿ, ಪಿಡಿಒ ಮುತ್ತಪ್ಪ, ಕಾರ್ಯದರ್ಶಿ ತಾರಾಕ್ಷಿ, ದ.ಕ. ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಲಾಯ್ಡ ರಾಡ್ರಿಗಸ್, ತೋಟಗಾರಿಕೆ ಇಲಾಖೆಯ ಮಹೇಶ್, ಮಹಿಳಾ ನತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಾಲಿನಿ, ಆರೋಗ್ಯ ಇಲಾಖೆಯ ವತ್ಸಲಾ, ಮೆಸ್ಕಾಂ ಇಲಾಖೆಯ ಪವನ್ ಕುಮಾರ್, ಆರ್‌ಟಿ ಇಲಾಖೆಯ ರಾಕೇಶ್ ರಾವ್ ಕೆ., ಗ್ರಂಥಪಾಲಕಿ ಫರ್ಝಾನ, ಪಶು ಸಂಗೋಪನಾ ಇಲಾಖೆಯ ರಾಜೇಶ್, ಶಿಕ್ಷಕರಾದ ರಾಜೇಶ್ವರಿ, ಲಕ್ಷ್ಮಣ ಕೆ.ವಿ.ಪೊದುವಾಳ್, ಗೀತಾ ರಾಜಗುಡ್ಡೆ, ಕೆ.ರಾಧಾಕೃಷ್ಣ ರೈ, ತ್ಯಾಗಂ ಹರೇಕಳ, ಪತ್ರಕರ್ತ ಗುರುವಪ್ಪ ಬಾಳೆಪುಣಿ, ಪಂಚಾಯಿತಿ ಸಿಬ್ಬಂದಿ ಸರಿತಾ ಮತ್ತು ಹೇಮಲತಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts