More

    ವಲಸೆ ಕಾರ್ಮಿಕರು ತುಂಬಿದ್ದ ಬಸ್ ಪಲ್ಟಿ ; ಮೂವರ ದುರ್ಮರಣ

    ಗ್ವಾಲಿಯರ್​​ : ಜನರಿಂದ ತುಂಬಿದ ಖಾಸಗಿ ಬಸ್ಸೊಂದು ಪಲ್ಟಿ ಹೊಡೆದು ಮೂವರು ವಲಸೆ ಕಾರ್ಮಿಕರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯಿಂದ ವರದಿಯಾಗಿದೆ. ದೆಹಲಿಯಿಂದ ಮಧ್ಯಪ್ರದೇಶದ ತಿಕಮ್​ಗಡ್​-ಛತರ್​ಪುರ್​ಗೆ ಹೋಗುತ್ತಿದ್ದ ಬಸ್​ನಲ್ಲಿ ಬಹುತೇಕ ವಲಸೆ ಕಾರ್ಮಿಕರೇ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

    ಬಸ್ಸಿನ ಒಳಗೆ ಜನರು ತುಂಬಿದ್ದರಲ್ಲದೆ, ಬಸ್ಸಿನ ಮೇಲೆ ಕೂತು ಕೂಡ ಹಲವರು ಪ್ರಯಾಣ ಮಾಡುತ್ತಿದ್ದರು. ದೆಹಲಿಯಿಂದ ತೀಕಮ್​​ಗಡಕ್ಕೆ ಬಸ್​ ಕಂಡಕ್ಟರ್ ಒಬ್ಬ ಪ್ರಯಾಣಿಕರಿಗೆ 700 ರೂ. ನಂತೆ ಹೆಚ್ಚು ಹಣ ಪಡೆದಿದ್ದ ಎನ್ನಲಾಗಿದೆ. ಗ್ವಾಲಿಯರ್-ಝಾನ್ಸಿ ಹೆದ್ದಾರಿಯಲ್ಲಿರುವ ಜೌರಸಿ ಘಾಟ್​ನಲ್ಲಿ ಟರ್ನ್​ ತೆಗೆದುಕೊಳ್ಳುವಾಗ ಇಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಬಸ್ಸು ಪಲ್ಟಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ರಾಜಧಾನಿಯಲ್ಲಿ ಒಂದು ವಾರ ಲಾಕ್​ಡೌನ್ ; ‘ಇಷ್ಟು ಕೇಸ್ ಬಂದರೆ ಆರೋಗ್ಯ ವ್ಯವಸ್ಥೆ ಕುಸಿದೀತು’ ಎಂದ ಸಿಎಂ

    ಈ ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಲ್ಲದೆ ಎಂಟು ಜನ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತೂ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಗ್ವಾಲಿಯರ್​ನ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಇತರ ಪ್ರಯಾಣಿಕರನ್ನು ಅನ್ಯ ಬಸ್​ಗಳಲ್ಲಿ ಅವರ ಊರುಗಳಿಗೆ ಕಳುಹಿಸಲಾಗುತ್ತಿದೆ.

    “ಚಾಲಕನೂ ಸೇರಿದಂತೆ ಬಸ್​ನ ಎಲ್ಲ ಸಿಬ್ಬಂದಿ ನಿನ್ನೆ ರಾತ್ರಿ ರಾಜಸ್ಥಾನದ ಢೋಲ್​​ಪುರ್​ನಲ್ಲಿ ಊಟ ಮಾಡಿದ ನಂತರ ಮದ್ಯ ಸೇವಿಸಿದ್ದರು. ಢೋಲ್​ಪುರ್​ನಲ್ಲೇ ಒಂದು ಟ್ರಕ್​ಗೆ ಬಸ್​ ಗುದ್ದಿತು. ಆಗ ಏನೂ ಸಮಸ್ಯೆಯಾಗಲಿಲ್ಲ. ಆದರೆ ಗ್ವಾಲಿಯರ್ ತಲುಪುವ ವೇಳೆಗೆ ಚಾಲಕನಿಗೆ ಹಿಡಿತ ತಪ್ಪಿ ವಾಹನ ಪಲ್ಟಿ ಹೊಡೆಯಿತು” ಎಂದು ದುರ್ಘಟನೆಗೊಳಗಾದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಗಣಪತ್​ಲಾಲ್ ಎಂಬುವರು ಹೇಳಿದ್ದಾರೆ.

    ಕರೊನಾ ಸೋಂಕು ಉಲ್ಬಣವಾಗಿರುವ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದ ದೆಹಲಿಯಲ್ಲಿ ಲಾಕ್​ಡೌನ್ ಜಾರಿಗೊಳಿಸಲಾಯಿತು. ಆತಂಕಕ್ಕೀಡಾಗಿರುವ ಸಾವಿರಾರು ಜನ ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ಹೋಗಲು ದೆಹಲಿ ಬಸ್​ ನಿಲ್ದಾಣಗಳಲ್ಲಿ ಜಮಾಯಿಸಿರುವ ದೃಶ್ಯಗಳು ಕಾಣಬರುತ್ತಿವೆ ಎನ್ನಲಾಗಿದೆ. (ಏಜೆನ್ಸೀಸ್)

    VIDEO | “ಎಲ್ಲಿಗೆ ಹೋಗುತ್ತಿದ್ದೀರಿ ?” ಕೇಳುತ್ತಿದ್ದಾರೆ ಗರ್ಭಿಣಿ ಪೊಲೀಸ್ ಅಧಿಕಾರಿ !

    “ಯಾವುದೇ ರಾಜ್ಯವೂ ಸಂಪೂರ್ಣ ಲಾಕ್‌ಡೌನ್‌ ವಿಧಿಸುವುದಿಲ್ಲ”

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts