More

    13 ವರ್ಷದ ಬಾಲಕಿಗೆ ಅಸಂಬದ್ಧ ಪ್ರಶ್ನೆ ಕೇಳಿದ್ದ ಬಸ್​ ಕಂಡಕ್ಟರ್​ಗೆ 1 ವರ್ಷ ಜೈಲು

    ಮುಂಬೈ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 13 ವರ್ಷದ ಬಾಲಕಿಯನ್ನು ‘ಸೆಕ್ಸ್​ ಬಗ್ಗೆ ಏನಾದರೂ ತಿಳಿದಿದೆಯೆ?’ ಎಂದು ಪ್ರಶ್ನಿಸಿದ್ದ ಬಸ್​ ಕಂಡಕ್ಟರ್​ಗೆ ಮುಂಬೈನ ವಿಶೇಷ ಕೋರ್ಟ್ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆರೋಪಿ ಚಂದ್ರಕಾಂತ್ ಸುದಾಮ್ ಕೋಲಿ ಎಂಬುವವನ್ನು ಪೋಕ್ಸೋ ಕಾಯ್ದೆಯ ಸೆಕ್ಷನ್ 12 ರಡಿ ಅಪರಾಧಿ ಎಂದು ತೀರ್ಮಾನಿಸಿರುವ ಕೋರ್ಟ್​, ಆತನ ಮೇಲೆ 15,000 ರೂ.ಗಳ ದಂಡವನ್ನು ಕೂಡ ವಿಧಿಸಿದೆ.

    ಮುಂಬೈನ ಸಬರ್ಬ್​ನ ನಿವಾಸಿಯಾದ ಸಂತ್ರಸ್ತ ಬಾಲಕಿಯು ಸರ್ಕಾರಿ ಬಸ್​ನಲ್ಲಿ ಪ್ರತಿದಿನ ಬೆಳಿಗ್ಗೆ ಶಾಲೆಗೆ ಪ್ರಯಾಣಿಸುತ್ತಿದ್ದಳು. ಜುಲೈ 2018 ರಲ್ಲಿ ಒಂದು ದಿನ ಬಸ್ಸಿನ ಹಿಂದಿನ ಸೀಟಿನಲ್ಲಿ ಕೂತಿದ್ದ ಅವಳ ಬಳಿ ಬಂದ ಆರೋಪಿ ಕೋಲಿ, ಅವಳ ಪಕ್ಕದಲ್ಲಿ ಕುಳಿತು ಅವಳಿಗೆ ಸೆಕ್ಸ್ ಬಗ್ಗೆ ಏನು ಗೊತ್ತು ಎಂದು ಕೇಳಿದ್ದ. ಈ ರೀತಿಯ ಪ್ರಶ್ನೆಗಳನ್ನು ಕೇಳಬೇಡಿ ಎಂದು ಹೇಳಿದಾಗ ಮತ್ತೆ ಮುಂದಕ್ಕೆ ಹೋದ ಆತ, ಕೆಲವು ನಿಮಿಷ ಬಿಟ್ಟು ವಾಪಸ್ ಬಂದು ಮತ್ತೆ ಅದೇ ರೀತಿ ಪಕ್ಕದಲ್ಲಿ ಕುಳಿತು ಪ್ರಶ್ನಿಸಿದ್ದ. ಆಕೆ ಏನೂ ಉತ್ತರಿಸದೆ, ತನ್ನ ಸ್ಟಾಪ್​ ಬಂದಾಗ ಬಸ್ಸಿನಿಂದಿಳಿದು ಹೋದಳು ಎನ್ನಲಾಗಿದೆ.

    ಇದನ್ನೂ ಓದಿ: ಬಂಟ್ವಾಳದಲ್ಲಿ ಆವರಣ ಗೋಡೆ ಕುಸಿದು ಮನೆ ಜಖಂ

    ಬಾಲಕಿಯು ತನ್ನ ಸ್ನೇಹಿತೆಯೊಂದಿಗೆ ಬಸ್​ ಕಂಡಕ್ಟರ್​ನ ವರ್ತನೆ ಬಗ್ಗೆ ಹೇಳಿಕೊಂಡಳು. ಆದರೆ ತನ್ನ ತಾಯಿಗೆ ಈ ಈ ಬಗ್ಗೆ ಏನೂ ಹೇಳದೆ ಬಸ್ಸಿನಲ್ಲಿ ಶಾಲೆಗೆ ಹೋಗುವುದಿಲ್ಲ ಎಂದಷ್ಟೇ ಹೇಳಿದಳು. ನಂತರ ಸ್ನೇಹಿತೆಯಿಂದ ವಿಷಯ ತಿಳಿದ ತಾಯಿ, ಬಸ್​ ಡಿಪೋಗೆ ಹೋಗಿ ಕಂಡಕ್ಟರ್ ಯಾರೆಂದು ಗುರುತಿಸಿ ಪೊಲೀಸರಿಗೆ ದೂರು ನೀಡಿದ್ದಳು ಎನ್ನಲಾಗಿದೆ. ಮುಂಬೈನ ನೆಹರೂ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿತ್ತು. (ಏಜೆನ್ಸೀಸ್​)

    ಎರಡು ಮಕ್ಕಳು ಹೊಂದಿದವರಿಗೆ ಹೆಚ್ಚಿನ ಇಂಕ್ರಿಮೆಂಟು, ಗೃಹ ಖರೀದಿ ಸೌಕರ್ಯ!

    ಜುಲೈ 12, 13 ರಂದು ರೆಡ್ ಅಲರ್ಟ್! ಕರಾವಳಿ, ಮಲೆನಾಡಲ್ಲಿ ಹೆಚ್ಚು ಮಳೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts