More

    ಬಸ್​ನಲ್ಲಿ ಲೈಂಗಿಕ ಕಿರುಕುಳ ಕೊಟ್ಟ ಕಾಮುಕನಿಗೆ ಪೊಲೀಸ್ ಕಮಿಷನರ್ ಎದುರೇ ಕಪಾಳಮೋಕ್ಷ!

    ಮಂಗಳೂರು: ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ ಕಾಮುಕನಿಗೆ, ಪೊಲೀಸ್​ ಕಮಿಷನರ್​ ಎದುರಲ್ಲೇ ಸಂತ್ರಸ್ತ ಯುವತಿ ಕಪಾಳಮೋಕ್ಷ ಮಾಡಿದ್ದಾಳೆ.

    ಜ.14ರಂದು ದೇರಳಕಟ್ಟೆ-ಮಂಗಳೂರು ಮಾರ್ಗದ ಖಾಸಗಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಪಕ್ಕದಲ್ಲೇ ಕುಳಿತುಕೊಂಡ ಕಾಮುಕ, ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಯುವತಿ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಬಸ್​ನಿಂದ ಕೆಳಗಿಳಿದ ಆರೋಪಿ, ಮತ್ತೊಂದು ಬಸ್​ನಲ್ಲಿ ಹಿಂಬಾಲಿಸಿಕೊಂಡು ಬಂದು ಮತ್ತೆ ಮತ್ತೆ ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ. ಇದನ್ನೂ ಓದಿರಿ 100 ರೂ. ಮುಖಬೆಲೆಯ ಹಳೇ ನೋಟು ಇನ್ಮುಂದೆ ಚಲಾವಣೆ ಆಗಲ್ಲ! ಸೂಚನೆ ಕೊಟ್ಟ ಆರ್​ಬಿಐ

    ಬಸ್​ನಲ್ಲಿ ಲೈಂಗಿಕ ಕಿರುಕುಳ ಕೊಟ್ಟ ಕಾಮುಕನಿಗೆ ಪೊಲೀಸ್ ಕಮಿಷನರ್ ಎದುರೇ ಕಪಾಳಮೋಕ್ಷ!ಈ ವೇಳೆ ಕಾಮುಕನ ಫೋಟೋ ತೆಗೆದು ವೈರಲ್ ಮಾಡೋದಾಗಿ ಎಚ್ಚರಿಸಿದ ಯುವತಿ, ಮೊಬೈಲ್​ ಕ್ಯಾಮರಾ ಆನ್​ ಮಾಡುತ್ತಿದ್ದಂತೆ ಫೋಟೋಗೆ ಫೋಸ್ ಕೊಟ್ಟಿದ್ದ. ಈ ವೇಳೆ ಬಸ್​ ಸಿಬ್ಬಂದಿ ಯುವತಿಯ ಸಹಾಯಕ್ಕೆ ಬರಲಿಲ್ಲ. ಪ್ರಯಾಣಿಕರು ತೊಂದರೆಗೆ ಸಿಲುಕಿದರೂ ಕ್ಯಾರೆ ಎನ್ನದ ಬಸ್​ನವರ ಬಗ್ಗೆಯೂ ಅಸಮಾಧನಗೊಂಡಿದ್ದ ಯುವತಿ, ಕಾಮುಕನ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿ ಘಟನೆಯ ಬಗ್ಗೆ ವಿವರಿಸಿದ್ದರು. ಇದು ಎಲ್ಲೆಡೆ ವೈರಲ್​ ಆಗುತ್ತಿದ್ದಂತೆ, ಮಂಗಳೂರು ಪೊಲೀಸರು ಆರೋಪಿ ಕಾಸರಗೋಡು ನಿವಾಸಿ ಹುಸೇನ್ (41) ಎಂಬಾತನ್ನು ಬುಧವಾರ ಬಂಧಿಸಿದ್ದಾರೆ.

    ಈ ವೇಳೆ ಅಲ್ಲಿಗೆ ಬಂದ ಯುವತಿ ಮತ್ತು ಆಕೆಯ ಸ್ನೇಹಿತೆ ಇಬ್ಬರೂ ಕಾಮುಕನ ಕಪಾಳಕ್ಕೆ ಮಂಗಳೂರು ನಗರ ಪೊಲೀಸ್​ ಕಮಿಷನರ್ ಎನ್. ಶಶಿಕುಮಾರ್ ಅವರ ಎದುರಲ್ಲೇ ಬಾರಿಸಿದಳು. ಯುವತಿಯ ಈ ದಿಟ್ಟತನಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಕಾಮುಕರಿಗೆ ತಕ್ಕ ಪಾಠ ಕಲಿಸಬೇಕು ಎಂಬೆಲ್ಲ ಕಮೆಂಟ್​ ವ್ಯಕ್ತವಾಗಿದೆ.

    ನನ್ನನ್ನು ತಳ್ಳಿದ್ರು, ಕೂದಲು ಎಳೆದ್ರು, ಎಲ್ಲಾ ಕಡೆ ಮುಟ್ಟಲು ಬಂದ್ರು: ಶಾಸಕಿ ಸೌಮ್ಯರೆಡ್ಡಿ

    ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

    100 ರೂ. ಮುಖಬೆಲೆಯ ಹಳೇ ನೋಟು ಇನ್ಮುಂದೆ ಚಲಾವಣೆ ಆಗಲ್ಲ! ಸೂಚನೆ ಕೊಟ್ಟ ಆರ್​ಬಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts