More

    ಬಂಟಕಲ್ಲು ಕೆ.ಎಲ್.ಶರ್ಮಾ ಬದುಕು ಆದರ್ಶಪ್ರಾಯ

    ಶಿರ್ವ: ಗಾಂಧೀಜಿಯವರು ಸ್ವಾತಂತ್ರೃ ಹೋರಾಟದ ಜಾಗೃತಿಗಾಗಿ ಕರಾವಳಿ ಜಿಲ್ಲೆಗೆ ಆಗಮಿಸಿದಾಗ ಕಟಪಾಡಿಯಲ್ಲಿ ಅವರ ಮಾತುಗಳಿಂದ ಪ್ರಭಾವಿತರಾಗಿ ಗಾಂಧಿ ಅನುಯಾಯಿಯಾಗಿ ದೇಶದ ಸ್ವಾತಂತ್ರೃ ಚಳವಳಿಗೆ ಸಮರ್ಪಸಿಕೊಂಡ ತಾಮ್ರಪ್ರಶಸ್ತಿ ವಿಜೇತ ಬಂಟಕಲ್ಲು ಕೆ.ಎಲ್.ಶರ್ಮಾರವರ ಬದುಕು ಆದರ್ಶಪ್ರಾಯ ಎಂದು ಶರ್ಮಾರ ವಿದ್ಯಾರ್ಥಿ, ನಿವೃತ್ತ ಮುಖ್ಯಶಿಕ್ಷಕ ಕೆ.ಶ್ರೀನಿವಾಸ ರಾವ್ ಹೇಳಿದರು.
    ಸ್ವಾತಂತ್ರೃ ಸೇನಾನಿ ಬಂಟಕಲ್ಲು ದಿ.ಕೆ.ಎಲ್ ಶರ್ಮಾರವರ ನಿವಾಸದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕದ ವತಿಯಿಂದ ಅಮೃತ ಭಾರತಿಗೆ ಕನ್ನಡದ ಆರತಿ ಸ್ವಾತಂತ್ರೃ ಅಮೃತ ಮಹೋತ್ಸವದ ಪ್ರಯುಕ್ತ ಏರ್ಪಡಿಸಿದ ಸ್ವಾತಂತ್ರೃ ಸೇನಾನಿಗಳ ಸ್ಮರಣೆಯ ಅಮೃತಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕಟ್ಟಾ ಸಂಪ್ರದಾಯವಾದಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಮೂಲತಃ ಕಟಪಾಡಿ ಕೋಟೆ ಲಕ್ಷ್ಮೀನಾರಾಯಣ ಶರ್ಮಾರವರು ಬಾಲ್ಯದಲ್ಲೇ ಶಿವಾಜಿ, ರಾಣಾಪ್ರತಾಪ ಸಿಂಹ, ಸ್ವಾಮಿ ವಿವೇಕಾನಂದ ಹಾಗೂ ಕ್ರಾಂತಿಕಾರಿಗಳ ಹೋರಾಟದ ಘಟನೆಗಳಿಂದ ಪ್ರಭಾವಿತರಾಗಿದ್ದರು ಎಂದು ವಿವರಿಸಿದರು.

    ಶಿರ್ವ ಗ್ರಾಪಂ ಅಧ್ಯಕ್ಷ ಕೆ.ಆರ್.ಪಾಟ್ಕರ್ ಮಾತನಾಡಿ, ಶಿರ್ವ ಗ್ರಾಪಂ ವ್ಯಾಪ್ತಿಯಲ್ಲಿ ಶರ್ಮಾರವರ ಮನೆ ಪಕ್ಕದಿಂದ ಹಾದು ಹೋಗುವ ಮತ್ತು ಅವರು ನಡೆದಾಡಿದ ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜು ಸಮೀಪದಿಂದ- ಇನ್ನಂಜೆ ಸಂಪರ್ಕ ರಸ್ತೆಗೆ ಸ್ವಾತಂತ್ರೃ ಅಮೃತ ಮಹೋತ್ಸವ ಶುಭಾವಸರದಲ್ಲಿ ಪಂಚಾಯಿತಿ ವತಿಯಿಂದ ಶರ್ಮಾರವರ ಹೆಸರನ್ನು ಇಡುವ ನಿರ್ಣಯ ಕೈಗೊಳ್ಳಲಾಗುವುದು ಎಂದು ಘೋಷಿಸಿದರು.
    ಕಸಾಪ ಕಾಪು ತಾಲೂಕು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್.ಪಾಟ್ಕರ್, ಬೆಳ್ಳೆ ಗ್ರಾ.ಪಂ. ಅಧ್ಯಕ್ಷ ಸುಧಾಕರ ಪೂಜಾರಿ, ಪ್ರದೀಪ್ ಬಸ್ರೂರು, ಶರ್ಮಾರವರ ಪುತ್ರ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಉಪಸ್ಥಿತರಿದ್ದರು. ಕಸಾಪ ಸಮಿತಿ ಸದಸ್ಯೆ ಪ್ರಜ್ಞಾ ಮಾರ್ಪಳ್ಳಿ ಸ್ವಾಗತಿಸಿದರು. ಸದಸ್ಯ ಎಸ್.ಎಸ್.ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಕೋಶಾಧ್ಯಕ್ಷ ವಿದ್ಯಾಧರ್ ಪುರಾಣಿಕ್ ವಂದಿಸಿದರು. ವಿದ್ಯಾ ಅಮ್ಮಣ್ಣಾಯ, ನವ್ಯತಾ ನಾಡಗೀತೆ ಹಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts