More

    VIDEO| ಬರೋಬ್ಬರಿ 1 ಕೋಟಿ ರೂ. ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ತಹಸೀಲ್ದಾರ್​!

    ಹೈದರಾಬಾದ್​: ಬರೋಬ್ಬರಿ 1 ಕೋಟಿ ರೂ. ಲಂಚ ಪಡೆಯುವಾಗ ತೆಲಂಗಾಣದ ತಹಸೀಲ್ದಾರ್​ ಒಬ್ಬರು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ.

    ಮೆಡ್ಚಲ್​-ಮಲ್ಕಜ್​ಗಿರಿ ಜಿಲ್ಲೆಯ ಕೇಸರ ಮಂಡಲದಲ್ಲಿ ತಹಸೀಲ್ದಾರ್​ ಅಥವಾ ಮಂಡಲ ಕಂದಾಯ ಅಧಿಕಾರಿಯಾಗಿರುವ ಎರ್ವ ಬಾಲರಾಜು ನಾಗರಾಜು ಎಂಬ ಭ್ರಷ್ಟ ಅಧಿಕಾರಿ ರಿಯಲ್​ ಎಸ್ಟೇಟ್​ ಡೀಲರ್​ಗಳ ಬಳಿ ಲಂಚ ಪಡೆಯುವಾಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಜಮೀನು ವಿವಾದವನ್ನು ಬಗೆಹರಿಸಿಕೊಡಲು ಸುಮಾರು 2 ಕೋಟಿ ರೂ.ಗೆ ಲಂಚದ ಬೇಡಿಕೆ ಇಟ್ಟಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ವ್ಯಕ್ತಿಯನ್ನು ಬೆತ್ತಲೆ ಓಡಿಸಿದ ಹೆಣ್ಣು ಹಂದಿಗೆ ಮರಣದಂಡನೆ ಶಿಕ್ಷೆ: ವರ್ಷದ ಕೊನೆಗೆ ಹಂದಿಯ ಅಂತ್ಯ!

    ಕೇಸರ ಮಂಡಲದ ದಯಾರಾ ಗ್ರಾಮದ ವ್ಯಾಪ್ತಿಯಲ್ಲಿ ಬರುವ 28 ಎಕರೆ ಜಮೀನು ವಿವಾದದಲ್ಲಿತ್ತು. ಗ್ರಾಮದ ಕೆಲವರು ಕೋರ್ಟಿನಲ್ಲಿ ದಾವೆ ಹೂಡಿ ತಮ್ಮ ಪರವಾಗಿ ಮಾಡಿಕೊಂಡಿದ್ದರು. ಆದಾಗ್ಯೂ, ರಿಯಲ್​ ಎಸ್ಟೇಟ್​ ಡೀಲರ್​ಗಳ ಪರವಾಗಿ ಜಮೀನು ಮಾಡಿಕೊಡುವುದಾಗಿ ಹೇಳಿ ಅವರಿಗೆ ತಹಸೀಲ್ದಾರ್ 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು.​

    ಡೀಲರ್​ಗಳು ಹಾಗೂ ತಹಸೀಲ್ದಾರ್​ ನಡುವಿನ ರಹಸ್ಯ ಒಪ್ಪಂದದ ಬಗ್ಗೆ ಮಾಹಿತಿ ತಿಳಿದ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಧಿಕಾರಿಯನ್ನು ಬಂಧಿಸಿದ್ದಾರೆ. ಹೈದರಾಬಾದ್​ನ ಎಎಸ್​ ರಾವ್​ ನಗರದ ತಮ್ಮ ಬಾಡಿಗೆ ಮನೆಯಲ್ಲಿ ಲಂಚದ ಹಣ ಪಡೆಯುವಾಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಇವರೊಂದಿಗೆ ಇಬ್ಬರು ರಿಯಲ್​ ಎಸ್ಟೇಟ್​ ಡೀಲರ್​ಗಳಾದ ಶ್ರೀನಾಥ್​ ಮತ್ತು ಅಂಜಿ ರೆಡ್ಡಿ ಎಂಬುವರನ್ನು ಬಂಧಿಸಲಾಗಿದೆ. ಅಲ್ಲದೆ, ಗ್ರಾಮದ ಸಹಾಯಕ ಕಂದಾಯ ಅಧಿಕಾರಿ ಸಾಯಿರಾಜ್​ ಸಹ ಎಸಿಬಿ ಬಲೆಗೆ ಬಿದ್ದಿದ್ದಾನೆ.

    ಇದನ್ನೂ ಓದಿ: VIDEO| ಹಾಡಹಗಲಲ್ಲೇ ಲವರ್​ನಿಂದ ಕಿಡ್ನಾಪ್​ ಆಗಿದ್ದ ಯುವತಿ ಪತ್ತೆ: ಕಾರು ಬಿಟ್ಟು ಪ್ರಿಯಕರ ಪರಾರಿಯಾಗಿದ್ದೇಕೆ?

    ಎರಡು ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ ಅದರ ಭಾಗವಾಗಿ ಒಂದು ಕೋಟಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದು, ಮನೆಯನ್ನು ಹುಡುಕಾಡಿದಾಗ ಹೆಚ್ಚುವರಿಯಾಗಿ 28 ಲಕ್ಷ ರೂ. ಪತ್ತೆಯಾಗಿದೆ. ಅಲ್ಲದೆ, ಭಾರಿ ಮೌಲ್ಯದ ಚಿನ್ನ ಮತ್ತು ಲಾಕರ್​ ಕೀ ಸಹ ಪತ್ತೆಯಾಗಿದೆ ಎಂದು ಎಸಿ ಡಿಸಿಪಿ ಸೂರ್ಯನಾರಾಯಣ ಮಾಧ್ಯಮಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್​)

    ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿ ಮನೆಗೆ ಇಟ್ಟ ಬೆಂಕಿಯಲ್ಲಿ ಸುಟ್ಟಿದ್ದೆಷ್ಟು? ದೋಚಿದ್ದೆಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts