More

    VIDEO: ಬುಮ್ರಾ-ಶಮಿ ಜತೆಯಾಟಕ್ಕೆ ಡ್ರೆಸ್ಸಿಂಗ್ ರೂಂನಲ್ಲಿ ಸಂಭ್ರಮ ಹೇಗಿತ್ತು ಗೊತ್ತೇ?

    ಲಂಡನ್: ಭಾರತ ತಂಡದ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಮೊಹಮದ್ ಶಮಿ (56*ರನ್, 70 ಎಸೆತ, 6 ಬೌಂಡರಿ, 1 ಸಿಕ್ಸರ್) ಹಾಗೂ ಜಸ್‌ಪ್ರೀತ್ ಬುಮ್ರಾ (34*ರನ್, 64 ಎಸೆತ, 3 ಬೌಂಡರಿ) ಜೋಡಿ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದ 2ನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡಕ್ಕೆ 272 ರನ್ ಗೆಲುವಿನ ಗುರಿ ನೀಡುವಲ್ಲಿ ಪ್ರಮುಖ ಪಾತ್ರವಹಿಸಿತು. 9ನೇ ವಿಕೆಟ್‌ಗೆ ಅದ್ಭುತ ಜತೆಯಾಟ ತೋರಿದ ಈ ಜೋಡಿ ಇಂಗ್ಲೆಂಡ್ ಬೌಲರ್‌ಗಳು ನಿರಾಸೆಯಲ್ಲಿ ಮುಳುಗುವಂತೆ ಮಾಡಿತು. ಈ ಜೋಡಿ ಮುರಿಯದ 9ನೇ ವಿಕೆಟ್‌ಗೆ 89 ರನ್ ಕಲೆಹಾಕಿತು. ಬುಮ್ರಾ-ಶಮಿ ಜತೆಯಾಟ ಭಾರತ ತಂಡದ ಹಾಲಿ ಹಾಗೂ ಮಾಜಿ ಆಟಗಾರರ ಮೆಚ್ಚುಗೆಗೆ ಪಾತ್ರವಾಗಿದೆ. ಅಂತಿಮ ದಿನದಾಟದ ಭೋಜನ ವಿರಾಮಕ್ಕೆ ಆಗಮಿಸಿದ ವೇಳೆ ಈ ಜೋಡಿಗೆ ತಂಡದ ಇತರ ಆಟಗಾರರು ಭರ್ಜರಿ ಸ್ವಾಗತ ಕೋರಿದರು. ಈ ಜೋಡಿಗೆ ಸಹ ಆಟಗಾರರು ನೀಡುತ್ತಿರುವ ಸ್ವಾಗತದ ವಿಡಿಯೋವನ್ನು ಬಿಸಿಸಿಐ ಟ್ವೀಟ್ ಮಾಡಿದೆ. 

    ಇದನ್ನೂ ಓದಿ: ತವರಿನ ಪರಿಸ್ಥಿತಿ ಕಂಡು ಮರುಗುತ್ತಿದ್ದಾರೆ ಆಫ್ಘನ್ ನ ಸ್ಟಾರ್ ಕ್ರಿಕೆಟಿಗ..

    ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 5 ವಿಕೆಟ್‌ಗೆ 181 ರನ್‌ಗಳಿಂದ ಅಂತಿಮ ದಿನದಾಟ ಆರಂಭಿಸಿದ ಭಾರತ ತಂಡ, ಆರಂಭದಲ್ಲೇ ಭರವಸೆಯ ಬ್ಯಾಟ್ಸ್‌ಮನ್ ರಿಷಭ್ ಪಂತ್ (22) ವಿಕೆಟ್ ಕಳೆದುಕೊಂಡಿತು. ಇದರ ಬೆನ್ನ ಹಿಂದೆಯೇ ಇಶಾಂತ್ ಶರ್ಮ (16) ಕೂಡ ನಿರ್ಗಮಿಸಿದರು. ಇದರಿಂದ ಭಾರತ ತಂಡ 209 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿತು. ಬಳಿಕ ಜತೆಯಾದ ಶಮಿ ಹಾಗೂ ಬುಮ್ರಾ ಜೋಡಿ ಇಂಗ್ಲೆಂಡ್ ಬೌಲರ್‌ಗಳಿಗೆ ತಡೆಗೋಡೆಯಾದರು. ಈ ಜೋಡಿ ವಿಕೆಟ್ ಒಪ್ಪಿಸದೆ ಬ್ಯಾಟಿಂಗ್ ಕಾಯ್ದುಕೊಂಡಿತು. ಶಮಿ ಟೆಸ್ಟ್ ಜೀವನದಲ್ಲಿ 2ನೇ ಅರ್ಧಶತಕ ಸಿಡಿಸಿದರು.

    ಇದನ್ನೂ ಓದಿ: ರೋಜರ್ ಫೆಡರರ್‌ಗೆ ಮತ್ತೊಮ್ಮೆ ಶಸ್ತ್ರಚಿಕಿತ್ಸೆ, ಮುಗಿಯಿತೇ ಟೆನಿಸ್ ಜೀವನ?

    ಭಾರತ ತಂಡ ಮೊದಲ ಇನಿಂಗ್ಸ್ 364 ರನ್ ಪೇರಿಸಿದರೆ, ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ 391 ರನ್ ಗಳಿಸಿ 27 ರನ್ ಮುನ್ನಡೆ ಸಾಧಿಸಿತ್ತು. 2ನೇ ಇನಿಂಗ್ಸ್‌ನಲ್ಲಿ ಭಾರತ ತಂಡ 8 ವಿಕೆಟ್‌ಗೆ 298 ರನ್‌ಗಳಿಗೆ ಡಿಕ್ಲೇರ್ ಘೋಷಿಸಿ, ಇಂಗ್ಲೆಂಡ್ ತಂಡಕ್ಕೆ 272 ಗೆಲುವಿನ ಗುರಿ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts