More

    ಕನವಳ್ಳಿ ಗ್ರಾಮ ಪಂಚಾಯಿತಿ ಎದುರು ಎತ್ತಿನ ಶವ ಇಟ್ಟು ಪ್ರತಿಭಟನೆ

    ಗುತ್ತಲ: ಚರ್ಮ ಗಂಟು ರೋಗಕ್ಕೆ ತುತ್ತಾಗಿ ಗ್ರಾಮದಲ್ಲಿ ಸುಮಾರು 9 ಎತ್ತುಗಳು ಮೃತಪಟ್ಟಿದ್ದರೂ, ರೋಗಪೀಡಿತ ಎತ್ತುಗಳಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಆಕ್ರೋಶಗೊಂಡ ರೈತರು, ರೋಗದಿಂದ ಗುರುವಾರ ಮೃತಪಟ್ಟ ಎತ್ತೊಂದನ್ನು ಹಾವೇರಿ ತಾಲೂಕು ಕನವಳ್ಳಿ ಗ್ರಾಪಂ ಕಚೇರಿ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು.

    ಗ್ರಾಮದಲ್ಲಿ ಕಳೆದ 7 ದಿನಗಳಲ್ಲಿ ದುಬಾರಿ ಬೆಲೆಯ 9 ಎತ್ತುಗಳು ಚರ್ಮ ಗಂಟು ರೋಗಕ್ಕೆ ಬಲಿಯಾಗಿವೆ. ಗ್ರಾಮದಲ್ಲಿನ ಪಶುಚಿಕಿತ್ಸಾಲಯಕ್ಕೆ ವೈದ್ಯರನ್ನು ನೇಮಿಸುವಂತೆ ಅನೇಕ ಬಾರಿ ಮನವಿ ಮಾಡಲಾಗಿದೆ. ಆದರೂ ಜನಪ್ರತಿನಿಧಿಗಳು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿದರು. ಚಮನಸಾಬ ಕರ್ಜಗಿ ಎಂಬುವರ ಎತ್ತಿನ ಶವವನ್ನು ಗ್ರಾಪಂ ಎದುರು ಮಲಗಿಸಿ ಆಕ್ರೋಶ ವ್ಯಕ್ತಪಡಿಸಿದರು.

    ಗ್ರಾಪಂ ಅಧ್ಯಕ್ಷ ಖಾದರಸಾಬ ಗಡ್ಡದ ಅವರು ತಾಪಂ ಇಒ ಡಾ. ಬಿ. ಬಸವರಾಜಪ್ಪ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಚರ್ಮ ಗಂಟು ರೋಗದ ವಿಷಯ ತಿಳಿಸಿ, ಪಶುವೈದ್ಯರನ್ನು ತಕ್ಷಣ ನಿಯೋಜಿಸಿ ಎಂದು ಒತ್ತಾಯಿಸಿದರು. ಆಗ ಇಒ, ‘ತಾಲೂಕಿನಲ್ಲಿ ಕೇವಲ ಮೂವರು ಪಶು ವೈದ್ಯರಿದ್ದು, ಸಮಸ್ಯೆಯಾಗಿದೆ. ಎರಡು ದಿನಕ್ಕೆ ಒಮ್ಮೆ ಗ್ರಾಮಕ್ಕೆ ಪಶುವೈದ್ಯರು ಬಂದು ಸೇವೆ ಸಲ್ಲಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದು ಜಮೀನಿನಲ್ಲಿ ಎತ್ತಿನ ಅಂತ್ಯಸಂಸ್ಕಾರ ನೆರವೇರಿಸಿದರು.

    ಗ್ರಾ.ಪಂ. ಸದಸ್ಯ ಬಸವರಾಜ ಕಾಳಶೆಟ್ಟಿ, ಪರಶುರಾಮ ಎರಿಮನಿ, ಮಲ್ಕಪ್ಪ ರಾಮಾಪುರ, ಸತೀಶ ಹರಮಗಟ್ಟಿ, ರಾಜು ಪಿಡೆಣ್ಣನವರ, ತಿಕರಪ್ಪ ಹಾವೇರಿ, ಪರಮೇಶ ಶೀಲಿ, ಶಿವಬಸಪ್ಪ ಮರಗಾಲ, ಪರಶುರಾಮ ಭರಡಿ, ವಸಂತಪ್ಪ ಶಿಂಧೆ, ಚಮನಸಾಬ ಕರ್ಜಗಿ, ಪರಮೇಶ ಮಠಪತಿ, ರಾಜು ಜಾಲಿ, ಮಾಲತೇಶ ಪಿಡೆಣ್ಣನವರ, ಮಲ್ಲಪ್ಪ ಎರೇಶಿಮಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts