More

    ರಾತ್ರೋರಾತ್ರಿ ಅಧಿಕಾರಿಗಳಿಗೆ ಬುಲಾವ್

    ಧಾರವಾಡ: ಕಳೆದ ವರ್ಷ ಎದುರಾದ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡ ಜನರು ಸರ್ಕಾರದಿಂದ ಪರಿಹಾರ ಪಡೆದು ಮನೆ ನಿರ್ವಿುಸಲು ಕಚೇರಿಗಳಿಗೆ ಅಲೆದಾಡುತ್ತಿರುವುದರ ಮಧ್ಯೆಯೇ ಶಾಸಕ ಅಮೃತ ದೇಸಾಯಿ ಅವರು ಅಧಿಕಾರಿಗಳನ್ನು ರಾತ್ರೋರಾತ್ರಿ ರ್ಸಟ್ ಹೌಸ್​ಗೆ ಕರೆಸಿಕೊಂಡು ರೌದ್ರಾವತಾರ ತೋರಿಸಿದ ಪ್ರಸಂಗ ನಡೆದಿದೆ.

    ತಾಲೂಕಿನ ಲಕಮಾಪುರ, ಮಂಗಳಗಟ್ಟಿ , ಯಾದವಾಡ, ಲಕಮಾಪುರ, ಮಂಗಳಗಟ್ಟಿ, ಕುರುಬಗಟ್ಟಿ ಮತ್ತು ಮುಳಮುತ್ತಲ ಸೇರಿ ವಿವಿಧ ಗ್ರಾಮಗಳಲ್ಲಿ ಮಳೆಯಿಂದ ಹಾನಿಗೀಡಾದ ಮನೆಗಳನ್ನು ಅಧಿಕಾರಿಗಳು ಸ್ವತಃ ಪರಿಶೀಲಿಸಿ ಅರ್ಹರ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ, ಶಾಸಕರ ಬೆಂಬಲಿಗರು ಅಧಿಕಾರಿಗಳ ವಿರುದ್ಧ ದೂರು ಹೇಳಿಕೊಂಡಿದ್ದರು. ಮರು ನಿರ್ವಣಕ್ಕೆ ಎ,ಬಿ,ಸಿ ವಿಭಾಗಗಳನ್ನಾಗಿ ವಿಂಗಡಿಸಿ ಕಳುಹಿಸಬೇಕಿತ್ತು. ಈ ಕಾರ್ಯ ನಡೆಸಲು ನ. 30ರ ರಾತ್ರಿ 12.30ರವರಗೆ ಅವಕಾಶವಿತ್ತು. ಹೀಗಾಗಿ ಶಾಸಕರು ಸೋಮವಾರ ರಾತ್ರಿ ಅಧಿಕಾರಿಗಳನ್ನು ಕರೆಸಿಕೊಂಡು ಕೇಳಿದರು ಎನ್ನಲಾಗಿದೆ.

    ಬಿದ್ದ ಮನೆಗಳ ಪಟ್ಟಿ ಸಿದ್ಧ ಮಾಡಿರುವುದು ಸರಿಯಾಗಿಲ್ಲ ಎಂದು ಆಕ್ಷೇಪಿಸಿದ ಅಮೃತ ದೇಸಾಯಿ, ಅಧಿಕಾರಿಗಳ ವಿರುದ್ಧ ಕೂಗಾಡುವಾಗ ಅವಾಚ್ಯ ಶಬ್ದಗಳೂ ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ತಹಸೀಲ್ದಾರ್ ಕಚೇರಿಯಿಂದ ಅಗತ್ಯ ದಾಖಲೆಗಳನ್ನೂ ತೆಗೆದುಕೊಂಡು ಬರುವಂತೆ ಶಾಸಕರು ಸೂಚಿಸಿದ್ದರು. ಸಭೆಯಲ್ಲಿ ತಮ್ಮ ಬೆಂಬಲಿಗರ ಸಮ್ಮುಖದಲ್ಲೇ ಶಾಸಕರು ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.

    ಅಧಿಕಾರಿಗಳನ್ನು ನಿಂದಿಸಿರುವ ವಿಡಿಯೋ ಕ್ಲಿಪಿಂಗ್ ಮೊಬೈಲ್​ನಿಂದ ಮೊಬೈಲ್​ಗೆ ಹರಿದಾಡುತ್ತಿದ್ದು ಭಾರಿ ಚರ್ಚೆಗೆ ದಾರಿಮಾಡಿಕೊಟ್ಟಿದೆ. ಇದೇ ವೇಳೆ, ಶಾಸಕರ ಮಾತಿನ ಕುರಿತು ಅಧಿಕಾರಿ-ಸಿಬ್ಬಂದಿ ವಲಯದಲ್ಲಿ ತೀವ್ರ ಅಸಮಾಧಾನವೂ ವ್ಯಕ್ತವಾಗುತ್ತಿದೆ.

    ಮೂವರ ಅಮಾನತಿಗೆ ಒತ್ತಾಯ

    ಧಾರವಾಡ: ನೆರೆ ಪರಿಹಾರದಲ್ಲಿ ಅವ್ಯವಹಾರ ಆರೋಪದಡಿ ಕಂದಾಯ ಇಲಾಖೆಯ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿ, ತನಿಖೆ ಕೈಗೊಳ್ಳುವಂತೆ ಶಾಸಕ ಅಮೃತ ದೇಸಾಯಿ ಆಗ್ರಹಿಸಿದ್ದಾರೆ.

    ಈ ವಿಷಯವಾಗಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರಿಗೆ ಮಂಗಳವಾರ ಪತ್ರ ಬರೆದಿರುವ ಶಾಸಕರು, ಗರಗ ಕಂದಾಯ ನಿರೀಕ್ಷಕ ಎನ್.ಎಸ್. ಪಟೇದ, ಮುಳಮುತ್ತಲದ ಗ್ರಾಮ ಲೆಕ್ಕಾಧಿಕಾರಿ ರಾಕೇಶ ಪಾಟೀಲ ಹಾಗೂ ಅಲ್ತಾಫ್ ಹುಸೇನ ಅವರು ನೆರೆ ಪರಿಹಾರ (ಮನೆಗಳಿಗೆ ನೀಡುವ ಪರಿಹಾರ)ದಲ್ಲಿ ಅವ್ಯವಹಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ತಕ್ಷಣ ಇವರನ್ನು ಅಮಾನತು ಮಾಡಿ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts