More

    ಕಟ್ಟಡ ಕಾರ್ಮಿಕರಿಗೆ ಗುಂಪು ವಸತಿ ಯೋಜನೆ ಕಲ್ಪಿಸಲು ಮುಂದಾಗಿರುವ ಕಾರ್ಮಿಕ ಇಲಾಖೆ

    ಬೆಂಗಳೂರು:
    ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಗುಂಪು ವಸತಿ ಯೋಜನೆ ಮತ್ತು ಗುಂಪು ವಿಮೆ ಯೋಜನೆಯನ್ನು ಜಾರಿಗೆ ತರಲು ಕಾರ್ಮಿಕ ಇಲಾಖೆ ಮುಂದಾಗಿದೆ.
    ವಿಕಾಸ ಸೌಧದಲ್ಲಿ ಈ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಮೂರು ಮಹಡಿಯ (ಜಿ ಪ್ಲಸ್ 2) ಮನೆಗಳನ್ನು ನಿರ್ಮಾಣ ಮಾಡಿ ಕಾರ್ಮಿಕರಿಗೆ ನೀಡಲು ಕ್ರಮಕೈಗೊಂಡಿದ್ದಾರೆ.
    ಕಾರ್ಮಿಕರ ಹೆಸರಿನಲ್ಲಿದ್ದರೆ ನಿವೇಶನವಿದ್ದರೆ ಮಾತ್ರ ಅವರಿಗೆ ಮನೆ ಕಟ್ಟಿಸಿಕೊಡಲು ಸರ್ಕಾರ ಅನುದಾನ ನೀಡುವ ವ್ಯವಸ್ಥೆ ಇತ್ತು. ಆದರೆ ಇದರಿಂದ ಬಹಳ ಜನ ಕಾರ್ಮಿಕರಿಗೆ ಮನೆ ಕಟ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಗಮನಿಸಿರುವ ಸಚಿವರು, ಸರ್ಕಾರದಿಂದಲೇ ಮನೆ ಕಟ್ಟಿಸಿಕೊಡಲು ಯೋಜನೆ ರೂಪಿಸುತ್ತಿದ್ದಾರೆ.
    ವಸತಿ ಇಲಾಖೆಯಲ್ಲಿ ನಾನಾ ಯೋಜನೆ ಅಡಿಯಲ್ಲಿ ಗೃಹ ಮಂಡಳಿ, ಕೊಳಚೆ ನಿರ್ಮೂನಲನಾ ಮಂಡಳಿ ಸೆರಿದಂತೆ ನಾನಾ ಕಡೆಯಲ್ಲಿ ಮನೆ ನಿರ್ಮಾಣ ಮಾಡುತ್ತಿರುವ ಮಾದರಿಯಲ್ಲಿಯೇ ಮನೆ ಕಟ್ಟಿಸಿಕೊಡಲು ನಿರ್ಧರಿಸಲಾಗಿದೆ.
    ಸರ್ಕಾರಿ ಜಾಗಗಳು ಇರುವುದನ್ನು ಗುರುತಿಸಿ, ಅಲ್ಲಿ ಮೂರು ಅಂತಸ್ತಿನ ಮನೆಗಳನ್ನು ನಿರ್ಮಾಣ ಮಾಡಿ ಅವುಗಳನ್ನು ಲಾಡರಿ ಮೂಲಕ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಯೋಜನೆಯನ್ನು ರೂಪಿಸಿದ್ದು, ಅದಕ್ಕೆ ಮುಖ್ಯಮಂತ್ರಿಗಳ ಒಪ್ಪಿಗೆ ಪಡೆದ ಬಳಿಕ ಅಧಿಕೃತವಾಗಿ ೋಷಣೆ ಮಾಡಲು ಸಿದ್ಧತೆ ನಡೆದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸೂಚನೆ ನೀಡಿದ್ದಾರೆ.

    ವಿಮಾ ಯೋಜನೆ:
    ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಗುಂಪು ವಿಮೆ ಯೋಜನೆಯನ್ನು ಜಾರಿಗೆ ತರುವ ಕುರಿತು ಕಾರ್ಮಿಕ ಸಚಿವರು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

    ಹಾಜರಿದ್ದವರು:
    ಸಭೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಾರ್ಮಿಕ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಭಾರತಿ, ಕಾರ್ಮಿಕ ಇಲಾಖೆಯ ಆಯುಕ್ತ ಗೋಪಾಲಕೃಷ್ಣ, ಡಾ ಜಿ ಮಂಜುನಾಥ್, ಅಪರ ಕಾರ್ಮಿಕ ಆಯುಕ್ತ ಜಾನ್ಸನ್, ಉಪ ಕಾರ್ಮಿಕ ಆಯುಕ್ತರು, ಜಂಟಿ ಕಾರ್ಮಿಕ ಆಯುಕ್ತ ಚಿದಾನಂದ, ಪ್ರಮುಖ ಬ್ಯಾಂಕಿನ ಹಿರಿಯ ಅಧಿಕಾರಿಗಳು ಮತ್ತು ವಿಮಾ ಕಂಪನಿಗಳ ಪ್ರಮುಖರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts