More

    ಶಿಕ್ಷಣ ಸಂಸ್ಥೆ ಆರಂಭದಿಂದ ವಿದ್ಯಾವಂತ ಸಮಾಜ ನಿರ್ಮಾಣ

    ಶೃಂಗೇರಿ: ಶಿಕ್ಷಣ ಸಂಸ್ಥೆ ಆರಂಭದಿಂದ ವಿದ್ಯಾವಂತ ಸಮಾಜ ನಿರ್ಮಾಣವಾಗಲಿದೆ ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
    ವಿದ್ಯಾರಣ್ಯಪುರ ಗ್ರಾಪಂನ ತಾಳಕೋಡಿನಲ್ಲಿ ಶ್ರೀಶಾರದಾ ಎಜುಕೇಷನಲ್ ಟ್ರಸ್ಟ್ ಆರಂಭಿಸುತ್ತಿರುವ ಪಿಯು ಕಾಲೇಜಿಗೆ ಸೋಮವಾರ ಶಿಲಾನ್ಯಾಸ ನೇರವೇರಿಸಿ ಆಶೀರ್ವದಿಸಿದರು. ಶಿಕ್ಷಣ ಈಗ ಅನಿವಾರ್ಯವಾಗಿದ್ದು, ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕಿದೆ. ಕಲಿಯುವ ಶಿಕ್ಷಣ ಸಂಸ್ಥೆಯಲ್ಲಿ ಉತ್ತಮ ಶಿಕ್ಷಣ ದೊರಕಿದರೆ ಕಲಿಯುವ ವಿದ್ಯಾರ್ಥಿಗಳು ಉತ್ತಮ ಲಿತಾಂಶ ಪಡೆಯುತ್ತಾರೆ. ಇಂದಿನ ಸ್ಪರ್ಧಾತ್ಮಾಕ ಕಾಲಘಟ್ಟದಲ್ಲಿ ಲಿತಾಂಶದೊಂದಿಗೆ ತೇರ್ಗಡೆಯಾದಲ್ಲಿ ಅವರ ಭವಿಷ್ಯವೂ ಉಜ್ವಲವಾಗಿರುತ್ತದೆ. ಕಾಲೇಜು ಆರಂಭದಿಂದ ಸ್ಥಳೀಯವಾಗಿ ಉದ್ಯೋಗವು ಸೃಷ್ಟಿಯಾಗುತ್ತದೆ. ಕಾಲೇಜು ಆರಂಭವಾಗಿ ಉತ್ತಮ ಸಮಾಜ ರೂಪಿಸುವಂತಾಗಲಿ ಎಂದರು.
    ಆಳ್ವಾಸ್ ಸಮೂಹ ಸಂಸ್ಥೆ ಅಧ್ಯಕ್ಷ ಮೋಹನ್ ಆಳ್ವಾ ಮಾತನಾಡಿ, ಇಲ್ಲಿ ಆರಂಭವಾಗುತ್ತಿರುವ ಪಿಯು ಕಾಲೇಜಿನ ತರಗತಿಗಳು 2025ರ ಜೂನ್‌ನಲ್ಲಿ ಆರಂಭವಾಗುತ್ತದೆ. ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ತರಗತಿ ಆರಂಭಿಸಲಾಗುತ್ತಿದ್ದು, ಈ ಕಾಲೇಜಿಗೆ ಸಂಸ್ಥೆ ಮಾರ್ಗದರ್ಶನ ನೀಡಲಿದೆ. ವಸತಿ ಸಹಿತ ಕಾಲೇಜು ನಿರ್ಮಾಣ ಹಂತ ಹಂತವಾಗಿ ನಡೆಯಲಿದ್ದು, ಮುಂದಿನ ನಾಲ್ಕು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ವಸತಿ ವ್ಯವಸ್ಥೆ, ಕ್ರೀಡಾಂಗಣ ಸಹಿತ ಎಲ್ಲಾ ವ್ಯವಸ್ಥೆ ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts