More

    ಸೊಪ್ಪಿನ ಬೆಟ್ಟದ ಸುತ್ತಲೂ ಬೇಲಿ ನಿರ್ಮಿಸಿ; ಕಾಡುಪ್ರಾಣಿಗಳಿಂದ ಅಡಕೆ ಬೆಳೆಗಾರರಿಗೆ ಆಗುತ್ತಿರುವ ನಷ್ಟ ಭರಿಸಿ

    ಸಾಗರ: ಕಾಡು ಪ್ರಾಣಿಗಳಿಂದ ಅಡಕೆ ಬೆಳೆಗಾರರಿಗೆ ಆಗುತ್ತಿರುವ ನಷ್ಟವನ್ನು ಭರಿಸುವಂತೆ ಒತ್ತಾಯಿಸಿ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಸದಸ್ಯರು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.

    ಸಾಗರ ಪ್ರಾಂತ್ಯದಲ್ಲಿ ಅಡಕೆ ಬೆಳೆಗಾರರು ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಾಗಿದ್ದಾರೆ. ಪದೇಪದೆ ಅಡಕೆ ತೋಟಗಳಿಗೆ ಕಾಡುಕೋಣ, ಹಂದಿಗಳು ನುಗ್ಗುತ್ತಿರುವುದರಿಂದ ಅಡಕೆ ಸಸಿಗಳು ನಾಶವಾಗುತ್ತಿವೆ. ಜತೆಗೆ ಅಡಕೆ ಫಸಲನ್ನು ಮಂಗಗಳು ಹಾಳು ಮಾಡುತ್ತಿದ್ದು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು.
    ನಮ್ಮ ಪ್ರಾಂತ್ಯದಲ್ಲಿ ಅರಣ್ಯ ಉಳಿಯಲು ಅಡಕೆ ಬೆಳೆಗಾರರೇ ಕಾರಣ ಎನ್ನುವುದು ದಾಖಲಾರ್ಹ ಸಂಗತಿ. ಅರಣ್ಯವನ್ನು ಸೊಪ್ಪಿನ ಬೆಟ್ಟ ಹೆಸರಿನಲ್ಲಿ ರಕ್ಷಣೆ ಮಾಡಿಕೊಂಡು ಬರುತ್ತಿದ್ದೇವೆ. ಆದ್ದರಿಂದ ಸೊಪ್ಪಿನ ಬೆಟ್ಟದ ಸುತ್ತಲೂ ರಕ್ಷಣೆಗಾಗಿ ಬೇಲಿ ನಿರ್ಮಾಣ ಮಾಡುವುದರಿಂದ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಬಹುದು. ಜತೆಗೆ ಅರಣ್ಯ ಉಳಿಸಲೂ ನೆರವಾಗಲಿದೆ. ಕೂಡಲೆ ಅರಣ್ಯ ಇಲಾಖೆಯಿಂದ ಸೊಪ್ಪಿನ ಬೆಟ್ಟದ ಸುತ್ತಲೂ ಬೇಲಿ ನಿರ್ಮಾಣ ಮಾಡಿ, ಅಡಕೆ ಬೆಳೆಗಾರರಿಗೆ ಆಗುತ್ತಿರುವ ಸಂಕಷ್ಟವನ್ನು ತಪ್ಪಿಸಬೇಕು. ಅಡಕೆ ತೋಟಗಳಿಗೆ ಮಂಗಗಳಿಂದ ವಿಪರೀತ ನಷ್ಟ ಉಂಟಾಗುತ್ತಿದೆ. ತಕ್ಷಣ ಮಂಗಗಳನ್ನು ಹಿಡಿಸಿ ದೊಡ್ಡ ಅರಣ್ಯದಲ್ಲಿ ಬಿಡುವ ಮೂಲಕ ಅಡಕೆ ಬೆಳೆಗಾರರನ್ನು ಉಳಿಸಬೇಕು. ಕಾಡು ಪ್ರಾಣಿಗಳಿಂದ ಅಡಕೆ ಬೆಳೆಗಾರರಿಗೆ ಆಗಿರುವ ನಷ್ಟಕ್ಕೆ ಇಲಾಖೆಯಿಂದ ಪರಿಹಾರ ಕೊಡಿಸಬೇಕು ಎಂದು ಆಗ್ರಹಿಸಿದರು.
    ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ಕಾರ್ಯದರ್ಶಿ ಕೆ.ಎಸ್.ರಾಜೇಂದ್ರ, ಪ್ರಮುಖರಾದ ಆರ್.ಎಸ್.ಗಿರಿ, ಯು.ಎಚ್.ರಾಮಪ್ಪ, ತಿಮ್ಮಪ್ಪ ಶ್ರೀಧರಪುರ, ದಿನೇಶ್ ಬರದವಳ್ಳಿ, ಚೇತನರಾಜ್ ಕಣ್ಣೂರು, ಬಸವರಾಜ ಗೌಡ, ವೆಂಕಟೇಶ್, ಗಣೇಶ್, ಲಕ್ಷ್ಮೀನಾರಾಯಣ, ತಿರುಮಲ ಮಾವಿನಕುಳಿ, ಲೋಕನಾಥ್ ಬಿಳಿಸಿರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts