More

    ಸಮತೋಲನದ ಬಜೆಟ್​ಗೆ ಬಿಎಸ್​ವೈ ಕಸರತ್ತು

    ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ರಾಜ್ಯ ಎದುರಿಸುತ್ತಿರುವ ತೀವ್ರ ಹಣಕಾಸಿನ ಸಂಕಷ್ಟದ ನಡುವೆಯೇ ಕೃಷಿ, ನೀರಾವರಿ ಕ್ಷೇತ್ರಕ್ಕೆ ಆದ್ಯತೆ ನೀಡುವ ಮೂಲಕ ರೈತಪರ ಬಜೆಟ್ ಮಂಡಿಸಲು ಸಿಎಂ ಯಡಿಯೂರಪ್ಪ ತೀವ್ರ ಕಸರತ್ತು ನಡೆಸಿದ್ದಾರೆ. ಆದರೆ ಕರೊನಾ ಭೀತಿ ಸಂಪನ್ಮೂಲ ಕ್ರೋಡೀಕರಣಕ್ಕೆ ನಡುಕ ತಂದಿದೆ. ಯಡಿಯೂರಪ್ಪ ಗುರುವಾರ ಮಂಡಿಸಲಿರುವ ತಮ್ಮ 7ನೇ ಬಜೆಟ್​ನಲ್ಲಿ ಮುಂದಿನ ವರ್ಷದ ಅಭಿವೃದ್ಧಿಯ ಮುನ್ನೋಟವನ್ನು ಹೇಗೆ ನೀಡಲಿದ್ದಾರೆ ಎಂಬುದೇ ಯಕ್ಷಪ್ರಶ್ನೆ. ಈಗಾಗಲೇ ಎಲ್ಲ ಇಲಾಖೆಗಳಿಗೂ ಕಡಿತದ ಮುನ್ಸೂಚನೆ ನೀಡಿದ್ದರೂ 2.34 ಲಕ್ಷ ಕೋಟಿ ರೂ.ಗಳ ಬಜೆಟ್ ಗಾತ್ರವನ್ನು 2.50 ಲಕ್ಷ ಕೋಟಿ ರೂ.ಗಳ ಗಡಿ ದಾಟಿಸಲು ಮುಂದಾಗಿದ್ದಾರೆ.

    ಹೊಸ ಘೋಷಣೆ ಸಾಧ್ಯತೆ

    ಬರ ಪೀಡಿತ 100 ತಾಲೂಕುಗಳಲ್ಲಿ ಕೆರೆಗಳನ್ನು ತುಂಬಿಸುವುದು ಯಶಸ್ವಿನಿ ಯೋಜನೆಯ ಮರು ಜಾರಿ ಆವರ್ತನಿಧಿಗೆ 2000 ಕೋಟಿ ರೂ.ಗಳ ಮೀಸಲು ನೀರಾವರಿಗೆ 10 ಸಾವಿರ ಕೋಟಿ ರೂ. ಮೀಸಲು ಕೃಷಿ ಯಂತ್ರೋಪಕರಣ, ಹನಿ ನೀರಾವರಿಗೆ ಹೆಚ್ಚಿನ ಆದ್ಯತೆ ಭೂ ಸಂಪನ್ಮೂಲ ಪಟ್ಟಿ ಎಂಬ ಯೋಜನೆ ಮಹಿಳೆಯರು, ವೃದ್ಧರು, ರೈತರಿಗೆ ಸ್ವಾವಲಂಬಿ ಬದುಕು ಕಟ್ಟುವ ಯೋಜನೆ ಮಕ್ಕಳ ಯೋಜನೆಗಳ ಕ್ರೋಡೀಕರಣದ ಮಕ್ಕಳ ಬಜೆಟ್ ಕೈಗಾರಿಕೆಗಳಿಗೆ ಅನುಮತಿ ಸರಳೀಕರಣ ಸಹಾಯಧನ ಯೋಜನೆಗಳ ನೇರ ನಗದು ಪಾವತಿ =ಇಂದಿರಾ ಕ್ಯಾಂಟೀನ್ ಊಟ, ತಿಂಡಿ ದರ ಹೆಚ್ಚಳ

    ಅನ್ನಭಾಗ್ಯ ಕಡಿತ?

    ಅನ್ನಭಾಗ್ಯ ಯೋಜನೆಯಲ್ಲಿ ನೀಡುತ್ತಿರುವ ಅಕ್ಕಿ 7 ಕೆಜಿಯಿಂದ 5 ಕೆಜಿಗೆ ಇಳಿಕೆ, 2 ಕೆಜಿಯಿಂದ ಉಳಿತಾಯವಾಗುವ ಹಣದಲ್ಲಿ ಸೋಪು, ಉಪು್ಪ, ಬೇಳೆ ವಿತರಣೆಗೆ ಅನುಮತಿ ಸಾಧ್ಯತೆ.

    ಆಗುತ್ತಾ ದುಬಾರಿ

    ಮದ್ಯ, ಮುದ್ರಾಂಕ ಮತ್ತು ನೋಂದಣಿ, ಮೋಟಾರ್ ವಾಹನ ತೆರಿಗೆ ಸ್ವಲ್ಪ ಹೆಚ್ಚಳ ಸಾಧ್ಯತೆ =ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಸೆಸ್ ನಿರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts