More

    ನಾಳೆಯಿಂದ ಸಂಸತ್​ನ ಬಜೆಟ್ ಅಧಿವೇಶನದ ಎರಡನೇ ಅವಧಿ: ಈಶಾನ್ಯ ದೆಹಲಿ ಹಿಂಸಾಚಾರ, ಆರ್ಥಿಕತೆ ವಿಚಾರಗಳದ್ದೇ ಸವಾಲು ಸರ್ಕಾರಕ್ಕೆ

    ನವದೆಹಲಿ: ಕೇಂದ್ರ ಸರ್ಕಾರ 2020-21ನೇ ಸಾಲಿನ ಮುಂಗಡ ಪತ್ರವನ್ನು ಸಂಸತ್ತಿನಲ್ಲಿ ಫೆಬ್ರವರಿ 1ರಂದು ಮಂಡಿಸಿದ್ದು, ಬಜೆಟ್ ಅಧಿವೇಶನದ ಮೊದಲ ಅವಧಿಯ(ಜನವರಿ 31ರಿಂದ ಫೆಬ್ರವರಿ11) ಬಳಿಕ ಸಂಸತ್ತು ಅಲ್ಪ ವಿರಾಮ ಪಡೆದುಕೊಂಡಿತ್ತು. ಈಗ ಎರಡನೇ ಅವಧಿ ನಾಳೆಯಿಂದ ಆರಂಭವಾಗಲಿದ್ದು, ಏಪ್ರಿಲ್ 3ರಂದು ಸಂಪನ್ನಗೊಳ್ಳಲಿದೆ. ಈಶಾನ್ಯ ದೆಹಲಿ ಹಿಂಸಾಚಾರ, ಆರ್ಥಿಕತೆ ವಿಚಾರಗಳು ಕೇಂದ್ರ ಸರ್ಕಾರಕ್ಕೆ ಸವಾಲಾಗುವ ಸಾಧ್ಯತೆ ಇದೆ.

    ಸತತ ಏಳನೇ ಅವಧಿಯಲ್ಲೂ ದೇಶದ ಜಿಡಿಪಿ ಬೆಳವಣಿಗೆ ಕುಸಿತ ಕಂಡಿದೆ. 2019-20ನೇ ಸಾಲಿನ ಮೂರನೇ ಕ್ವಾರ್ಟರ್​ನಲ್ಲೂ ಜಿಡಿಪಿ ಬೆಳವಣಿಗೆ ಶೇಕಡ 4.7ಕ್ಕೆ ಕುಸಿದಿರುವ ಕಾರಣ ವಿಪಕ್ಷ ನಾಯಕರು ಈ ಬಗ್ಗೆ ಗಮನಸೆಳೆಯತೊಡಗಿದ್ದಾರೆ. ಈ ನಡುವೆ, ಕಾಂಗ್ರೆಸ್​ನ ಹಿರಿಯ ನಾಯಕ ಆನಂದ್ ಶರ್ಮಾ ಅವರು ಸುದ್ದಿಗಾರರ ಜತೆಗೆ ಮಾತನಾಡುತ್ತ, ಭಾರತದ ಆರ್ಥಿಕತೆಯನ್ನು ಸರ್ಕಾರ ಹಾಳುಗೆಡವಿದೆ ಮತ್ತು ಈ ವಿಚಾರವನ್ನು ಸರ್ಕಾರ ಅಲ್ಲಗಳೆಯುತ್ತಲೇ ಬಂದಿದೆ. ಒಂದೊಮ್ಮೆ ಸರ್ಕಾರದ ರಕ್ಷಣಾ ವೆಚ್ಚ, ಸಾರ್ವಜನಿಕ ಆಡಳಿತ ವೆಚ್ಚ ಮತ್ತು ಇತರೆ ಸೇವೆಗಳನ್ನು ಹೊರಗಿಟ್ಟರೆ ಜಿಡಿಪಿ ಬೆಳವಣಿಗೆ ದರ ಮೂರನೇ ಕ್ವಾರ್ಟರ್​ನಲ್ಲಿ ಶೇಕಡ 3.7 ಅಷ್ಟೇ ಎಂದು ಟೀಕಿಸಿದ್ದಾರೆ.

    ಪೌರತ್ವ ತಿದ್ಡುಪಡಿ ಕಾಯ್ದೆ ವಿಚಾರವಾಗಿ ದೆಹಲಿಯಲ್ಲಿ ನಡೆದ ಹಿಂಸಾಚಾರದ ವಿಚಾರವನ್ನು ಕಾಂಗ್ರೆಸ್​ ಎತ್ತಿಕೊಂಡಿದ್ದು ಸರ್ಕಾರದ ವಿರುದ್ಧ ಟೀಕಿಸುತ್ತಲೇ ಬಂದಿದೆ. ಈ ವಿಚಾರವನ್ನೂ ಅದು ಸಂಸತ್ತಿನಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ. 42 ಜನರ ಸಾವಿಗೆ ಕಾರಣವಾದ ಹಿಂಸಾಚಾರಕ್ಕೆ ಸಂಬಂಧಿಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ರಾಜೀನಾಮೆಯನ್ನು ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ನಾಯಕರು ಆಗ್ರಹಿಸಿದ್ದರು. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ನಾಯಕ ಆನಂದ ಶರ್ಮಾ, ದೆಹಲಿಯ ಹಿಂಸಾಚಾರ ಏಕಪಕ್ಷೀಯವಾಗಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರನ್ನೇ ಇದರಲ್ಲಿ ಟಾರ್ಗೆಟ್ ಮಾಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

    ಇದೇ ವೇಳೆ, ಕಾಂಗ್ರೆಸ್ ನಾಯಕರು ಹಿಂಸಾಚಾರವನ್ನು ಕಾಂಗ್ರೆಸ್​​ನವರು ರಾಜಕೀಯ ಬಳಸುತ್ತಿದ್ದಾರೆ. ಅಲ್ಪ ಸಂಖ್ಯಾತರನ್ನು ತಪ್ಪುದಾರಿಗೆಳೆದು ಪ್ರತಿಭಟನೆಗೆ ಬೀದಿಗೆ ಇಳಿಯುವಂತೆ ಮಾಡಿ ಹಿಂಸಾಚಾರಕ್ಕೆ ಕುಮ್ಮಕ್ಕು, ಪ್ರಚೋದನೆಗಳನ್ನು ನೀಡುತ್ತಿರುವವರೂ ಅವರೇ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

    ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಅವಧಿಯಲ್ಲಿ ದೇಶಾದ್ಯಂತ ಪರ-ವಿರೋಧದ ಪ್ರತಿಭಟನೆಗೆ ಕಾರಣವಾದ ಸಿಎಎ, ಹಣಕಾಸು ಮಸೂದೆ 2020, ಏರ್​​ಕ್ರಾಫ್ಟ್ (ಅಮೆಂಡಮೆಂಟ್​) ಬಿಲ್​, ಡೈರೆಕ್ಟ್ ಟ್ಯಾಕ್ಸ್​ ವಿವಾದ್ ಸೇ ವಿಶ್ವಾಸ್ ಮಸೂದೆ ಸೇರಿ ಕೆಲವು ಮಸೂದೆಗಳು ಮಂಡಿಸಲ್ಪಟ್ಟವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts