More

    ಬಜೆಟ್‌ಗೆ ಪರ- ವಿರೋಧ ಪ್ರತಿಕ್ರಿಯೆ

    ಧಾರವಾಡ: ಕಾಂಗ್ರೆಸ್ ಸರ್ಕಾರ ಮಂಡಿಸಿದ ಬಜೆಟ್‌ಗೆ ಪರ- ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ.
    ರಾಜ್ಯದ ಬಜೆಟ್ ಹೆಸರಿಗೆ ಮಾತ್ರ ಸಮಪಾಲು ಮತ್ತು ಸಮಬಾಳು. ಏಕೆಂದರೆ ಹಿಂದಿನ ಯೋಜನೆಗಳನ್ನು ಸ್ಥಗಿತ ಮಾಡಿ ಆರ್ಥಿಕತೆಗಿಂತ ರಾಜಕೀಯ ಲಾಭ ಕಾಣಬಹುದು. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಸಾಲಬಾಧೆ, ಉದ್ಯೋಗದ ಬದಲು ನಿರುದ್ಯೋಗ. ಕಾಯಕವೇ ಇಲ್ಲದೆ ಕಲ್ಯಾಣ ಕರ್ನಾಟಕದ ಕನಸು ಎಷ್ಟರಮಟ್ಟಿಗೆ ನನಸಾಗುವುದು? ಹೊಸ ಶಿಕ್ಷಣ ನೀತಿ ಬದಲಿಸುವುದು ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೆ ಕಾರಣವಾಗುವುದರಲ್ಲಿ ಸಂದೇಹವಿಲ್ಲ. ಮಧ್ಯಮ ವರ್ಗಕ್ಕೆ ಬೆಲೆ ಹೆಚ್ಚಳದ ಬರೆ ಹಾಕಲಾಗಿದೆ. ಒಟ್ಟಾರೆ ಇದೊಂದು ಸಾಮಾನ್ಯ ಬಜೆಟ್ ಆಗಿದ್ದು, ನಿರುದ್ಯೋಗ ಹೆಚ್ಚಳ ಮತ್ತು ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ಮೂಲಕ ಅಸಮಾನತೆ ಹೆಚ್ಚಳ ಕಂಡುಬರುತ್ತಿದೆ.

    • ಯೋಗಿತಾ ಕೆ.ಎಸ್., ಸಂಶೋಧನಾ ವಿದ್ಯಾರ್ಥಿನಿ, ಧಾರವಾಡ

    ಸಾಮಾಜಿಕ ನ್ಯಾಯ, ಅಭಿವೃದ್ಧಿ ಹಾಗೂ ರಾಜ್ಯದ ಕಲ್ಯಾಣಕ್ಕಾಗಿ ೨೦೨೩- ೨೪ರ ಗ್ಯಾರೆಂಟಿ ಬಜೆಟ್ ನಿರೂಪಿಸಲಾಗಿದೆ. ಗೃಹಲಕ್ಷಿ÷್ಮÃ ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ ೨,೦೦೦ ರೂ. ನೆರವು ನೀಡುವುದು ವಿಶೇಷ. ಇದು ದೇಶದಲ್ಲಿಯೇ ಅತಿ ದೊಡ್ಡ ಆರ್ಥಿಕ ಭದ್ರತಾ ಯೋಜನೆಯಾಗಿದೆ. ಇದರಿಂದ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗುವುದು. ಸುಮಾರು ೧.೩೦ ಕೋಟಿ ಮಹಿಳೆಯರಿಗೆ ಈ ಯೋಜನೆಯಿಂದ ಲಾಭವಾಗುವುದರ ಮೂ¯ಕ ಬೆಲೆ ಏರಿಕೆಯಿಂದ ತತ್ತರಿಸಿರುವ ಕುಟುಂಬಗಳಿಗೆ ನೆಮ್ಮದಿ ಸಿಗಲಿದೆ. ರಾಜ್ಯ ಹಣಕಾಸು ಸಂಸ್ಥೆಯ ಮೂಲಕ ಮಹಿಳಾ ಉದ್ಯಮಿಗಳಿಗೆ ಶೇ. ೪ರ ಬಡ್ಡಿ ದರದಲ್ಲಿ ನೀಡಲಾಗುವ ಸಾಲದ ಮಿತಿ ೫ ಕೋಟಿ ರೂ.ಗೆ ಹೆಚ್ಚಳ ಮಾಡಿದ್ದು ಮಹಿಳಾ ಸಬಲೀಕರಣಕ್ಕೆ ಸಹಾಯಕಾರಿಯಾಗಲಿದೆ.

    • ಪಾರ್ವತಿ ಕಲಮಡಿ, ಯುವತಿ

    ಚುನಾವಣೆಗೂ ಮೊದಲು ಕಾಂಗ್ರೆಸ್ ನೀಡಿದ್ದ ೫ ಗ್ಯಾರೆಂಟಿಗಳನ್ನು ಅನುಷ್ಠಾನಗೊಳಿಸಲು ಬದ್ಧ ಎಂದು ಸರ್ಕಾರ ಬಜೆಟ್‌ನಲ್ಲೂ ಘೋಷಿಸಿದೆ. ಯುವನಿಽ ಯೋಜನೆ ಉದ್ಯೋಗಾಕಾಂಕ್ಷಿ ಯುವ ಜನರಿಗೆ ಮಾನಸಿಕ ಸ್ಥೆÊರ್ಯ ನೀಡಲಿದೆ. ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ತೆರಿಗೆ ಸೋರಿಕೆಯನ್ನು ತಡೆಗಟ್ಟುವುದರ ಜೊತೆಗೆ ಸರ್ಕಾರದ ಅನಗತ್ಯ ದುಂದುವೆಚ್ಚಗಳಿಗೆ ಕಡಿವಾಣ ಹಾಕಲು ಕ್ರಮ ವಹಿಸುತ್ತಿರುವುದು ಸ್ವಾಗತಾರ್ಹ.

    • ದೀಪಕ್ ಪಿಸೆ, ಖಾಸಗಿ ನೌಕರ, ಧಾರವಾಡ

    ಅನ್ನಭಾಗ್ಯ ಯೋಜನೆ ಮೂಲಕ ಹಸಿವು ಮುಕ್ತ ಕರ್ನಾಟಕ, ಗೃಹಲಕ್ಷಿ÷್ಮÃ, ಗೃಹಜ್ಯೋತಿ ಯೋಜನೆಗಳು ಬೆಲೆ ಏರಿಕೆಯಿಂದ ತತ್ತರಿಸಿರುವ ಗೃಹಿಣಿಯರಿಗೆ ನೆರವಾಗಲಿವೆ. ಗರ್ಭಿಣಿ, ತಾಯಂದಿರು ಹಾಗೂ ಮಹಿಳೆಯರಲ್ಲಿನ ರಕ್ತಹೀನತೆ ಮತ್ತು ಅಪೌಷ್ಠಿಕತೆಯನ್ನು ಹೋಗಲಾಡಿಸಲು ಪರೀಕ್ಷೆ- ಚಿಕಿತ್ಸೆಗೆ ೨೫ ಕೋಟಿ ರೂ. ಒದಗಿಸುತ್ತಿರುವುದು ಉತ್ತಮ ಹೆಜ್ಜೆ.

    • ಶೀಲಾ ನೆಗಳೂರ, ಗೃಹಿಣಿ, ಧಾರವಾಡ

    ಶಾಲಾ ಅನುದಾನ ೨೦,೦೦೦ ರೂ.ಗಳಿಂದ ೪೫,೦೦೦ ರೂ.ಗೆ ಹೆಚ್ಚಳ ಮÁಡಿದ್ದು ಸ್ವಾಗತಾರ್ಹ. ಶಾಲಾ ಕೊಠಡಿ ಹಾಗೂ ಶೌಚಗೃಹ ನಿಮÁðಣ, ಶಾಲೆಗಳಲ್ಲಿ ತಂತ್ರಜ್ಞಾನ ಅಳವಡಿಕೆ ಹಾಗೂ ಶಾಲೆಗಳಲ್ಲಿ ಮೊಟ್ಟೆ ನೀಡುವ ಯೋಜನೆಯನ್ನು ಎಸ್‌ಎಸ್‌ಎಲ್‌ಸಿವರೆಗೆ ವಿಸ್ತರಿಸಲಾಗಿದೆ. ಕಲಿಕಾ ನ್ಯೂನತೆ ಸರಿಪಡಿಸಲು ಕಲಿಕಾ ಬಲವರ್ಧನೆಗಾಗಿ ಹಣ ಮೀಸಲಿಡಲಾಗಿದೆ. ರಾಷ್ಟಿçÃಯ ಶಿಕ್ಷಣ ನೀತಿ ಬದಲಾಗಿ ರಾಜ್ಯದ ಶಿಕ್ಷಣ ನೀತಿ ಜಾರಿಗೆ ತರುವುದು ಉತ್ತಮ ಹೆಜ್ಜೆ. ಪ್ರಸಕ್ತ ಬಜೆಟ್ ಸಾರ್ವಕಾಲಿಕ ಸಾಮÁಜಿಕ ನ್ಯಾಯದ ಬಜೆಟ್ ಆಗಿದೆ. ಜನಸಾಮÁನ್ಯರಿಗೆ ತೆರಿಗೆ ಹಾಕದೆ ಸರ್ವಜನಾಂಗದ ಅಭಿವೃದ್ಧಿಯ ಬಜ್‌ಟ್ ಇದಾಗಿದೆ.

    • ಬಸವರಾಜ ಗುರಿಕಾರ ರಾe್ಯ ಅಧ್ಯಕ್ಷ, ಕೆಪಿಸಿಸಿ ಶಿಕ್ಷಕರ ಘಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts