More

    ಚುನಾವಣೆ ಸೋತವರಿಗೆ ಸಚಿವ ಸ್ಥಾನ ನೀಡೋದಾದ್ರೆ ಜನ ನಮ್ಮನ್ನು ಯಾಕೆ ಆರಿಸಬೇಕು? – ರೇಣುಕಾಚಾರ್ಯ ಪ್ರಶ್ನೆ

    ದಾವಣಗೆರೆ: ಚುನಾವಣೆಯಲ್ಲಿ ಸೋತವರನ್ನು ಕರೆತಂದು ಸಚಿವರನ್ನಾಗಿ ಮಾಡ್ತಾರೆ ಅನ್ನೋದಾದರೆ ಜನ ನಮ್ಮನ್ನು ಯಾಕೆ ಆರಿಸಿ ವಿಧಾನಸಭೆಗೆ ಕಳುಹಿಸಬೇಕು? – ಹೀಗೆಂದ ಪ್ರಶ್ನಿಸಿದ್ದಾರೆ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತರೂ ಆಗಿರುವ ಶಾಸಕ ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.
    ಸಿ.ಪಿ.ಯೋಗೀಶ್ವರ್​ಗೆ ಸಚಿವ ಸ್ಥಾನ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿರುವ ರೇಣುಕಾಚಾರ್ಯ, ಜನರಿಂದ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡಬೇಕು ಇದು ನನ್ನ ಅಭಿಪ್ರಾಯ, ಈ ನಿಲುವಿಗೆ ಬದ್ಧವಾಗಿರುವುದಾಗಿ ಹೇಳಿಕೊಂಡಿದ್ದಾರೆ.

    ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಸಿಗಬೇಕು ಎಂಬ ಆಗ್ರಹ ನಮ್ಮದಾಗಿದ್ದು, ಜಿಲ್ಲೆಯ ಎಲ್ಲ ಶಾಸಕರು ಸಿಎಂಗೆ ಒತ್ತಾಯ ಮಾಡಿದ್ದೇವೆ. ಇಷ್ಟರ ಮೇಲೆ ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ. ದಾವಣಗೆರೆ ಕರ್ನಾಟಕದ ಮಧ್ಯ ಭಾಗದಲ್ಲಿದ್ದು, ರಾಜಧಾನಿ ಆಗೋ ಎಲ್ಲ ಅರ್ಹತೆ ಇದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದ ಸಂಪರ್ಕ ಸೇತುವೆ ದಾವಣಗೆರೆ ಆಗಿದ್ದು, ಪ್ರಾದೇಶಿಕ ಸಮತೋಲನ ಆಧಾರದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಅವರು ಆಗ್ರಹಿಸಿದರು.

    ಇದನ್ನೂ ಓದಿ: ಎನ್​ಡಿಎ ವಿರುದ್ಧ ಜನಾದೇಶ- ನಿತೀಶ್ ಪ್ರಮಾಣ ವಚನ ಸ್ವೀಕಾರಕ್ಕೆ ನಾವಿಲ್ಲ- ಆರ್​ಜೆಡಿ

    ಬ್ಯಾಂಡ್ ಬಾರಿಸಿ ತಮಟೆ ಬಡೆದು ಬಾಯಿ ಬಡೆದುಕೊಂಡರೆ ಯಾರಿಗೂ ಸಚಿವ ಸ್ಥಾನ ಸಿಗಲ್ಲ. ರಾಜಕೀಯವಾಗಿ ಯಾರು ಸನ್ಯಾಸಿಗಳಲ್ಲ. ಎಲ್ಲರೂ ಒಗ್ಗಟ್ಟಾಗಿ ಜಿಲ್ಲೆಗೆ ಸಚಿವ ಸ್ಥಾನ ಬೇಕು ಅಂತ ಕೇಳಿದ್ದೇವೆ. ಮೂರು ಬಾರಿ ಶಾಸಕ ಆಗಿ ಆಯ್ಕೆಯಾಗಿದ್ದೇನೆ. ಸಚಿವನಾಗಬೇಕು ಅನ್ನೋದು ಜನರ ಆಸೆ ಕೂಡ. ಸಿಎಂ ಯಾವುದೇ ನಿರ್ಧಾರ ತಗೊಂಡ್ರೂ ನಾವು ಬದ್ದರಾಗಿದ್ದೇವೆ. ಹಾದಿ ರಂಪ ಬೀದಿ ರಂಪ ಮಾಡೋದು ನಮಗೆ ಇಷ್ಟ ಇಲ್ಲ ಎಂದು ರೇಣುಕಾಚಾರ್ಯ ನೇರವಾಗಿಯೇ ಸಚಿವ ಸ್ಥಾನದ ಆಸೆಯನ್ನು ಬಹಿರಂಗವಾಗಿಯೇ ಸಿಎಂ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)

    ಸ್ವಾಮಿ ವಿವೇಕಾನಂದ ಯೂನಿವರ್ಸಿಟಿ ಆಗಲಿ ಜೆಎನ್​ಯು – ಚರ್ಚೆಗೆ ಕಿಚ್ಚು ಹಚ್ಚಿದ್ರು ಸಿ.ಟಿ.ರವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts