More

    ಇಬ್ಬರ ಪಾಪದ ಕೊಡ ತಂಬಿದೆ -ಸೋಮಣ್ಣ, ಯತ್ನಾಳ್ ವಿರುದ್ಧ ರೇಣುಕಾಚಾರ್ಯ ಕಿಡಿ 

    ದಾವಣಗೆರೆ: ಮಾಜಿ ಸಚಿವ ವಿ.ಸೋಮಣ್ಣ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಬ್ಬರ ಪಾಪದ ಕೊಡ ತುಂಬಿದೆ. ಅವರಿಬ್ಬರೂ ಟೀಕಿಸಿದ ಮಾತ್ರಕ್ಕೆ ಯಡಿಯೂರಪ್ಪ ಅವರ ತೂಕ ಕಡಿಮೆಯಾಗಲ್ಲ. ಟೀಕೆ ಮುಂದುವರಿಸಿದರೆ ನಾವೂ ತಿರುಗಿ ನಿಲ್ಲಬೇಕಾಗುತ್ತದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿರುಗೇಟು ನೀಡಿದರು.
    ದಾವಣಗೆರೆಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರರನ್ನು ಜನರೆದುರು ವಿಲನ್ ಮಾಡಲು ಹೊರಟಿರುವ ಸೋಮಣ್ಣ, ಯತ್ನಾಳ್ ಬ್ಲಾೃಕ್‌ಮೇಲ್ ರಾಜಕಾರಣ ಬಿಡಬೇಕು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
    ಹೋಗಿ ಬಂದಲ್ಲಿ ಅಧ್ಯಕ್ಷ ಸ್ಥಾನ ಇಲ್ಲ, ರಾಜ್ಯಾಧ್ಯಕ್ಷ ಆಗುತ್ತಿದ್ದೆ ಎಂದು ಹೇಳುವ ನಿಮಗೆ ಕಾಂಗ್ರೆಸ್‌ನಲ್ಲಿ ಯಾವ ಸ್ಥಾನಮಾನವಿತ್ತು? ಎಂದು ಸೋಮಣ್ಣ ಅವರನ್ನು ಪ್ರಶ್ನಿಸಿರುವ ರೇಣುಕಾಚಾರ್ಯ, ಸೋಮಣ್ಣ ಸುಳ್ಳನ್ನು ಸತ್ಯದಂತೆ ಬಿಂಬಿಸುವಲ್ಲಿ ಪರಿಣತರು. ಯಡಿಯೂರಪ್ಪರನ್ನು ವಿನಾಕಾರಣ ಟೀಕಿಸುತ್ತಿರುವುದು ಪಕ್ಷವಿರೋಧಿ ಅಲ್ಲವೆ ಎಂದು ಕೇಳಿದರು.
    ಎಲ್ಲರಿಗೂ ಬೇಕಾದ ವ್ಯಕ್ತಿ ಯಡಿಯೂರಪ್ಪ ಅವರ ಕಾಲಿನ ಧೂಳನ್ನು ಜನರು ಹಣೆಗೆ ಹಚ್ಚಿಕೊಂಡಿದ್ದಿದೆ. ಅವರನ್ನು ಟೀಕಿಸುವ ಯತ್ನಾಳ್‌ದು ಯಾವ ಸಮಾಜಕ್ಕೂ ಕೊಡುಗೆ ಇಲ್ಲ ಎಂದು ಹೇಳಿದರು.

    ಸ್ಮೋಕ್ ಬಾಂಬ್ ಪ್ರಕರಣದಲ್ಲಿ ರಾಜಕೀಯ ಸಲ್ಲ
    ಲೋಕಸಭೆ ಕಲಾಪದಲ್ಲಿ ಭದ್ರತಾ ಸಿಬ್ಬಂದಿ ಕಣ್ಣುತಪ್ಪಿಸಿ ಸ್ಮೋಕ್ ಕ್ಯಾನ್ ಮೂಲಕ ದಾಳಿ ನಡೆಸಿರುವುದು ಖಂಡನೀಯ. ಈ ರೀತಿ ಮಾಡುವವರು ದೇಶದ್ರೋಹಿಗಳು ಎಂದು ಪ್ರತಿಕ್ರಿಯಿಸಿದರು.
    ಈ ಘಟನೆಯನ್ನು ರಾಜಕೀಯಗೊಳಿಸುವುದು ಸರಿಯಲ್ಲ. ಪ್ರಕರಣದ ಬಗ್ಗೆ ತನಿಖೆಗೆ ಒತ್ತಾಯಿಸುವ ಬದಲಾಗಿ ಸಂಸದ ಪ್ರತಾಪ್‌ಸಿಂಹ ಕಚೇರಿಗೆ ಮುತ್ತಿಗೆ ಹಾಕುವುದು, ನರೇಂದ್ರ ಮೋದಿ ಅಮಿತ್ ಷಾ ವಿರುದ್ಧವಾಗಿ ಆರೋಪಿಸುವುದು ಶೋಭೆಯಲ್ಲ ಎಂದು ಕಾಂಗ್ರೆಸ್‌ಗೆ ಉತ್ತರಿಸಿದರು.
    ಮುಂಬೈ ತಾಜ್ ಹೊಟೇಲ್ ಮೇಲೆ ಬಾಂಬ್ ದಾಳಿ ಮಾಡಿದ್ದಾಗ ಮನಮೋಹನಸಿಂಗ್, ವಿಲಾಸರಾವ್ ದೇಶಮುಖ್ ರಾಜೀನಾಮೆ ಕೇಳಿದ್ದೆವಾ? ಪ್ರತಾಪ್‌ಸಿಂಹ ಅವರ ವಿಚಾರಣೆ ಮಾಡಲಿ. ಆದರೆ, ಎಲ್ಲದಕ್ಕೂ ಅವರೇ ಹೊಣೆ ಎನ್ನುವುದು ಸರಿಯಲ್ಲ ಎಂದು ಪ್ರತಿಕ್ರಿಯೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts