More

    ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ: ನಿಲುವು ಸ್ಪಷ್ಟಪಡಿಸಿದ ಮಾಯಾವತಿ

    ಲಖನೌ: ಮುಂಬರುವ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್​ಪಿ) ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

    ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಸಾದುದ್ದೀನ್​ ಒವೈಸಿ ನೇತೃತ್ವದ ಎಐಎಂಐಎಂ ಜತೆ ಬಿಎಸ್​ಪಿ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಸುದ್ದಿಯನ್ನು ಮಾಯಾವತಿ ತಳ್ಳಿಹಾಕಿದರು.

    ಮುಂಬರುವ ಪಂಜಾಬ್​ ವಿಧಾನಸಭೆ ಚುನಾವಣೆಯಲ್ಲಿ ಶಿರೋಮಣಿ ಅಕಾಲಿ ದಳದ ಜತೆ ಮಾತ್ರ ಮೈತ್ರಿ ಮಾಡಿಕೊಳ್ಳುವುದಾಗಿ ಮಾಯಾವತಿ ಹೇಳಿದರು. ಇದನ್ನು ಹೊರತುಪಡಿಸಿದರೆ, ಇನ್ನು ಯಾವುದೇ ಪಕ್ಷದ ಜತೆ ಮೈತ್ರಿ ಇಲ್ಲ. 117 ವಿಧಾನಸಭಾ ಸ್ಥಾನಗಳಿರುವ ಪಂಜಾಬ್​ನಲ್ಲಿ ಈಗಾಗಲೇ ಸೀಟು ಹಂಚಿಕೆಯು ನಿರ್ಧಾರವಾಗಿದೆ. ಶಿರೋಮಣಿ ಅಕಾಲಿದಳ 97 ಮತ್ತು ಬಿಎಸ್​ಪಿ 20 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ತಿಳಿಸಿದರು.

    ಎಐಎಂಐಎಂ ಮತ್ತು ಬಿಎಸ್​ಪಿ ಮುಂಬರುವ ಉತ್ತರ ಪ್ರದೇಶದ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಲಿದೆ ಎಂಬ ಸುದ್ದಿ ನಿನ್ನೆಯಿಂದಲೂ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಈ ಸುದ್ದಿ ಸತ್ಯಕ್ಕೆ ದೂರವಾದದ್ದು ಮತ್ತು ಆಧಾರರಹಿವಾದದ್ದು ಎಂದು ಬಿಎಸ್​ಪಿ ತಳ್ಳಿಹಾಕಿದೆ.

    ಈಗಾಗಲೇ ಟ್ವೀಟ್​ ಮೂಲಕವು ಮಾಯಾವತಿ ಅವರು ಸ್ಪಷ್ಟನೆ ನೀಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್​ ಹೊರತುಪಡಿಸಿದರೆ, ಉತ್ತರ ಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿ ಯಾವುದೇ ಪಕ್ಷದೊಂದಿಗೆ ಬಿಎಸ್​​ಪಿ ಮೈತ್ರಿ ಮಾಡಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್​)

    ಮಕ್ಕಳನ್ನು ಬಿಟ್ಟು ಭಾವನೊಂದಿಗೆ ಪರಾರಿಯಾದ ಮಹಿಳೆಗೆ ಮಾರ್ಗ ಮಧ್ಯೆಯೇ ಕಾದಿತ್ತು ಬಿಗ್​ ಶಾಕ್..!​

    #BBK8: ಪ್ರಶಾಂತ್​ ಸಂಬರಗಿ ವಿರುದ್ಧ ಗಂಭೀರ ಆರೋಪ ಮಾಡಿದ ದಿವ್ಯಾ ಸುರೇಶ್​..!

    ಸವಾಲಿಗೆ ಸೋಲದ ಸೇನಾನಿಗಳು: ಸಂಕಷ್ಟದ ಹೊತ್ತಿನಲ್ಲಿ ವೃತ್ತಿ ಧರ್ಮ ಮೆರೆದ ವೈದ್ಯರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts