More

    ಡ್ರಗ್ಸ್​ ಸ್ಮಗ್ಲಿಂಗ್​ ಮಾಡುತ್ತಿದ್ದ ಪಾಕಿಸ್ತಾನದ ಇಬ್ಬರನ್ನು ಹತ್ಯೆಗೈದ ಬಿಎಸ್​ಎಫ್

    ಶ್ರೀನಗರ: ಪಾಕಿಸ್ತಾನದಿಂದ ದೇಶದೊಳಗೆ ನುಸುಳುತ್ತಿದ್ದ ಇಬ್ಬರು ಸ್ಮಗ್ಲರ್​​ಗಳನ್ನು ಗಡಿ ಭದ್ರತಾ ಪಡೆ (ಬಿಎಸ್​ಎಫ್​) ಹೊಡೆದುರುಳಿಸಿದೆ.

    ರಾಜಸ್ಥಾನದ ಗಡಿಯಲ್ಲಿ ಇವರು ಡ್ರಗ್ಸ್​ ಮತ್ತು ಶಸ್ತ್ರಾಸ್ತ್ರಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದರು. ಇವರಿಬ್ಬರನ್ನೂ ಖಯಾಲಿವಾಲಾದ ಗಡಿ ಪೋಸ್ಟ್​ ಬಳಿ ತಡೆದ ಬಿಎಸ್​ಎಫ್​ ಶೂಟ್ ಮಾಡಿ, ಕೊಂದು ಹಾಕಿದೆ.

    ಸೆಪ್ಟೆಂಬರ್​ 8-9ರ ಮಧ್ಯರಾತ್ರಿ ಘಟನೆ ನಡೆದಿದೆ. ಪಾಕಿಸ್ತಾನದಿಂದ ಭಾರತಕ್ಕೆ ಡ್ರಗ್ಸ್​ ಸಾಗಣೆಯಾಗುತ್ತಿದೆ ಎಂಬ ಗುಪ್ತಚರ ಇಲಾಖೆಯ ನಿಖರ ಮಾಹಿತಿಯ ಮೇರೆಗೆ ಬಿಎಸ್​ಎಫ್​ ಕೂಡ ಅಲರ್ಟ್​ ಆಗಿತ್ತು.  ಇವರ ಬಳಿ ಸುಮಾರು 8 ಕೆಜಿಯಷ್ಟು ಮಾದಕ ವಸ್ತು ಇತ್ತು. 13,000 ರೂ.ಪಾಕಿಸ್ತಾನದ ಕರೆನ್ಸಿ ಇತ್ತು. ಮಾರಕ ಅಸ್ತ್ರಗಳೂ ಇದ್ದವು ಎಂದು ಬಿಎಸ್​ಎಫ್​ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಕೇರಳದ ಸ್ಮಗ್ಲಿಂಗ್​ ರಾಣಿಗೂ, ಕರ್ನಾಟಕದ ಡ್ರಗ್ಸ್​ ದಂಧೆಗೂ ಲಿಂಕ್​: ತನಿಖೆಯಿಂದ ಬಯಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts