More

    ಕಮಲ ಪಡೆಯಲ್ಲೇ ಈಗ ‘ಕೇಸರಿ’ ತಲ್ಲಣ! ಬಿಎಸ್​ವೈ ಪರ ಸಹಾನುಭೂತಿಯ ಸುನಾಮಿ

    ಬಿ.ಎಸ್​. ಯಡಿಯೂರಪ್ಪ ನಿವಾಸದತ್ತ ವಿವಿಧ ಮಠಗಳ ಶ್ರೀಗಳು ಮುಖ ಮಾಡುತ್ತಿದ್ದಾರೆ. ಯಾವಾಗ ಬಿಎಸ್​ವೈರನ್ನ ಸಿಎಂ ಸ್ಥಾನದಿಂದ ಕೆಳಗಿಳಸಲಾಗುತ್ತೆ ಅನ್ನೋ ಮಾತು ಕೇಳಿಬಂತೋ, ಮಠಾಧೀಶರು ಒಗ್ಗೂಡಿ ನಿಂತಿದ್ದಾರೆ. ಬಹುಶಃ ಇತಿಹಾಸದಲ್ಲೇ ಯಾವ ನಾಯಕನಿಗೂ ಸಿಗದಷ್ಟು ಮಠದ ಬೆಂಬಲ ಬಿಎಸ್​ ಯಡಿಯೂರಪ್ಪಗೆ ಕಾಣಸಿಗುತ್ತಿದೆ. ದಿನೇದಿನೇ ಬಿಎಸ್​ವೈ ಪರ ಸಹಾನುಭೂತಿಯ ಸುನಾಮಿಯೇ ಎದ್ದು ಕಾಣುತ್ತಿದೆ.

    ಇದು ರಾಜ್ಯದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಪರ ಎದ್ದಿರೋ ಕಾವಿ ಸುನಾಮಿಯ ಎಫೆಕ್ಟ್..! ಯಾವಾಗ ಬಿಜೆಪಿ ಹೈಕಮಾಂಡ್​ ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರನ್ನ ಕೆಳಗಿಳಿಸೋ ಪ್ಲ್ಯಾನ್ ನಡೆಸಿದೆ ಎಂಬ ವದಂತಿ ಮುನ್ನೆಲೆಗೆ ಬಂತೋ, ಇಡೀ ರಾಜ್ಯದಲ್ಲಿ ಮಠಾಧೀಶರು ಒಗ್ಗೂಡಿದ್ದಾರೆ. ಜಾತಿ-ಮತ-ಪಕ್ಷ ಮರೆತು ಬಿಎಸ್​ವೈಗೆ ಬೆಂಬಲ ಹರಿದುಬರುತ್ತಿದೆ. ಇಲ್ಲಿ ಬಿ.ಎಸ್​ ಯಡಿಯೂರಪ್ಪ ಲಿಂಗಾಯತ-ವೀರಶೈವರು ಅನ್ನೋ ಒಂದೇ ಕಾರಣದಿಂದ ಅಲ್ಲ. ಬದಲಾಗಿ ಯಡಿಯೂರಪ್ಪ ಸಮರ್ಥವಾಗಿ ಸರ್ಕಾರ ಮುನ್ನಡೆಸುತ್ತಿರೋ ಕಾರಣ ತಾವು ಸಿಎಂ ಹಿಂದೆ ನಿಂತಿದ್ದೇವೆ ಎಂದು ಸ್ವಾಮೀಜಿಗಳು ನುಡಿದಿದ್ದಾರೆ.

    ಕಳೆದ ಎರಡು ಮೂರು ದಿನಗಳಿಂದ ಸಿಎಂ ನಿವಾಸಕ್ಕೆ ಹರಿದುಬರುತ್ತಿರೋ ಕಾವಿಪುರುಷರ ಪ್ರವಾಹ, ಬುಧವಾರ ಕೂಡ ಮುಂದುವರಿದಿದೆ. ಇಡೀ ರಾಜ್ಯದ ಮೂಲೆಮೂಲೆಗಳಿಂದ ಬೆಂಗಳೂರಿಗೆ ಧಾವಿಸಿರೋ ಮಠಾಧಿಪತಿಗಳು, ಸಿಎಂ ಬಿಎಸ್​​ವೈ ಪರ ಅಖಂಡವಾಗಿ ನಿಂತಿದ್ದಾರೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ…ಹೀಗೆ ರಾಜ್ಯದ ನಾಲ್ಕೂ ದಿಕ್ಕುಗಳಿಂದ ಸಿಎಂ ಬಿಎಸ್​ವೈಗೆ ಮಠಾಧೀಶರ, ಶಾಸಕರ ಬೆಂಬಲ ವ್ಯಕ್ತವಾಗುತ್ತಿದೆ.

    ಒಂದು ವೇಳೆ ಮಠಾಧೀಶರ, ಜನರ ವಿರೋಧ ಲೆಕ್ಕಿಸದೇ ಬಿಎಸ್ ಯಡಿಯೂರಪ್ಪರನ್ನ ಬದಲಿಸೋ ತೀರ್ಮಾನ ಮಾಡಿದ್ರೆ, ರಾಜ್ಯದಲ್ಲಿ ಬಿಜೆಪಿ ಹೇಳಹೆಸರಿಲ್ಲದಂತೆ ನಿರ್ನಾಮ ಆಗೋದು ಖರೆ ಅಂತಾ ಬೀದರ್ ಜಿಲ್ಲಾ ಮಠಾಧೀಶರ ಒಕ್ಕೂಟ ಎಚ್ಚರಿಕೆ ಕೊಟ್ಟಿದೆ. ಇಷ್ಟು ಮಾತ್ರವಲ್ಲದೇ, ಒಂದು ವೇಳೆ ಎಲ್ಲವನ್ನೂ ಮೀರಿ ಪಕ್ಷವೇನಾದ್ರೂ ಯಡಿಯೂರಪ್ಪರನ್ನ ಬದಲಿಸೋ ನಿರ್ಣಯಕ್ಕೆ ಬಂದ್ರೆ, ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ನೂರಾರು ಮಠಗಳ ಶ್ರೀಗಳು ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಗೃಹಸಚಿವ ಅಮಿತ್ ಶಾ ನಿವಾಸದೆದುರು ಧರಣಿ ನಡೆಸೋದಾಗಿ ಕೂಡ ಸ್ವಾಮೀಜಿಗಳು ವಾರ್ನ್​ ಮಾಡಿದ್ದಾರೆ.

    ಸಿಎಂ ಬದಲಾವಣೆ ಯತ್ನಕ್ಕೆ ಶ್ರೀಶೈಲ ಜಗದ್ಗುರುಗಳು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ನೆರೆ ಹಾವಳಿ, ಕರೊನಾ ಸಂದರ್ಭಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿರೋ, ಇಳಿವಯಸ್ಸಿನಲ್ಲೂ ಯಡಿಯೂರಪ್ಪ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸ್ತಿದ್ದಾರೆ. ಇಂಥಾ ಸಿಎಂರನ್ನ ಕೆಳಗಿಳಿಸಿದ್ರೆ, ಪಕ್ಷಕ್ಕೂ ಸರ್ಕಾರಕ್ಕೂ ದೊಡ್ಡ ಮಟ್ಟದ ನಷ್ಟವಾಗಲಿದ ಎಂದು ಶ್ರೀಶೈಲ ಜಗದ್ಗುರು ಚೆನ್ನಸಿದ್ದರಾಮ ಶಿವಾಚಾರ್ಯ ಶ್ರೀಗಳು ಎಚ್ಚರಿಸಿದ್ದಾರೆ. ಬಿಎಸ್​ ಯಡಿಯೂರಪ್ಪ ಪರ ನಿಡುಮಾಮಿಡಿ ಶ್ರೀಗಳು ಕೂಡ ದನಿ ಎತ್ತಿದ್ದಾರೆ. ಬಿಎಸ್​ವೈ ನಾಯಕತ್ವವನ್ನ ಎಲ್ಲರೂ ಒಪ್ಪಿಕೊಂಡಿ ದ್ದಾರೆ. ಜತೆಗೆ ಯಡಿಯೂರಪ್ಪ ಪಕ್ಷಕ್ಕೆ ಅನಿವಾರ್ಯ ಎಂಬುದು ಈ ಹಿಂದೆಯೇ ಸಾಬೀತಾಗಿದೆ. ನಾಡಿನ ಅಭಿವೃದ್ಧಿಗೆ ಶ್ರಮಿಸಿದ ಯಡಿಯೂ ರಪ್ಪರ ಬದಲಾವಣೆ ಸರಿಯಲ್ಲ. ಬಿಎಸ್ ಯಡಿಯೂರಪ್ಪಗೆ ಪೂರ್ಣಾವಧಿ ಸಿಎಂ ಆಗಿ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ಹೈಕಮಾಂಡ್​ ಅನ್ನ ನಿಡುಮಾಮಿಡಿ ಶ್ರೀಗಳು ಆಗ್ರಹಿಸಿದ್ದಾರೆ. ಇನ್ನೊಂದೆಡೆ, ಬುಧವಾರ ಬೆಳಗ್ಗೆಯಿಂದಲೂ ಸಿಎಂ ನಿವಾಸಕ್ಕೆ ಆಗಮಿಸಿದ ಹಲವಾರು ಶ್ರೀಗಳು, ಯಡಿಯೂರಪ್ಪ ಬದಲಾವಣೆ ಯತ್ನ ಬಗ್ಗೆ ವಿರೋಧಿಸಿದ್ದಾರೆ.

    ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು ಸೇರಿದಂತೆ ನಾನಾ ಮಠಗಳ ಶ್ರೀಗಳು ಯಡಿಯೂರಪ್ಪರನ್ನ ಭೇಟಿಯಾದರು. ಈ ಸಂದರ್ಭದಲ್ಲಿ ಸಿಎಂ ಆಗಿ ಬಿಎಸ್​ವೈರನ್ನೇ ಮುಂದುವರೆಸಬೇಕಾದ ಅಗತ್ಯವಿದೆ ಎಂದು ಶ್ರೀಗಳು ಪ್ರತಿಪಾದಿಸಿದರು. ಇನ್ನೂ ಎರಡು ವರ್ಷಗಳ ಕಾಲ ಯಡಿಯೂರಪ್ಪ ಆಡಳಿತ ನಡೆಸೋಕೆ ಅನುವು ಮಾಡಿಕೊಡಬೇಕು ಎಂದು ಜಾತಿ-ಮತ ಭೇದವಿಲ್ಲದೇ ನಾನಾ ಸಮುದಾಯ ಪ್ರತಿನಿಧಿಸೋ ವಿವಿಧ ಮಠಗಳ ಸ್ವಾಮೀಜಿಗಳು ಬಿಜೆಪಿ ಹೈಕಮಾಂಡ್​ಗೆ ಆಗ್ರಹ ಮಾಡಿದ್ದಾರೆ.

    ಇನ್ನೊಂದೆಡೆ, ಅಧಿಕಾರದ ಆಸೆಗಾಗಿ ಸಿಎಂರನ್ನ ವಿರೋಧಿಸ್ತಿರೋ ಸಮುದಾಯದ ಕೆಲ ಶಾಸಕರ ನಡೆ ಬಗ್ಗೆಯೂ ಶ್ರೀಗಳು ಆಕ್ಷೇಪ ವ್ಯಕ್ತಪಡಿ ಸಿದ್ದಾರೆ. ಬೇಕಿದ್ರೆ, ಮುಂದಿನ ಚುನಾವಣೆಯಲ್ಲಿ ನಿಮ್ಮ ಸಾಮರ್ಥ್ಯದಿಂದ ಪಕ್ಷವನ್ನ ಅಧಿಕಾರಕ್ಕೆ ತಂದು ಸಿಎಂ ಆದ್ರೆ ಅಭ್ಯಂತರವಿಲ್ಲ. ಆದ್ರೆ, ಈಗ ಪಕ್ಷ ಕಟ್ಟಿಬೆಳೆಸಿದ ಯಡಿಯೂರಪ್ಪರನ್ನ ಪದಚ್ಯುತಿಗೊಳಿಸಿ ಆ ಸೀಟ್​ನಲ್ಲಿ ಕುಳಿತುಕೊಳ್ಳೋಕೆ ಹವಣಿಸಿದ್ರೆ, ಅದು ಧರ್ಮದ್ರೋಹ ಎಸಗಿದಂತಾಗಲಿದೆ ಎಂದು ಸ್ವಾಮೀಜಿಗಳು ಎಚ್ಚರಿಕೆ ನೀಡಿದ್ದಾರೆ.

    ಒಟ್ಟಾರೆ, ಬಿಎಸ್​ವೈರನ್ನ ಅಲುಗಾಡಿಸೋಕೆ ಹೊರಟ್ರೇ ಅದೇ ಬಿಜೆಪಿ ಹೈಕಮಾಂಡ್ ಪಾಲಿಗೆ ತಿರುಗುಬಾಣವಾಗಲಿದೆ ಎಂಬ ಎಚ್ಚರಿಕೆ ಸಂದೇಶವನ್ನ ಕಾವಿಶ್ರೇಷ್ಠರು ಕಮಲ ಕಮಾಂಡ್​ಗೆ ನೀಡಿದ್ದಾರೆ. ಬಹುಶಃ ರಾಜ್ಯದ ಇತಿಹಾಸದಲ್ಲೇ ಕಂಡುಕೇಳರಿಯದಂತೆ ಯಡಿಯೂರಪ್ಪ ಪರ ಸಮಾಜ ಹಾಗೂ ನಾನಾ ಮಠಗಳು ಒಂದಾಗಿ ನಿಂತಿವೆ. ಇದು ಕೇಸರಿಯನ್ನೇ ನಂಬಿ ಅಧಿಕಾರಕ್ಕೇರಿದ ಬಿಜೆಪಿ ದೆಹಲಿ ನಾಯಕರಿಗೆ ಕಾಣಿಸದೇ ಏನಿಲ್ಲ. ಬಿಎಸ್​ವೈ ಬದಲಾವಣೆ ಯತ್ನ ಬೆನ್ನಲ್ಲೇ ಶಾಮನೂರು ಶಿವಶಂಕರಪ್ಪ ಮತ್ತೊಮ್ಮೆ ಸಿಎಂ ಪರ ಧಾವಿಸಿಬಂದಿದ್ದಾರೆ. ಈ ಬಗ್ಗೆ ನೋಡೋಣ..ಒಂದು ಸಣ್ಣ ಬ್ರೇಕ್ ನಂತರ.

    ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾಗುತ್ತಾ? ಇಲ್ಲಾ ಬಿಎಸ್ವೈರೇ ಉಖ್ಯಮಂತ್ರಿಯಾಗಿ ಕಂಟಿನ್ಯೂ ಆಗುತ್ತಾರಾ? ಸದ್ಯ ರಾಜ್ಯದಲ್ಲಿ ಎದ್ದಿರೋ ಕುತೂಹಲ.ಇದರ ಬೆನ್ನಲ್ಲೇ ಕೋಡಿ ಶ್ರೀಗಳು ನುಡಿದಿರೋ ಭವಿಷ್ಯ ನಾನಾ ತರ್ಕಗಳನ್ನ ಹುಟ್ಟುಹಾಕಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ವದಂತಿಯಿಂದ ರಾಜಕೀಯ ಅನಿಶ್ಚಿತತೆ, ಗೊಂದಲ ಏರ್ಪಟ್ಟಿದೆ. ಇದರ ಬೆನ್ನಲ್ಲೇ ಕೋಡಿ ಮಠದ ಶ್ರೀಗಳು ನುಡಿದಿರೋ ಹೊಸ ಭವಿಷ್ಯ ರಾಜಕಾರಣದ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ನವೆಂಬರ್​​ ತಿಂಗಳು ಹಾಗೂ ಸಂಕ್ರಾಂತಿ ನಡುವೆ ರಾಜಕೀಯ ತಲ್ಲಣ ಉಂಟಾಗಲಿದೆ ಎಂದು ಕೋಡಿ ಶ್ರೀಗಳು ಶಕುನ ನುಡಿದಿದ್ದಾರೆ. ಇದಲ್ಲದೇ ರಾಜ್ಯ ರಾಜಕೀಯ ಸ್ಥಿತಿ ಸುಖಾಂತ್ಯವಾಗ ಲಿದೆ ಎಂದು ಹೇಳೋ ಮುಖಾಂತರ ಶ್ರೀಗಳು ರಾಜ್ಯ ರಾಜಕಾರಣದ ಬಗ್ಗೆ ಕಾತುರತೆ ಮೂಡಿಸಿದ್ದಾರೆ.

    ಇನ್ನೊಂದೆಡೆ, ಮಠಾಧೀಶರು ಸಿಎಂ ಬಿಎಸ್​ವೈ ನಿವಾಸಕ್ಕೆ ತೆರಳಿ ಬೆಂಬಲ ನೀಡ್ತಿದ್ರೆ, ಬಿಜೆಪಿಯ ಹಲವು ಶಾಸಕರು ಕೂಡ ಬಿಎಸ್​ವೈರನ್ನ ಭೇಟಿಯಾದರು. ಸಿಎಂ ಆಗಿ ಬಿಎಸ್​ವೈ ಮುಂದುವರಿಕೆ ಬಗ್ಗೆ ಆಶಾಭಾವನೆ ವ್ಯಕ್ತಪಡಿಸಿದ ಬಿಜೆಪಿ ಶಾಸಕರು, ಸಂಸದರು ನಾಯಕತ್ವ ಬದಲಾವಣೆ ಮಾತನ್ನ ತಳ್ಳಿಹಾಕಿದರು. ರಾಜ್ಯದಲ್ಲಿ ಬಿಎಸ್​ವೈ ಬದಲಾವಣೆ ಯತ್ನ ವಿರೋಧಿಸಿ ಪ್ರತಿಭಟನೆ ಮುಂದುವರೆದಿದೆ. ಕಲಬುರಗಿಯ ಜೇವರ್ಗಿಯಲ್ಲಿ ಬಿಎಸ್​ವೈ ಬದಲಾವಣೆ ಯತ್ನ ಖಂಡಿಸಿ ವೀರಶೈವ ಮಹಾಸಭಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಇದಲ್ಲದೆ, ವೀರಶೈವ-ಲಿಂಗಾಯತ ಯುವಘಟಕ ಕೂಡ ಬಿಎಸ್ ಯಡಿಯೂರಪ್ಪ ಪರ ಅಚಲವಾಗಿ ನಿಂತಿದೆ. ಬಿಎಸ್​ವೈ ಬದಲಾವಣೆ ಯತ್ನವನ್ನ ಯುವಘಟಕ ಖಂಡಿಸಿದೆ. ಇದರ ಜತೆಗೆ ಆಂಧ್ರ ಪ್ರದೇಶದ ಲಿಂಗಾಯತ ಸಮುದಾಯ ಕೂಡ ಬಿಎಸ್​ಯಡಿಯೂರಪ್ಪ ಕಡೆ ನಿಂತಿದ್ದಾರೆ. ಇದು ಬಿಎಸ್​ವೈಗೆ ಗಡಿ ಯಾಚೆಗೂ ಬೆಂಬಲ ಇದೆ ಎಂಬುದಕ್ಕೆ ಸಾಕ್ಷಿ ಒದಗಿಸಿದೆ. ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲೂ ಗಣನೀಯ ಸಂಖ್ಯೆಯಲ್ಲಿರೋ ವೀರಶೈವ-ಲಿಂಗಾಯತರು, ಬಿಎಸ್ವೈ ಬದಲಿಸಿದ್ರೆ ಬಿಜೆಪಿ ವಿರುದ್ಧ ನಿಲ್ಲೋ ಸಂದೇಶ ರವಾನಿಸಿದ್ದಾರೆ.

    ಒಟ್ಟಾರೆ, ಸಿಎಂ ಬಿಎಸ್​ವೈ ತಮ್ಮ ಅಧಿಕಾರಾವಧಿಯಲ್ಲಿ ಎಲ್ಲಾ ವರ್ಗಗಳ ವಿಶ್ವಾಸ ಸಂಪಾದಿಸಿದ್ದಾರೆ ಎಂಬುದು ನಿರ್ವಿವಾದ. ಇದಕ್ಕೆ ಪುರಾವೆ ಎಂಬಂತೆ ಎಲ್ಲಾ ಜಾತಿ-ಮತಗಳ ಮಠಾಧೀಶರು ಬಿಎಸ್​ವೈ ಪರ ನಭೂತೋ..ನಭವಿಷ್ಯತ್ ಎಂಬುವಂತೆ ಒಗ್ಗೂಡಿ ನಿಂತಿದ್ದಾರೆ. ಇದು ಖಂಡಿತಾ ಬಿಜೆಪಿ ಹೈಕಮಾಂಡ್​​ಗೆ ಹೊಸ ಚಿಂತೆ ತಂದಿಟ್ಟಿದೆ. ಬಿಎಸ್​ವೈಗೆ ಸಿಗುತ್ತಿರೋ ಬೆಂಬಲ ಎಲ್ಲಿ ಪಕ್ಷಕ್ಕೆ ಬ್ಯೂಮರಾಂಗ್ ಆಗುತ್ತೋ? ಇದರ ರೋಷಾಗ್ನಿಗೆ ಸಿಲುಕಿ ಪಕ್ಷ ಭಸ್ಮವಾಗುತ್ತೋ ಎಂಬ ಹೊಸ ಭಯ ಕಮಲ ಕಮ್ಯಾಂಡ್​​ಅನ್ನ ಆವರಿಸಿದೆ. ಏನೇ ಆಗ್ಲಿ.. ಬಿಎಸ್ ಯಡಿಯೂರಪ್ಪಗೆ ಗುರುಬಲ ಸಿಕ್ಕಿರೋದು ಪೂರ್ಣಾವಧಿ ಅಧಿಕಾರದ ಗುರುದೆಸೆ ತಂದುಕೊಡಬಲ್ಲದೇ ಎಂಬುದು ಈಗಿನ ಪ್ರಶ್ನೆ.

    ರಾಜ್ಯದ ಬಿಜೆಪಿ ಪಾಲಿಗೆ ಯಡಿಯೂರಪ್ಪ ನಿಸ್ಸಂಶಯವಾಗಿಯೂ ರಾಜಾಹುಲಿ. ಇದು ಮೊದಲೂ ಪ್ರೂವ್ ಆಗಿತ್ತು. ಈಗಲೂ ಪ್ರೂವ್ ಆಗುತ್ತಿದೆ. ಆದ್ರೆ, ವಯಸ್ಸಿನ ನೆಪವೊಡ್ಡಿ ಯಡಿಯೂರಪ್ಪರನ್ನ ಕುರ್ಚಿಯಿಂದ ಇಳಿಸೋಕೆ ನಡೆದಿರೋ ಯತ್ನ ರಾಜ್ಯದಲ್ಲಿ ಅಗ್ನಿಜ್ವಾಲೆ ಎಬ್ಬಿಸಿದೆ. ಇಡೀ ರಾಜ್ಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಎಲ್ಲಾ ಮಠಗಳು ಒಗ್ಗೂಡಿ ಕಹಳೆ ಮೊಳಗಿಸಿವೆ. ಮುಖ್ಯಮಂತ್ರಿಯೊಬ್ಬರ ಪರ ಇಷ್ಟೊಂದು ಸಾಲಿಡ್ ಆಗಿ ಮಠಗಳು ಬೆಂಬಲ ಕೊಟ್ಟ ಉದಾಹರಣೆ ಇದೇ ಮೊದಲು ಎನ್ನಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts