More

    ಬ್ರಿಟನ್​ನ ಪಾಕಿಗಳು ಗ್ರೂಮಿಂಗ್​ ಗ್ಯಾಂಗ್ಸ್​ ಭಾಗವಾಗಿದ್ದಾರೆ: ಯುಕೆ ಸಚಿವೆ ಹೇಳಿಕೆಯಿಂದ ಪಾಕ್​ಗೆ ಮುಖಭಂಗ

    ಲಂಡನ್​: ಬ್ರಿಟನ್​ನಲ್ಲಿರುವ ಪಾಕಿಸ್ತಾನಿಗಳು ಗ್ರೂಮಿಂಗ್​ ಗ್ಯಾಂಗ್​ಗಳ ಭಾಗವಾಗಿದ್ದಾರೆ ಎಂಬ ಯುಕೆ ಗೃಹ ಮಂತ್ರಿ ಸುಯೆಲ್ಲಾ ಬ್ರೇವರ್​ಮನ್​ ಅವರ ಹೇಳಿಕೆ ಪಾಕಿಸ್ತಾನಕ್ಕೆ ಇರುಸು-ಮುರುಸು ಉಂಟು ಮಾಡಿದೆ.

    ಅಂದಹಾಗೆ ಯುನೈಟೆಡ್​ ಕಿಂಗ್​ಡಮ್​ನಲ್ಲಿ ಗ್ರೂಮಿಂಗ್ ಗ್ಯಾಂಗ್ ಅನ್ನು ದುರ್ಬಲ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಮತ್ತು ದುರುಪಯೋಗಪಡಿಸಿಕೊಳ್ಳುವ ಜನರ ಗುಂಪನ್ನು ಸೂಚಿಸುತ್ತದೆ. ಈ ಗ್ಯಾಂಗ್​ ದಬ್ಬಾಳಿಕೆ ಮತ್ತು ಬೆದರಿಕೆಯ ಪ್ರಕ್ರಿಯೆಯ ಮೂಲಕ ಹುಡುಗಿಯರನ್ನು ಟಾರ್ಗೆಟ್​ ಮಾಡುತ್ತದೆ.

    ಕಳೆದ ವಾರದ ಸ್ಕೈ ನ್ಯೂಸ್​ ಸಂದರ್ಶನದಲ್ಲಿ ಸುಯೆಲ್ಲಾ ಬ್ರೇವರ್​ಮನ್ ಈ ಹೇಳಿಕೆ ನೀಡಿದರು. ಒಂದು ಗುಂಪಿನ ಜನರು ಅದರಲ್ಲೂ ಹೆಚ್ಚಾಗಿ ಬ್ರಿಟಿಷ್​ ಪಾಕಿಸ್ತಾನಿಗಳು, ಮಕ್ಕಳು ಮತ್ತು ಯುವತಿಯರ ಲೈಂಗಿಕ ಶೋಷಣೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ಅವರ ಹೇಳಿಕೆಯನ್ನು ಪಾಕಿಸ್ತಾನದ ಅಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ.

    ಇದನ್ನೂ ಓದಿ: ಒಕ್ಕೂಟ ವ್ಯವಸ್ಥೆ ಗೌರವಿಸಿ: ಮಹಾರಾಷ್ಟ್ರ ಸರ್ಕಾರದ ಆರೋಗ್ಯ ಯೋಜನೆ ವಿವಾದ

    ನಾವು ನೋಡಿರುವ ಸ್ಪಷ್ಟವಾದ ಸಂಗತಿಯೆಂದರೆ, ದುರ್ಬಲ ಬಿಳಿ ಇಂಗ್ಲಿಷ್ ಹುಡುಗಿಯರು, ಕೆಲವೊಮ್ಮೆ ಸವಾಲಿನ ಸಂದರ್ಭಗಳಲ್ಲಿ, ಮಕ್ಕಳ ಶೋಷಣೆ ಜಾಲದಲ್ಲಿ ಕೆಲಸ ಮಾಡುವ ಬ್ರಿಟಿಷ್-ಪಾಕಿಸ್ತಾನಿ ಪುರುಷರ ಗ್ಯಾಂಗ್‌ಗಳಿಂದ ಅತ್ಯಾಚಾರ, ಮಾದಕ ದ್ರವ್ಯ ಮತ್ತು ಹಾನಿಗೊಳಗಾಗುತ್ತಾರೆ ಎಂದು ಹೇಳಿದರು.

    ಇದೇ ವೇಳೆ ಜವಾಬ್ದಾರಿಯುತ ಅಧಿಕಾರಿಗಳು ಮತ್ತು ಸಂಸ್ಥೆಗಳ ನಿಷ್ಕ್ರಿಯತೆ ಬಗ್ಗೆ ಮಾತನಾಡಿದ ಬ್ರೇವರ್‌ಮನ್, ಕೆಲವೊಮ್ಮೆ ಸರ್ಕಾರಿ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಪೊಲೀಸರು ರಾಜಕೀಯ ನಾಯಕರ ಕಾರಣದಿಂದ ಭಯದಿಂದ ಕಣ್ಣು ಮುಚ್ಚಿ ಕುಳಿತುಕೊಳ್ಳುವುದನ್ನು ನಾವು ನೋಡಿದ್ದೇವೆ. ಇದರಿಂದ ದುಷ್ಕರ್ಮಿಗಳು ಹದ್ದು ಮೀರಿ ವರ್ತಿಸುತ್ತಾರೆ. ಇದೀಗ ಸಮಯ ಬಂದಿದೆ, ಅಂತಹ ದುಷ್ಕರ್ಮಿಗಳನ್ನು ಹುಡುಕಿ ನ್ಯಾಯಾಲಯದ ಮುಂದೆ ಕರೆತರಬೇಕಾಗಿದೆ ಎಂದರು.

    ಬ್ರೇವರ್‌ಮನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪಾಕಿಸ್ತಾನದ ವಿದೇಶಾಂಗ ಕಚೇರಿ (ಎಫ್‌ಒ) ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್, ಅತ್ಯಂತ ತಪ್ಪುದಾರಿಗೆಳೆಯುವ ಹೇಳಿಕೆಯನ್ನು ಬ್ರೇವರ್​ಮನ್ ಅವರು ನೀಡಿದ್ದಾರೆ. ಇದು ಬ್ರಿಟಿಷ್-ಪಾಕಿಸ್ತಾನಿಗಳನ್ನು ವಿಭಿನ್ನವಾಗಿ ಟಾರ್ಗೆಟ್ ಮಾಡುವ ಉದ್ದೇಶವನ್ನು ಸೂಚಿಸುತ್ತದೆ ಎನ್ನುವ ಮೂಲಕ ಹೇಳಿಕೆಯನ್ನು ಖಂಡಿಸಿದರು.

    ಕೆಲವು ವ್ಯಕ್ತಿಗಳ ಅಪರಾಧ ನಡವಳಿಕೆಯನ್ನು ಇಡೀ ಸಮುದಾಯದ ಪ್ರಾತಿನಿಧ್ಯ ಎಂದು ತಪ್ಪಾಗಿ ಬ್ರಾಂಡ್ ಮಾಡಿದ್ದಾರೆ ಎಂದು ಜಹ್ರಾ ಬಲೋಚ್ ಅಸಮಾಧಾನ ಹೊರಹಾಕಿದರು.

    ಇದನ್ನೂ ಓದಿ: ಎಸ್​.ಎಲ್​.ಭೈರಪ್ಪ, ಸುಧಾಮೂರ್ತಿ ಅವರಿಂದ ಪದ್ಮಭೂಷಣ ಪುರಸ್ಕಾರ ಸ್ವೀಕಾರ: ರಾಷ್ಟ್ರಪತಿಯಿಂದ ಪ್ರಶಸ್ತಿ ಪ್ರದಾನ

    ಇದೇ ಸಂದರ್ಭದಲ್ಲಿ ಮಕ್ಕಳು ಮತ್ತು ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯದ ಹಿಂದಿರುವ ದುಷ್ಕರ್ಮಿಗಳ ವಿರುದ್ಧ ಕ್ರಮವನ್ನು ತಡೆಗಟ್ಟುವ ಮತ್ತು ಅಂತಹ ಗ್ಯಾಂಗ್‌ಗಳನ್ನು ಬೆಂಬಲಿಸುವ ರಾಜಕೀಯ ಸರಿಯಾದತೆಯನ್ನು ಖಂಡಿಸಿರುವ ಯುಕೆ ಪ್ರಧಾನಿ ರಿಷಿ ಸುನಕ್, ಇದನ್ನು ಬದಲಾಯಿಸಲು ಏನು ಬೇಕಾದರೂ ಮಾಡಲು ಸೋಮವಾರ ಪ್ರತಿಜ್ಞೆ ಮಾಡಿದ್ದಾರೆ. (ಏಜೆನ್ಸೀಸ್​)

    ಸುದೀಪ್​ ಹೇಳಿಕೆಯಿಂದ ಆಘಾತ ಹಾಗೂ ನೋವಾಗಿದೆ: ನಟ ಪ್ರಕಾಶ್​ ರಾಜ್​

    ಹೋಗುವಾಗ ಜಂಟಿ ಬರುವಾಗ ಒಂಟಿ: 10 ವರ್ಷಗಳ ಅನೈತಿಕ ಸಂಬಂಧ ದುರಂತದಲ್ಲಿ ಅಂತ್ಯ

    ಬೇಕಿರುವುದು ಬರೀ ಪದವಿಯಲ್ಲ ಪ್ರಜ್ಞಾವಂತಿಕೆ, ಪ್ರಬುದ್ಧತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts