More

    ಬ್ರಿಟನ್ ಪ್ರಿನ್ಸ್​ ಫಿಲಿಪ್ ಇನ್ನಿಲ್ಲ: ಬಕಿಂಗ್ ಹ್ಯಾಮ್ ಅರಮನೆ ಪ್ರಕಟಣೆ

    ಲಂಡನ್: ಬ್ರಿಟನ್ ಪ್ರಿನ್ಸ್ ಹಾಗೂ ರಾಣಿ ಎರಡನೇ ಎಲಿಜಬೆತ್ ಅವರ ಗಂಡ ಫಿಲಿಪ್ (Duke of Edinburgh) ಅವರು ಇಂದು ಬಕಿಂಗ್ ಹ್ಯಾಮ್​ ಅರಮನೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು.

    ಇತ್ತೀಚೆಗಷ್ಟೇ ಅವರು ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ನಂತರ ಅವರ ಆರೋಗ್ಯ ಕ್ಷೀಣಿಸಿತ್ತು. ಅವರ ಸಾವನ್ನು ಬಕಿಂಗ್ ಹ್ಯಾಮ್​ ಅರಮನೆ ಪ್ರಕಟಣೆ ಅಧಿಕೃತಗೊಳಿಸಿದೆ.

    ಬ್ರಿಟಿಷ್ ಅರಸೊತ್ತಿಗೆಯನ್ನು ಅತಿಹೆಚ್ಚು ವರ್ಷ ಆಳಿದ ಕೀರ್ತಿ ಪ್ರಿನ್ಸ್ ಫಿಲಿಪ್ ಅವರಿಗೆ ಸಲ್ಲುತ್ತದೆ. ಅವರು 2017 ರಲ್ಲಿ ಸಾರ್ವಜನಿಕ ಜೀವನಕ್ಕೆ ವಿದಾಯ ಹೇಳಿದ್ದರು. ಜೂನ್ 10 ಕ್ಕೆ ಅವರು ನೂರು ವರ್ಷಗಳನ್ನು ಪೂರೈಸಲಿದ್ದರು. ಇನ್ನು ಫಿಲಿಪ್ ನಿಧನಕ್ಕೆ ರಾಣಿ ಎಲಿಜಬೆತ್ ಅವರು ಕಂಬನಿ ಮಿಡಿದಿದ್ದು, ಬ್ರಿಟನ್​ನಲ್ಲಿ ಮೂರು ದಿನ ಶೋಕಾಚರಣೆಗೆ ಕರೆ ನೀಡಲಾಗಿದೆ.

    ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರನ್ನು ಫಿಲಿಪ್ ಅವರು 1947 ರಲ್ಲಿ ವಿವಾಹವಾಗಿದ್ದರು. ಅವರು 4 ಮಕ್ಕಳನ್ನು, 8 ಮೊಮ್ಮಕ್ಕಳನ್ನು ಹಾಗೂ 9 ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.

    ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ: ಪೈಲಟ್​ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರು

    ಬಟ್ಟೆಯನ್ನೇ ಧರಿಸದ ನಿವಾಸಿಗಳು: ಈ ಬೆತ್ತಲೆ ಗ್ರಾಮದ ರಹಸ್ಯ ತಿಳಿದ್ರೆ ಹುಬ್ಬೇರಿಸ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts