More

    ಅಪೌಷ್ಟಿಕ ಮಕ್ಕಳ ಆರೈಕೆ ಕೇಂದ್ರಕ್ಕೆ ಕರೆತನ್ನಿ: ತಹಸೀಲ್ದಾರ್ ಎನ್.ಆರ್. ಮಂಜುನಾಥಸ್ವಾಮಿ ಸಲಹೆ

    ಸಿರಗುಪ್ಪ: ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮುಂದಾಗಿದ್ದು, ಪಾಲಕರು ಅಪೌಷ್ಟಿಕ ಮಕ್ಕಳನ್ನು ಆರೈಕೆ ಕೇಂದ್ರಕ್ಕೆ ಕರೆತಂದು ಪೌಷ್ಟಿಕರನ್ನಾಗಿ ಮಾಡಲು ಸಹಕರಿಸಬೇಕು ಎಂದು ತಹಸೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ ಹೇಳಿದರು.

    14 ದಿನಗಳ ಶಿಬಿರವನ್ನು ಪರಿಪೂರ್ಣಗೊಳಿಸಬೇಕು

    ನಗರದ ಪ್ರೌಢಶಾಲಾ ಮೈದಾನದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ನಂ.1 ವಸತಿ ನಿಯಲಯದಲ್ಲಿ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮತ್ತು ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ ಮತ್ತು ಶಿಶು ಮಕ್ಕಳ ವೈದ್ಯರ ಸಂಘದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಪೌಷ್ಟಿಕ ಮಕ್ಕಳ ಆರೈಕೆ ಬಾಲಚೈತನ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರೈಕೆ ಕೇಂದ್ರದಲ್ಲಿ ನುರಿತ ವೈದ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆರೊಂದಿಗೆ ಸಹಕರಿಸಿ 14 ದಿನಗಳ ಶಿಬಿರವನ್ನು ಪರಿಪೂರ್ಣಗೊಳಿಸಬೇಕು ಎಂದು ಪಾಲಕಲರಲ್ಲಿ ಮನವಿ ಮಾಡಿದರು.

    84 ಗ್ರಾಮಗಳಲ್ಲಿ 64 ಮಕ್ಕಳನ್ನು ಗುರುತಿಸಲಾಗಿದೆ

    ಸಿಡಿಪಿಒ ಎ.ಕೆ.ಜಲಾಲಪ್ಪ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಕಾರದಿಂದ 0-6 ವರ್ಷದೊಳಗಿನ ಅಪೌಷ್ಟಿಕ ಮಕ್ಕಳನ್ನು ಪತ್ತೆ ಮಾಡಲಾಗಿದೆ. ಇಂತಹ ಮಕ್ಕಳ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಲಾಗುವುದು. ತಾಲೂಕಿನ 84 ಗ್ರಾಮಗಳಲ್ಲಿ ಅಪೌಷ್ಟಿಕತೆಯಿಂದ ನರಳುವ 64 ಮಕ್ಕಳನ್ನು ಗುರುತಿಸಲಾಗಿದೆ. ಮಗುವಿನ ಜತೆಯಲ್ಲಿ ತಾಯಿಯನ್ನೂ ಕರೆತಂದು ನಿತ್ಯ ಅವರಿಗೂ ಮಕ್ಕಳ ಪೌಷ್ಟಿಕತೆ ಹೆಚ್ಚಳಕ್ಕೆ ಅಗತ್ಯ ಇರುವ ಮಾಹಿತಿ ನೀಡಲಾಗುವುದು. ಅಲ್ಲದೆ ಅಪೌಷ್ಟಿಕತೆ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಹಕರಿಸಬೇಕು ಎಂದು ಕೋರಿದರು.


    ಇದನ್ನೂ ಓದಿ:21ರಿಂದ ಆರೋಗ್ಯವಂತ ಮಗು ಸ್ಪರ್ಧೆ ; ಸ್ವಸ್ಥ ಬಾಲಕ, ಬಾಲಕಿ ಅಭಿಯಾನದ ಹಿನ್ನೆಲೆ ; ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಆರೈಕೆಯ ಉದ್ದೇಶ

    ಜಿಲ್ಲಾ ನೋಡಲ್ ಅಧಿಕಾರಿ ಮರಿಯಾಂಬೀ, ತಾಪಂ ಇಒ ಎಂ.ಬಸಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಈರಣ್ಣ, ತಾಲೂಕು ಆಸ್ಪತ್ರೆ ಆಡಳಿತಾಕಾರಿ ರಘುನಾಥ, ಆರೋಗ್ಯ ಇಲಾಖೆಯ ಕ್ಷೇತ್ರ ಕಾರ್ಯಕ್ರಮ ವ್ಯವಸ್ಥಾಪಕ ಪ್ರಹ್ಲಾದ್ ಡಿ., ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ರಾಜೇಶ್ವರಿ, ನಿಲಯ ಪಾಲಕರು, ಜಿಲ್ಲಾ ಆಸ್ಪತ್ರೆಯ ಮಕ್ಕಳ ವೈದ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts