More

    ಕೂಸಿನಮನೆಗೆ ಮಕ್ಕಳನ್ನು ಕರೆತನ್ನಿ

    ಎನ್.ಆರ್.ಪುರ: ಸರ್ಕಾರದ ಆದೇಶದಂತೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕುಟುಂಬದವರ 3 ವರ್ಷದ ಒಳಗಿನ ಮಕ್ಕಳ ಆರೈಕೆಗಾಗಿ ಕೂಸಿನಮನೆ ಪ್ರಾರಂಭಿಸಲಾಗಿದೆ ಎಂದು ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾಬೆನ್ನಿ ತಿಳಿಸಿದರು.

    ನಾಗಲಾಪುರ ಗ್ರಾಮದ ಮುಂಡೊಳ್ಳಿಯಲ್ಲಿ ಕೂಸಿನಮನೆ ಉದ್ಘಾಟಿಸಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕುಟುಂಬದವರು 3 ವರ್ಷದ ಒಳಗಿನ ಮಕ್ಕಳನ್ನು ಕೂಸಿನ ಮನೆಯಲ್ಲಿರಿಸಿ ಕೆಲಸಕ್ಕೆ ಹೋಗಬಹುದು. ಈ ಮಕ್ಕಳನ್ನು ಆರೈಕೆ ಮಾಡಲು ನಾಲ್ಕು ಕಾರ್ಯಕರ್ತರನ್ನು ನೇಮಕ ಮಾಡಿದ್ದೇವೆ. 100 ದಿನಕ್ಕೆ ಇಬ್ಬರಂತೆ ಆರೈಕೆ ಕಾರ್ಯಕರ್ತೆಯರು ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಗ್ರಾಪಂನಿಂದ ಪೌಷ್ಟಿಕ ಆಹಾರ ನೀಡುತ್ತೇವೆ ಎಂದು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಮುಖ್ಯಸ್ಥೆ ದಾಕ್ಷಾಯಿಣಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರು ಮಕ್ಕಳನ್ನು ಬಿಸಿಲಿನಲ್ಲಿ ಕೂರಿಸಿ ಕೆಲಸ ಮಾಡುತ್ತಾರೆ. ಇದರಿಂದ ಮಕ್ಕಳ ಆರೋಗ್ಯ ಹಾಳಾಗುತ್ತದೆ. ಕೂಸಿನಮನೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದರಿಂದ ಮಕ್ಕಳ ಆರೋಗ್ಯವೂ ಉತ್ತಮವಾಗಲಿದೆ. ಗ್ರಾಪಂ ಸದಸ್ಯರು, ಆರೈಕೆ ಕಾರ್ಯಕರ್ತೆಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಕೂಸಿನ ಮನೆಗೆ ಮಕ್ಕಳನ್ನು ಕರೆತರಲು ಪಾಲಕರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.ಗ್ರಾಪಂ ಸದಸ್ಯರಾದ ಸುಮಿತ್ರಾ, ರಮೇಶ್, ತಾಪಂ ಎನ್‌ಆರ್‌ಎಲ್‌ಎಂ ಒಕ್ಕೂಟದ ಸಂಯೋಜಕ ಸುಬ್ರಹ್ಮಣ್ಯ, ಪಿಡಿಒ ಪ್ರೇಮಕುಮಾರ್, ಕಾರ್ಯದರ್ಶಿ ಶ್ರೀದೇವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts