More

    ಮುಳುಗುವ ಹಂತಕ್ಕೆ ಹೆಬ್ಬಾಳೆ ಸೇತುವೆ, ಹೊರನಾಡು -ಕಳಸ ಸಂಪರ್ಕ ಕಡಿತ ಭೀತಿ

    ಕಳಸ: ಕಳಸ ಹೋಬಳಿಯಾದ್ಯಂತ ಶುಕ್ರವಾರವೂ ಮಳೆ ಮುಂದುವರಿದಿದ್ದು ಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ಕಳೆದ ಮೂರು ದಿನಗಳಿಂದ ಸತತ ಮಳೆಯಾಗುತ್ತಿರುವುದರಿಂದ ಭದ್ರಾ ನದಿಯ ನೀರಿನ ಮಟ್ಟ ಹೆಚ್ಚಾಗಿ ಕಳಸ-ಹೊರನಾಡು ನಡುವಿನ ಹೆಬ್ಬಾಳೆ ಸೇತುವೆ ಮುಳುಗುವ ಹಂತಕ್ಕೆ ತಲುಪಿದೆ. ಸೋಮಾವತಿ ನದಿಯೂ ಮೈದುಂಬಿ ಹರಿಯುತ್ತಿದೆ.

    ಮಳೆಯಿಂದ ಕಳೆದ ವರ್ಷ ಭೂಕುಸಿತವಾದ ಪ್ರದೇಶಗಳಲ್ಲಿ ಮತ್ತೆ ಧರೆ ಕುಸಿಯಲು ಪ್ರಾರಂಭವಾಗಿದೆ. ನದಿ ಪ್ರದೇಶದ ತಗ್ಗು ಪ್ರದೇಶಗಳು ನೀರಿನಿಂದ ಜಲಾವೃತಗೊಂಡಿವೆ. ಕಳಸ ಕೆ.ಎಂ.ರಸ್ತೆಯ ಬಿಳಗೋಡು ಸಮೀಪ ಗುಡ್ಡವೊಂದು ಜಾರುತ್ತಿದ್ದು ಮಳೆ ಹೆಚ್ಚಾದರೆ ಕಳಸ-ಕುದುರೆಮುಖ ರಸ್ತೆ ಕಡಿತವಾಗುವ ಆತಂಕ ಎದುರಾಗಿದೆ. ಚನ್ನಡ್ಲು ಭಾಗದಲ್ಲಿ ರಸ್ತೆಗಳು ಕುಸಿಯಲಾರಂಭಿಸಿವೆ. ಕಳೆದ ವರ್ಷ ಭೂ ಕುಸಿತವಾದ ಸ್ಥಳಗಳಲ್ಲಿ ನೀರು ಸರಿಯಾಗಿ ಹರಿದುಹೋಗಲು ಚರಂಡಿ ಮಾಡದಿರುವುದರಿಂದ ಈ ಬಾರಿ ಮತ್ತಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts