More

    ವೈಭವದ ಸಂಸೆ ಶ್ರೀಪದ್ಮಾವತಿ ದೇವಿ ರಥೋತ್ಸವ

    ಕಳಸ: ತಾಲೂಕಿನ ಸಂಸೆಯ ಶ್ರೀ ಪದ್ಮಾವತಿ ಅಮ್ಮನವರ ಜಾತ್ರಾಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
    ಜಾತ್ರಾಮಹೋತ್ಸವ ಅಂಗವಾಗಿ ಕಳೆದ ಐದು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು.
    ಮಂಗಳವಾರ ಬೆಳಗ್ಗೆ ಭಗವಾನ್ ಶ್ರೀಶಾಂತಿನಾಥ ಸ್ವಾಮಿಗೆ ಕ್ಷೀರಾಭಿಷೇಕ, ನಿತ್ಯ ನಿಧಿ ಸಹಿತ ಗ್ರಾಮ ಬಲಿ, ಬಸದಿಯಲ್ಲಿ ಭಗವಾನ್ ಶಾಂತಿನಾಥ ಸ್ವಾಮಿಗೆ ಕ್ಷೀರಾಭಿಷೇಕ ಇನ್ನಿತರೆ ಪೂಜಾ ಕಾರ್ಯಗಳನ್ನು ನಡೆಸಲಾಯಿತು.
    ಸಂಸೆ ಸುತ್ತಮುತ್ತಲಿನ ಕಳಸ, ಕುದುರೆಮುಖ, ಜಾಂಬ್ಳೆ, ನೆಲ್ಲಿನೀಡು, ಮುಳ್ಳೋಡಿ, ಹೊರನಾಡು ಮುಂತಾದ ಗ್ರಾಮಗಳ ಸಾವಿರಾರು ಜನರು ಶ್ರೀದೇವರ ದರ್ಶನ ಪಡೆದು ಗಂಧ ಪ್ರಸಾದವನ್ನು ಸ್ವೀಕರಿಸಿದರು. ಜಾತ್ರೆ ಅಂಗವಾಗಿ ಊರಿಗೆ ಊರನ್ನು ಸ್ವಚ್ಚಗೊಳಿಸಿ ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ದೇವಾಲಯ ವಿದ್ಯುತ್ ದ್ವೀಪಗಳಿಂದ ಶೃಂಗಾರಗೊಂಡು ಭಕ್ತರನ್ನು ಕೈಬೀಸಿ ಕರೆಯುತ್ತಿತ್ತು.
    ಸಿದ್ದಪಡಿಸಿದ ಭವ್ಯ ಬ್ರಹ್ಮರಥದಲ್ಲಿ ಶಾಂತಿನಾಥ ತೀರ್ಥಂಕರರ ಮತ್ತು ಶ್ರೀವರಮಹಾಲಕ್ಷ್ಮೀ ದೇವಿಯು ವಿರಾಜಮಾನರಾಗುವುದನ್ನು ಕಣ್ತುಂಬಿಸಿಕೊಳ್ಳಲು ಭಕ್ತರು ಕಾತುರದಿಂದ ಕಾಯುತ್ತಿದ್ದರು. ಮಧ್ಯಾಹ್ನ ಮಂಗಳ ವಾದ್ಯಗಳು, ಛತ್ರಿ, ಚಾಮರಗಳೊಂದಿಗೆ ಹೂವಿನ ಅಲಂಕಾರದಿಂದ ಸಿಂಗರಿಸಿದ ಶಾಂತಿನಾಥ ತೀರ್ಥಂಕರರು ಮತ್ತು ಶ್ರೀ ವರಮಹಾಲಕ್ಷ್ಮೀ ದೇವರ ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ಬರಲಾಯಿತು. ಈ ವೇಳೆ ನೆರೆದ ಸಾವಿರಾರು ಕೃಷಿಕರ ಮನೆ ಮನಗಳಲ್ಲಿ ಸಂಭ್ರಮ ಮನೆಮಾಡಿತ್ತು.
    ಶಾಂತಿನಾಥ ತೀರ್ಥಂಕರರು ಮತ್ತು ಶ್ರೀ ವರಮಹಾಲಕ್ಷ್ಮೀ ಮೂರ್ತಿಯನ್ನು ಹೊತ್ತ ರಥದ ಉತ್ಸವ ನಡೆಯಿತು. ನಂತರ ಅಲಂಕೃತಗೊಂಡ ಭವ್ಯ ಬ್ರಹ್ಮ ರಥವನ್ನು ಶ್ವೇತ ವಸಧಾರಿ ಭಕ್ತಾದಿಗಳು ಎಳೆದರು. ರಾತ್ರಿ ಮಾತೃ ಸನ್ನಿಧಾನಕ್ಕೆ ಪದ್ಮಾವತಿ ಅಮ್ಮನವರ ಬಿಜಯ, ಮಲ್ಲೇಶ್ವರದಿಂದ ಧರ್ಮ ದೇವತೆಗಳ ಭಂಡಾರ ಹಿತ್ತಲಮಕ್ಕಿಗೆ ಬಂದು ಅಮ್ಮನವರನ್ನು ಎದುರುಗೊಂಡು ಆಕರ್ಷಿತರಾಗಿ ಮೆರವಣಿಗೆಯಲ್ಲಿ ಅರಮನೆ ಚಾವಡಿಗೆ ಬರಲಾಯಿತು. ಚಾವಡಿಯಿಂದ ದೇವಸ್ಥಾನಕ್ಕೆ ರಾಜಬೀದಿಯಲ್ಲಿ ಲಾಲಿಕೆ ಜೋಡುಪಲ್ಲಕಿ ಉತ್ಸವ ನಡೆದು ನಂತರ ರಾಜಬೀದಿಯಲ್ಲಿ ಬ್ರಹ್ಮರಥೋತ್ಸವ ನಡೆಯಿತು.
    ಗ್ರಾಮ ಪ್ರದಕ್ಷಿಣೆಗೆ ತೆರಳಿದ ದೇವರು ಜಾತಿ, ಮತ, ವರ್ಗ ಭೇದವಿಲ್ಲದೆ ಬ್ರಹ್ಮರಥದಲ್ಲಿಯೇ ಕುಳಿತು, ಭಕ್ತಿಯಿಂದ ಜೋಡಿಸಿ ನೀಡುವ ನಮಸ್ಕಾರ ಹಾಗೂ ಮನೆ ಬಾಗಿಲಲ್ಲಿ ನೀಡುವ ಹಣ್ಣು, ಕಾಯಿ, ಲ ಪುಷ್ಪಗಳನ್ನು ಸ್ವೀಕರಿಸುತ್ತಾ ಭಕ್ತರ ಮನದಾಳದಲ್ಲಿರುವ ಸಂಕಷ್ಟಗಳನ್ನು ನಿವಾರಿಸುತ್ತಾ, ಗ್ರಾಮದುದ್ದಕ್ಕೂ ಸಾಗಿ ಮರಳಿ ದೇಗುಲವನ್ನು ಸೇರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts