More

    ವರನ ಸ್ನೇಹಿತರಿಂದ ವಧುವಿನ ಕೈಯಲ್ಲಿ ‘ಒಪ್ಪಂದ’ಕ್ಕೆ ಸಹಿ! ಏನಿದೆ ಆ ಒಪ್ಪಂದದಲ್ಲಿ?

    ಕೇರಳ: ಭಾರತದ ಹಲವು ರಾಜ್ಯಗಳಲ್ಲಿ ಮದುವೆಯ ಕಾಲ ಶುರುವಾಗಿದೆ, ಮದುವೆ ನಿಶ್ಚಯವಾದವರು ಈಗಾಗಲೆ ಮದುವೆ ತಯಾರಿಗಳನ್ನು ಶುರು ಮಾಡಿಕೊಂಡಿದ್ದಾರೆ. ಆದರೆ ಇಲ್ಲೊಂದು ಮದುವೆಯಲ್ಲಿ ವರನ ಗೆಳೆಯರು ಒಂದು ಒಪ್ಪಂದ ಪತ್ರವನ್ನು ತಯಾರಿಸಿದ್ದು ಜಾಲತಾಣಗಳಲ್ಲಿ ಆ ‘ಮದುವೆ ಒಪ್ಪಂದ’ದ ಪತ್ರ ಈಗ ವೈರಲ್ ಆಗಿದೆ. ಅದು ಸುಮ್ಮನೆ ಬಿಳಿ ಕಾಗದದ ಮೇಲೆ ಬರೆದ ‘ಒಪ್ಪಂದ ಪತ್ರ’ ಅಲ್ಲ, 50 ರೂ. ಸ್ಟಾಂಪ್ ಪೇಪರ್​​ನಲ್ಲಿ ಮುದ್ರಿತವಾಗಿದೆ!

    ‘ಮದುವೆ ಆದ್ಮೇಲೆ ನೀನು ಸಿಗೋದಿಲ್ಲ ಕಣಯ್ಯಾ…’ ಎಂಬ ಮಾತನ್ನು ಮದುವೆಯಾಗುವ ಹುಡುಗರಿಗೆ ಆತನ ಸ್ನೇಹಿತರು ಹೇಳುವುದನ್ನು ನೀವು ಕೇಳಿಯೇ ಇರುತ್ತೀರಿ. ಹಾಗಾಗದೆ ಇರಲಿ ಅಂತ ಮುಂಜಾಗ್ರತೆ ವಹಿಸಿರುವ ಸ್ನೇಹಿತರು ತಯಾರಿಸಿದ ಒಪ್ಪಂದ ಪತ್ರ ಇದು. ಈ ‘ವಿವಾಹ ಒಪ್ಪಂದ’ಕ್ಕೆ ಮದುವೆಯ ದಿನ ವಧು ಸಹಿ ಮಾಡಬೇಕಿತ್ತು.

    ವಧುವಿನ ಹೆಸರು ಅರ್ಚನಾ. ವರನ ಹೆಸರು ರಘು. “ಮದುವೆ ಆದ ನಂತರವೂ ರಾತ್ರಿ ೯ ಗಂಟೆವರೆಗೆ ಸ್ನೇಹಿತರ ಜತೆ ಕಾಲ ಕಳೆಯಲು ರಘುಗೆ ಅವಕಾಶ ಇರಬೇಕು. ಆ ಸಮಯದಲ್ಲಿ ರಘುಗೆ ಅರ್ಚನಾ ಪದೇಪದೇ ಫೋನ್ ಮಾಡುವಂತಿಲ್ಲ. ಬೇಗ ಮನೆಗೆ ಬಾ ಅಂತ ಒತ್ತಾಯ ಮಾಡುವಂತಿಲ್ಲ”. ಈ ಸ್ಟಾಂಪ್ ಪೇಪ​ರನ್ನು 2022ರ ನವೆಂಬರ್ 5 ರಂದು ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ವಧುವಿನ ಕೈಯಲ್ಲಿ ಸಹಿ ಮಾಡಿಸಲಾಯಿತು.

    ‘ಮದುವೆಯ ನಂತರವೂ ನನ್ನ ಗಂಡ ಎಸ್​ ಕೆಡಿಆರ್ ರಘು ತನ್ನ ಸ್ನೇಹಿತರ ಜತೆ ರಾತ್ರಿ 9 ಗಂಟೆಯವರೆಗೆ ಕಾಲ ಕಳೆಯಲು ಅನುಮತಿಯನ್ನು ನೀಡುತ್ತೇನೆ ಮತ್ತು ಆ ಸಮಯದಲ್ಲಿ ಸತತವಾಗಿ ಫೋನ್ ಕಾಲ್ ಮಾಡಿ ತೊಂದರೆ ನೀಡುವುದಿಲ್ಲ ಎಂದು ಭರವಸೆ ಕೊಡುತ್ತೇನೆ.’ ಅಂತ ಅರ್ಚನಾ ಒಪ್ಪಿಕೊಂಡು ಸಹಿ ಮಾಡಿದ್ದಾಳೆ. ಈ ಜೋಡಿ ಮೂಲತಃ ಕೇರಳದವರು. ನವೆಂಬರ್ 5ರಂದು ಪಾಲಕ್ಕಾಡ್​​ನಲ್ಲಿ ಮದುವೆಯಾದರು. ಆ ಸಂದರ್ಭದಲ್ಲಿ ತಮಾಷೆಗಾಗಿ ಸ್ನೇಹಿತರು ಮಾಡಿಸಿರುವ ಈ ‘ಒಪ್ಪಂದ ಪತ್ರ’ ಈಗ ಭಾರೀ ವೈರಲ್ ಆಗಿದೆ. – ಏಜೆನ್ಸೀಸ್

    ವರ್ಷಕ್ಕೆ ನಾಲ್ಕು ಚಿತ್ರಗಳಲ್ಲಿ ನಟಿಸುವುದರಲ್ಲಿ ತಪ್ಪೇನಿದೆ? ಅಕ್ಷಯ್​ ಕುಮಾರ್​ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts