More

    ಬ್ರಹ್ಮೇರಿ ಕೊರಗರ ಕಾಲನಿಯಲ್ಲಿ ಭರವಸೆಯ ಬೆಳಕು

    ಕುಂದಾಪುರ: ಹಕ್ಲಾಡಿ ಗ್ರಾಮ ಬ್ರಹ್ಮೇರಿ ಕೊರಗ ಕಾಲನಿ ನಿವಾಸಿಗಳಲ್ಲಿ ಭರವಸೆಯ ಬೆಳಕು ಮೂಡುತ್ತಿದ್ದು, ಸೋಮವಾರ ಮಹಾತ್ಮ ಜ್ಯೋತಿ ಬಾಪುಲೆ ಯುವ ವೇದಿಕೆ ಪದಾಧಿಕಾರಿಗಳು ಭೇಟಿ ನೀಡಿ ಕಾಲನಿ ವಾಸಿಗಳ ಜತೆ ಮೂಲ ಸೌಲಭ್ಯದ ಕುರಿತು ವಿಸ್ತೃತ ಚರ್ಚೆ ನಡೆಸಿದರು.

    ಅರ್ಧಕ್ಕೆ ನಿಂತ ಮನೆ ಕಾಮಗಾರಿ ಆರಂಭವಾಗಿದ್ದು, ಇನ್ನೊಂದು ತಿಂಗಳಲ್ಲಿ ಸಂಪೂರ್ಣವಾಗಲಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಮತ್ತೊಂದು ಕೊಳವೆ ಬಾವಿ, ಈಗಿರುವ ಕೊಳವೆ ಬಾವಿ ಕೇಸಿಂಗ್ ಪೈಪ್ ಬದಲಾಯಿಸಿ, ಮೋಟಾರ್ ಅಳವಡಿಸಿ ಕುಡಿಯುವ ನೀರು ಪೂರೈಕೆ ಬಗ್ಗೆ ಸಮಿತಿ ಪದಾಧಿಕಾರಿಗಳ ಗಮನಕ್ಕೆ ತಂದರು.

    ಕಾಡು ದಾರಿಯಾಗಿದ್ದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ದಾನಿಗಳ ಹಾಗೂ ಇಲಾಖೆ ಅಧಿಕಾರಿಗಳಲ್ಲಿ ವಾಹನದ ವ್ಯವಸ್ಥೆ ಮಾಡುವಂತೆ ಪ್ರಯತ್ನ ಮಾಡಲಾಗುತ್ತದೆ ಎಂದು ಸಮಿತಿ ಸದಸ್ಯರು ಹೇಳಿದರು.
    ಕಾಲನಿಯಲ್ಲಿರುವ ವಿಶೇಷ ಬಾಲಕನಿಗೆ ಚಿಕಿತ್ಸೆ ಬಗ್ಗೆ ಇಲಾಖೆ ಗಮನ ಸೆಳೆಯಲಾಗುತ್ತದೆ. ಐಟಿಡಿಪಿ ಆರ್ಥಿಕ ಸಹಕಾರದಲ್ಲಿ ಚಿಕಿತ್ಸೆ ಕೊಡಿಸಲು ಅಧಿಕಾರಿಗಳು ಒಪ್ಪಿದ್ದು, ಉನ್ನತ ಚಿಕಿತ್ಸೆ ಸಿಕ್ಕರೆ ಬಾಲಕ ಎಲ್ಲರಂತೆ ಆಗುವ ಸಾಧ್ಯತೆ ಇದೆ ಎಂದು ಹೇಳಿದರು.

    ಬೈಂದೂರು ಮಹಾತ್ಮ ಜ್ಯೋತಿ ಬಾಪುಲೆ ಯುವ ವೇದಿಕೆ ಗೌರವಾಧ್ಯಕ್ಷ ಲಕ್ಷ್ಮಣ್, ಅಧ್ಯಕ್ಷ ಗಿರೀಶ್, ಸಮಿತಿ ಪದಾಧಿಕಾರಿಗಳಾದ ಪ್ರತಾಹ, ಶಶಿಧರ ಮಹಿಳಾ ಸಂಘಟನೆ ನಾಗಮ್ಮ ಇದ್ದರು.

    ಕೃಷಿ ಹಿನ್ನೆಲೆಯಲ್ಲಿ ಇನ್ನೊಂದು ಕೊಳವೆ ಬಾವಿ ಕಾಲನಿಗೆ ನೀಡಿದರೆ ಇರುವ ಜಾಗದಲ್ಲಿ ಮತ್ತಷ್ಟು ಕೃಷಿ ಹಾಗೂ ನಾಟಿ ಕೋಳಿ ಫಾರ್ಮ್ ಮಾಡುವ ಇರಾದೆ ಇದೆ. ಅರ್ಧಕ್ಕೆ ನಿಂತ ತೆರೆದ ಬಾವಿ ಇನ್ನಷ್ಟು ಆಳ ಮಾಡಿಯಾದರೂ ಅಥವಾ ಕೊಳವೆ ಬಾವಿ ಮೂಲಕವಾದರೂ ನೀರು ಸಿಗುವಂತಾದರೆ ಕಾಲನಿ ವಾಸಿಗಳು ಕೃಷಿಯಲ್ಲಿ ತೊಡಗಿಕೊಳ್ಳಲು ಸಾಧ್ಯ.
    -ಶೇಖರ, ಕಾಲನಿ ನಿವಾಸಿ, ಬ್ರಹ್ಮೇರಿ

    ಬ್ರಹ್ಮೇರಿ ಕೊರಗ ಕಾಲನಿ ಸಮಸ್ಯೆ ಕುರಿತು ಜಿಲ್ಲಾಡಳಿತ ಗಮನ ಸೆಳೆಯಲು ವಿಜಯವಾಣಿ ಪತ್ರಿಕೆ ಸಫಲವಾಗಿದ್ದು, ವರದಿ ನಂತರ ಅಧಿಕಾರಿಗಳು ಭೇಟಿ ನೀಡಿ ಮೂಲ ಸಮಸ್ಯೆಗೆ ಸ್ಪಂದಿಸಿರುವುದು ಧನಾತ್ಮಕ ಬೆಳವಣಿಗೆ. ಹತ್ತು ದಿನದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರದ ಮೂಲಕ ಕಾಲನಿ ದೊಡ್ಡ ಸಮಸ್ಯೆ ಪರಿಹಾರವಾಗಲಿದೆ. ವಿಶೇಷ ಬಾಲಕನಿಗೆ ಚಿಕಿತ್ಸೆ ಕೊಡುವ ಬಗ್ಗೆ ಐಟಿಡಿಪಿ ಅಧಿಕಾರಿಗಳ ಸಂಪರ್ಕಿಸಿ, ಬಾಲಕ ಎಲ್ಲರಂತೆ ಆಗುವಂತೆ ಮಾಡುವ ಎಲ್ಲ ಪ್ರಯತ್ನ ಮಾಡಲಾಗುತ್ತದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಮತ್ತೊಂದು ಕೊಳವೆ ಬಾವಿ ಹಾಗೂ ಇನ್ನೊಂದು ಮನೆಗೂ ಪ್ರಯತ್ನ ಮಾಡಲಾಗುತ್ತದೆ.
    -ಲಕ್ಷ್ಮಣ್, ಗೌರವ ಅಧ್ಯಕ್ಷ, ಮಹಾತ್ಮ ಜ್ಯೋತಿ ಬಾಪುಲೆ ಯುವ ವೇದಿಕೆ ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts