More

    ಒತ್ತಡ ನಿರ್ವಹಣೆಗೆ ಭ್ರಾಮರಿ ಪ್ರಾಣಾಯಾಮ

    ಒತ್ತಡ ನಿರ್ವಹಣೆಗೆ ಭ್ರಾಮರಿ ಪ್ರಾಣಾಯಾಮ

    * ಸೈಕ್ಲಿಂಗ್ ವ್ಯಾಯಾಮದ ಬಗ್ಗೆ ತಿಳಿಸಿ.

    | ಪ್ರಸನ್ನ ಮೈಸೂರು, 30 ವರ್ಷ

    ಸೈಕ್ಲಿಂಗ್ ವ್ಯಾಯಾಮ: ಇದು ಮಲಗಿಕೊಂಡು ಅಭ್ಯಾಸ ಮಾಡುವ, ಸೊಂಟಕ್ಕೆ, ಕಾಲುಗಳಿಗೆ ಬಹಳ ಪರಿಣಾಮಕಾರಿಯಾದ ವ್ಯಾಯಾಮವಾಗಿದೆ. ಈ ವ್ಯಾಯಾಮವು ಸೈಕಲ್​ನಲ್ಲಿ ಪೆಡಲ್ ತುಳಿಯುವ ರೀತಿಯನ್ನು ಹೋಲುತ್ತದೆ.

    ವಿಧಾನ: ಜಮಖಾನ ಹಾಸಿದ ನೆಲದ ಮೇಲೆ ವಿಶ್ರಾಂತಿಯಲ್ಲಿ ಮಲಗಿ. ಅನಂತರ ಕಾಲುಗಳು ಜೋಡಣೆ ಕೈಗಳು ತೊಡೆಯ ಪಕ್ಕದಲ್ಲಿ ಒತ್ತಿಡಿ. ಆಮೇಲೆ ಎರಡೂ ಕಾಲುಗಳನ್ನು ನೆಲದಿಂದ ಸ್ವಲ್ಪ ಮೇಲಕ್ಕೆತ್ತಿ ಸೈಕಲನ್ನು ತುಳಿಯುವ ರೀತಿ ಚಲನೆ ಮಾಡಿ (ಕ್ಲಾಸ್​ವೈಸ್ ಆಂಟಿಕ್ಲಾಸ್ ವೈಸ್). ಈ ರೀತಿ ಸ್ವಲ್ಪ ಹೊತ್ತು ಸಾಮಾನ್ಯ ಉಸಿರಾಟದೊಂದಿಗೆ ಅಭ್ಯಾಸ ಮಾಡಿ. ಅನಂತರ ತುಸು ವಿಶ್ರಾಂತಿ. ಪ್ರತಿದಿನವೂ ಈ ರೀತಿ ಮೂರರಿಂದ ಆರು ಬಾರಿ ಅಭ್ಯಾಸ ಮಾಡಿ.

    ಪ್ರಯೋಜನ: ಕಾಲುಗಳು ಉತ್ತಮವಾಗಿ ಚಲನೆಗೊಂಡಾಗ ತೊಡೆಗಳ ಅನಗತ್ಯ ಕೊಬ್ಬು ಕರಗುತ್ತದೆ. ಕಾಲಿನ ನರಗಳ ದೋಷ ನಿಯಂತ್ರಣ. ಕಾಲಿನ ಆಯಾಸ ಪರಿಹಾರ. ಕಾಲುಗಳು ಗಟ್ಟಿಮುಟ್ಟಾಗುತ್ತವೆ. ಸೊಂಟವು ಬಲಿಷ್ಠವಾಗುತ್ತದೆ. ಮುಂದೆ ಕಾಲಿಗೆ ಸಂಬಂಧಪಟ್ಟ ಯೋಗಾಸನಗಳನ್ನು ಅಭ್ಯಾಸ ಮಾಡಲು ಸುಲಭವಾಗುತ್ತದೆ. ಅಧಿಕ ತೂಕದ ವ್ಯಕ್ತಿಗಳಿಗೆ ನಿಂತುಕೊಂಡು ಒಮ್ಮೆಗೆ ವ್ಯಾಯಾಮ, ಯೋಗ ಅಭ್ಯಾಸ ಮಾಡಲು ಕಷ್ಟವಾಗುತ್ತದೆ. ಅಂಥವರಿಗೆ ಮಲಗಿಕೊಂಡು ಸೈಕ್ಲಿಂಗ್ ವ್ಯಾಯಾಮ ಸುಲಭವಾಗುತ್ತದೆ ಹಾಗೂ ಸೊಂಟ, ತೊಡೆಗಳ ಕೊಬ್ಬು ಸುಲಭದಲ್ಲಿ ಕರಗಿಸಬಹುದು.

    ಸೂಚನೆ: ಹರ್ನಿಯಾ ಸಮಸ್ಯೆ, ಮಂಡಿನೋವು ಸಮಸ್ಯೆ ಇದ್ದವರು ಈ ವ್ಯಾಯಾಮ ಅಭ್ಯಾಸ ಮಾಡಬಾರದು. ಅಭ್ಯಾಸ ಮಾಡುವಾಗ ಕಾಲಿನ ಬೆರಳು ನೇರವಾಗಿರಲಿ. ಹಾಯಾಗಿ ನಿಧಾನವಾಗಿ ದೇಹವನ್ನು ಕಾಲುಗಳನ್ನು ಬಿಗಿಗೊಳಿಸದೆ ಅಭ್ಯಾಸ ಮಾಡಿ.

    * ಭ್ರಾಮರಿ ಪ್ರಾಣಾಯಾಮದ ಬಗ್ಗೆ ತಿಳಿಸಿ.

    | ಕವಿತಾ ಬೆಂಗಳೂರು, 28 ವರ್ಷ

    ಭ್ರಮರ ಎಂದರೆ ದುಂಬಿ. ಭ್ರಾಮರಿ ಪ್ರಾಣಾಯಾಮ ಮಾಡುವಾಗ ದುಂಬಿಯ ಝೇಂಕಾರದ ಶಬ್ದ ಉಂಟಾಗುತ್ತದೆ. ಇದು ಉಸಿರಾಟದ ವ್ಯಾಯಾಮ. ಕಿವಿಗಳಲ್ಲಿ ಪ್ರತಿಧ್ವನಿ ಉಂಟುಮಾಡುವ ಪ್ರಯತ್ನದಿಂದ ಉಸಿರಾಡುವ ಸಮಯದಲ್ಲಿ ಹಮ್ಮಿಂಗ್ ಶಬ್ದ ಉತ್ಪತ್ತಿಯಾಗುತ್ತದೆ. ಇದು ಕಿವುಡುತನದ ಚಿಕಿತ್ಸೆಗೆ ಸಹಕಾರಿ. ಇದು ಹಠ ಯೋಗದ ಒಂದು ವ್ಯಾಯಾಮವಾಗಿದ್ದು ಒಳಗಿನ ಕಿವಿಗೆ ಆಮ್ಲಜನಕ ಮತ್ತು ರಕ್ತದ ಹೆಚ್ಚಿದ ಪರಿಚಲನೆಯಾಗಿ ಮಿದುಳಿನ ಜೀವಕೋಶಗಳು ಪುನಃಶ್ಚೇತನಗೊಳ್ಳುತ್ತದೆ. ಈ ಪ್ರಾಣಾಯಾಮದ ಉಸಿರಾಟ ಮತ್ತು ಧ್ವನಿಯ ಪ್ರತಿಧ್ವನಿಯೊಂದಿಗೆ ಶ್ರವಣವು ಸುಧಾರಿಸುತ್ತದೆ. ಇದನ್ನು ಷಣ್ಮುಖ ಮುದ್ರೆಯಲ್ಲಿ ಅಭ್ಯಾಸ ಮಾಡಿ.

    ಪ್ರಯೋಜನ: ಭ್ರಾಮರಿ ಪ್ರಾಣಾಯಾಮವು ಒತ್ತಡಗಳನ್ನು ನಿರ್ವಹಿಸುತ್ತದೆ. ಗಾಬರಿಗೊಳ್ಳುವುದು, ಕೋಪಗೊಳ್ಳುವುದು ಮತ್ತು ಚಡಪಡಿಸುವಿಕೆಯನ್ನು ಕಡಿಮೆ ಮಾಡಲು ಸಹಕಾರಿ. ಗುಂಯ್ಗುಟ್ಟುವ ಶಬ್ದವು ಮನಸ್ಸು ಮತ್ತು ನರಮಂಡಲದ ಮೇಳೆ ಶಮನಕಾರಿ ಪ್ರಭಾವ ಬೀರುತ್ತದೆ. ಹೃದಯ ದೌರ್ಬಲ್ಯ, ಅಧಿಕ ರಕ್ತದೊತ್ತಡ, ತಲೆನೋವು ಇತ್ಯಾದಿ ಸಮಸ್ಯೆ ಇದ್ದವರಿಗೆ ಇದು ಉಪಯುಕ್ತ.

    ಸೂಚನಾ ಜಾಗರೂಕತೆ: ಮೂಗು ಮತ್ತು ಕಿವಿಯ ಸೊಂಕು ಇದ್ದಲ್ಲಿ ಭ್ರಾಮರಿ ಅಭ್ಯಾಸ ಬೇಡ. ಗುರುಮುಖೇನ ಕಲಿತು ಅಭ್ಯಾಸ ಮಾಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts