More

    ವಿಆರ್​ಎಲ್ ಸಹಯೋಗದಲ್ಲಿ ಮೂಡಿಬಂದ ಬ್ರೈಲ್​ ಮ್ಯಾಗಜಿನ್​; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಬಿಡುಗಡೆ

    ಬೆಂಗಳೂರು: ವಿಆರ್​ಎಲ್ ಲಾಜಿಸ್ಟಿಕ್ಸ್​​ ಸಂಸ್ಥೆಯ ಸಹಯೋಗದಲ್ಲಿ ಮೂಡಿಬಂದಿರುವ ‘ಮ್ಯಾಜಿಕ್​ ಡಾಟ್ಸ್​’ ಎಂಬ ಬ್ರೈಲ್ ಮ್ಯಾಗಜಿನ್ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಬಿಡುಗಡೆ ಮಾಡಿದರು. ವಿಆರ್​ಎಲ್​ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರ ಉಪಸ್ಥಿತಿಯಲ್ಲಿ ನಡೆದ ಈ ಮ್ಯಾಗಜಿನ್ ಬಿಡುಗಡೆ ಬಳಿಕ ಮಾತನಾಡಿದ ಮುಖ್ಯಮಂತ್ರಿಯವರು, ದಿವ್ಯಾಂಗರಿಗೆ ಅನುಕಂಪವಲ್ಲ, ಅವಕಾಶ ನೀಡಬೇಕು. ಮುಂದಿನ ದಿನಗಳಲ್ಲಿ ದಿವ್ಯಾಂಗರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಲಾಗುವುದು ಎಂದು ಘೋಷಣೆ ಮಾಡಿದರು.

    ಮುಖ್ಯಮಂತ್ರಿಯಾಗಿ ಮೊದಲ ಸಂಪುಟ ಸಭೆಯಲ್ಲಿ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಡಿ ಮಾಸಾಶನ ಹೆಚ್ಚಿಸಲು ತೀರ್ಮಾನಿಸಿದೆ. ಮುಂದಿನ ದಿನಗಳಲ್ಲಿ ದಿವ್ಯಾಂಗರಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು. ದಿವ್ಯಾಂಗರು ದೇವರ ಮಕ್ಕಳು. ಒಬ್ಬ ಸಂಪೂರ್ಣ ಸಶಕ್ತ ಮನುಷ್ಯನಿಗೆ ತನ್ನ ದೇಹದ ಅಂಗಾಂಗಳ ಮಹತ್ವದ ಅರಿವು ಇರುವುದಿಲ್ಲ. ದೇವರ ಮಕ್ಕಳು ಎದುರಾದಾಗ ಅವರೊಂದಿಗೆ ನಾವು ಹೇಗೆ ನಡೆದುಕೊಳ್ಳಬಹುದು ಎಂದು ಪರೀಕ್ಷೆ ಮಾಡುತ್ತಾನೆ. ಇವರ ಸೇವೆ ಮಾಡುವ ಮುಖಾಂತರ ಬದುಕಿನ ಬ್ಯಾಲೆನ್ಸ್ ಶೀಟ್ ಸರಿ ಮಾಡಿಕೊಳ್ಳಿ ಎಂದು ಅವಕಾಶ ಕೊಡುತ್ತಾನೆ ಎಂದು ಅವರು ಹೇಳಿದರು.

    ವಿಆರ್​ಎಲ್ ಸಹಯೋಗದಲ್ಲಿ ಮೂಡಿಬಂದ ಬ್ರೈಲ್​ ಮ್ಯಾಗಜಿನ್​; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಬಿಡುಗಡೆ

    ಅಂಗಾಂಗದ ಕೊರತೆ ಬಿಟ್ಟರೆ, ಎಲ್ಲರನ್ನೂ ಮೀರಿಸುವ ಬುದ್ಧಿ ಶಕ್ತಿ ಅವರಿಗಿದೆ. ಸಾಮಾನ್ಯ ಮನುಷ್ಯರು ತಮ್ಮ ಮೆದುಳನ್ನು ಶೇ. 20ಕ್ಕಿಂತ ಹೆಚ್ಚು ಬಳಸುವುದಿಲ್ಲ. ದಿವ್ಯಾಂಗರ ಬುದ್ಧಿಮತ್ತೆ ನಮ್ಮ ಊಹೆಗೂ ಮೀರಿದ್ದು. ಅದಕ್ಕೆ ಅವರು ಸಂಗೀತ, ಕಲೆ ಹೀಗೆ ಹಲವು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

    ವಿಆರ್​ಎಲ್ ಸಹಯೋಗದಲ್ಲಿ ಮೂಡಿಬಂದ ಬ್ರೈಲ್​ ಮ್ಯಾಗಜಿನ್​; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಬಿಡುಗಡೆ

    ವಿಆರ್​ಎಲ್​ ಲಾಜಿಸ್ಟಿಕ್ಸ್ ಸಹಯೋಗದಲ್ಲಿ ಸೆನ್ಸ್ ಆ್ಯಂಡ್​ ಎಸೆನ್ಸ್ ಸಂಸ್ಥೆ ಈ ಮ್ಯಾಗಜಿನ್​ ಹೊರತಂದಿದ್ದು, ಸಂಸ್ಥೆಯ ಸಂಸ್ಥಾಪಕರಾದ ಯಶ್ವಿ ಭಂಡಾರಿ ಹಾಗೂ ರುಷಾಲಿ ದೋಷಿ ಅವರು ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಕಾಲಹರಣ ಮಾಡದೆ, ಬ್ರೈಲ್ ಲಿಪಿಯಲ್ಲಿ ಸಮಾಜದ ಆಗುಹೋಗುಗಳನ್ನು ತಿಳಿಸುವ ಸಲುವಾಗಿ ಪತ್ರಿಕೆ ಹೊರತರುವ ಮೂಲಕ ಮಾನವೀಯ ಕಳಕಳಿ ತೋರಿರುವುದು ಸಂತಸ ತಂದಿದೆ. ಈ ಪತ್ರಿಕೆಯನ್ನು ಪ್ರಧಾನ ಮಂತ್ರಿಯವರ ಗಮನಕ್ಕೂ ತರುವುದಾಗಿ ಸಿಎಂ ತಿಳಿಸಿದರು.

    ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಒಲಿಂಪಿಕ್ಸ್​ನಲ್ಲಿ ದೇಶದ ದಿವ್ಯಾಂಗ ಕ್ರೀಡಾಪಟುಗಳ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ದಿವ್ಯಾಂಗ ಪ್ರತಿಭೆ ಬಸವರಾಜ ಉಮ್ರಾಣಿ ಅವರು ಗಣಿತದಲ್ಲಿನ ತಮ್ಮ ಅಸಾಧಾರಣ ಪ್ರತಿಭೆ ಪ್ರದರ್ಶಿಸಿ, ಪ್ರಶಂಸೆಗೆ ಪಾತ್ರರಾದರು. ಉಮ್ರಾಣಿ ಅವರನ್ನು ಮುಖ್ಯಮಂತ್ರಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿದರು.

    ಡಾ.ವಿಜಯ ಸಂಕೇಶ್ವರ ಅವರು ಸಾಧಕರು. ಸತ್ಯ ಹೇಳುವುದು, ಸಮಯ ಪಾರಿಪಾಲನೆ, ಸಾಮಾಜಿಕ ಕಳಕಳಿ, ಉದ್ಯಮಶೀಲತೆ, ಸಾರ್ವಜನಿಕ ಸ್ಪಂದನೆ ಸೇರಿ ಹಲವು ವಿಚಾರಗಳನ್ನು ಅವರಿಂದ ಕಲಿಯುವುದಿದೆ. ಆನಂದ ಸಂಕೇಶ್ವರ ಅವರು ಸೆನ್ಸಿಟಿವ್​. ಸಮಾಜಕ್ಕೆ ಒಳ್ಳೆಯದು ಮಾಡುವ ನಿಟ್ಟಿನಲ್ಲಿ ವಿಆರ್​ಎಲ್​ ಸಂಸ್ಥೆ ಕೆಲಸ ಮಾಡುತ್ತಿರುವುದು ವಿಶೇಷ.
    | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

    ಬಸವರಾಜ ಬೊಮ್ಮಾಯಿ ಅವರು ಯೂನಿಕ್​ ಕಾಮನ್​ ಮ್ಯಾನ್​ ಸಿಎಂ. ವಿಜಯ ಸಂಕೇಶ್ವರ ಅವರ ಮಾರ್ಗದರ್ಶನದಲ್ಲಿ ವಿಆರ್​ಎಲ್​ ಸಂಸ್ಥೆ ಮೂಲಕ ಸಾಮಾಜಿಕ ಕಳಕಳಿಯಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಬ್ರೈಲ್​​ ಲಿಪಿ ಮ್ಯಾಗಜಿನ್​ಗೆ ಬೆಂಬಲ ನೀಡಿದ್ದೇವೆ. ಸಮಾಜಕ್ಕೆ ಒಳ್ಳೆಯದು ಆಗುವುದಿದ್ದರೆ ಅದಕ್ಕೆ ವಿಆರ್​ಎಲ್​ ಸಪೋರ್ಟ್​ ಮಾಡುತ್ತದೆ. ಸಹಾಯಮ್​ ಫೌಂಡೇಷನ್​​ ಜತೆಗೂಡಿ ಮ್ಯಾಗಜಿನ್​ ಮಾಡಲಾಗಿದೆ.
    | ಆನಂದ ಸಂಕೇಶ್ವರ ವ್ಯವಸ್ಥಾಪಕ ನಿರ್ದೇಶಕರು, ವಿಆರ್​ಎಲ್​ ಸಮೂಹ ಸಂಸ್ಥೆ

    ವಿಆರ್​ಎಲ್ ಸಹಯೋಗದಲ್ಲಿ ಮೂಡಿಬಂದ ಬ್ರೈಲ್​ ಮ್ಯಾಗಜಿನ್​; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಬಿಡುಗಡೆ

    ಕಾರ್ಯಕ್ರಮದಲ್ಲಿ ಯಶ್ವಿ ಭಂಡಾರಿ ಹಾಗೂ ರುಷಾಲಿ ದೋಷಿ, ವಿಆರ್​ಎಲ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

    ಸಿಎಂ ಅಂದ್ರೆ ಕಾಮನ್​ ಮ್ಯಾನ್​ ಅಂತ ದೇಶದಲ್ಲಿ ಮೊದಲ ಬಾರಿಗೆ ಬಸವರಾಜ ಬೊಮ್ಮಾಯಿ ಪ್ರಯೋಗ ಮಾಡಿದ್ದಾರೆ. ಇದು ಬಹಳ ಖುಷಿ ಸಂಗತಿ. ಹಾಗೆಯೇ ಸದಾ ಆನಂದವಾಗಿರುವ ವಿಆರ್​ಎಲ್​ ಸಮೂಹ ಸಂಸ್ಥೆಯ ಎಂಡಿ ಆನಂದ ಸಂಕೇಶ್ವರ ಅವರಿಗೆ ನನ್ನ ಧನ್ಯವಾದಗಳು.
    | ಬಸವರಾಜ್​ ಉಮ್ರಾನ್​ ಅಂಧ ಪ್ರತಿಭೆ

    ಮುಖ್ಯಮಂತ್ರಿಗಳು ಮ್ಯಾಜಿಕಲ್​ ಡಾಟ್​ ಪುಸ್ತಕ ಬಿಡುಗಡೆ ಮಾಡಿಕೊಟ್ಟಿದ್ದು ಸಂತೋಷದ ಸಂಗತಿ. ಇದಕ್ಕೆ ಪ್ರೇರಣೆ ನೀಡಿ, ಪ್ರೋತ್ಸಾಹ ಮಾಡಿದ ಆನಂದ ಸಂಕೇಶ್ವರ ಅವರಿಗೆ ಅಭಿನಂದನೆಗಳು.
    | ರುಶಾಲಿ ದೋಶಿ, ಯಶ್ವಿ ಭಂಡಾರಿ ಬ್ರೈಲ್​​ ಲಿಪಿ ಪುಸ್ತಕ ಕರ್ತೃಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts