ಹುಬ್ಬಳ್ಳಿಯಲ್ಲಿ ಅಕ್ಬರುದ್ದೀನ್ ಓವೈಸಿ ಓಡಾಟ; ಬೆಂಬಲಿಗರ ಜಮಾವಣೆ, ಅಡ್ಡಾದಿಡ್ಡಿ ವಾಹನ ಸಂಚಾರ

ಹುಬ್ಬಳ್ಳಿ: ಪಾಲಿಕೆ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿರುವ ಎಐಎಂಐಎಂ ಪಕ್ಷದ ಮುಖಂಡ, ಸಂಸದ ಅಕ್ಬರುದ್ದೀನ್​ ಓವೈಸಿ, ನಗರದಲ್ಲಿ ಓಡಾಟ ನಡೆಸಿದ್ದು, ಸಂಚಾರ ದಟ್ಟಣೆ ಜತೆಗೆ ಸಂಚಾರ ವ್ಯವಸ್ಥೆ ಕೆಲಕಾಲ ಅಸ್ತವ್ಯಸ್ತಗೊಂಡ ಪ್ರಕರಣವೂ ವರದಿಯಾಗಿದೆ. ಓವೈಸಿ ಬಂದಿರುವುದರಿಂದ ಬೆಂಬಲಿಗರೂ ಜತೆಗೂಡಿದ್ದು, ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಓಡಿಸಿದ್ದಾರೆ. ಹೀಗೆ ನಗರದ ಕೆಲವೆಡೆ ಓಡಾಟ ನಡೆಸಿರುವುದರಿಂದ ಚನ್ನಮ್ಮ ವೃತ್ತ ಸೇರಿ ಹಲವೆಡೆ ಟ್ರಾಫಿಕ್ ಜಾಮ್​ ಕಂಡುಬಂದಿದೆ. ಇನ್ನು ಕೆಲವರು ಸೆಲ್ಫಿಗೆ ಹಾಗೂ ಫೋಟೋ/ವಿಡಿಯೋಗೆ ಮುಗಿಬಿದ್ದಿದ್ದರಿಂದ ಜನಜಂಗುಳಿ ಸೃಷ್ಟಿಯಾಗಿತ್ತು. … Continue reading ಹುಬ್ಬಳ್ಳಿಯಲ್ಲಿ ಅಕ್ಬರುದ್ದೀನ್ ಓವೈಸಿ ಓಡಾಟ; ಬೆಂಬಲಿಗರ ಜಮಾವಣೆ, ಅಡ್ಡಾದಿಡ್ಡಿ ವಾಹನ ಸಂಚಾರ