More

    ಕೋಟ, ಬ್ರಹ್ಮಾವರದಲ್ಲಿ ತಹಸೀಲ್ದಾರ್ ಕಾರ್ಯಾಚರಣೆ, ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ಎಚ್ಚರಿಕೆ

    ಕೋಟ: ಕೋವಿಡ್ 19 ಎರಡನೇ ಅಲೆ ವಿಪರೀತಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗುರುವಾರ ತೆಗೆದುಕೊಂಡ ಕಠಿಣ ಕ್ರಮದ ಹಿನ್ನೆಲೆಯಲ್ಲಿ ಶುಕ್ರವಾರ ತಹಸೀಲ್ದಾರ್ ಕಿರಣ್ ಗೌರಯ್ಯ ಬ್ರಹ್ಮಾವರ ವಿವಿಧ ಭಾಗಗಳು ಹಾಗೂ ಕೋಟ ಸೇರಿದಂತೆ ಕೆಲವು ಭಾಗಗಳಿಗೆ ದಿಢೀರ್ ದಾಳಿ ನಡೆಸಿ ತೆರೆದಿರುವ ಅಗತ್ಯ ವಸ್ತುಗಳ ಅಂಗಡಿಗಳ ಹೊರತು ಇನ್ನುಳಿದ ಅಂಗಡಿಗಳನ್ನು ಮುಚ್ಚಿಸಿದರು. ಹೋಟೆಲ್, ಜವಳಿ ಮಳಿಗಳಿಗೆ ದಾಳಿ ನಡೆಸಿ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ಖಡಕ್ ಎಚ್ಚರಿಕೆ ನೀಡಿ ಬಂದ್ ಮಾಡುವಂತೆ ಸೂಚಿಸಿದರು. ಮಾಸ್ಕ್ ಹಾಕದಿದ್ದವರಿಗೆ ಎಚ್ಚರಿಗೆ ನೀಡಿದರು.

    ಕೋಟ ಕಂದಾಯ ಅಧಿಕಾರಿ ರಾಜು, ಕೋಟ ನಾಡಕಚೇರಿಯ ಉಪತಹಸೀಲ್ದಾರ್ ವಸಂತ್, ಗ್ರಾಮ ಲೆಕ್ಕಿಗ ಚಲುವರಾಜು, ಸಹಾಯಕ ರಾಜು, ಕೋಟ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ, ಕೋಟ ಆರಕ್ಷಕ ಅಪರಾಧ ದಳದ ಠಾಣಾಧಿಕಾರಿ ಪುಷ್ಪ್ಪಾರಾಮ್, ಪ್ರಭಾರ ಪಿಎಸ್‌ಐ ಭರತೇಶ್ ಸಿಬ್ಬಂದಿ ರಾಜು, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
    ಕೋಟ ಗ್ರಾಪಂ ವತಿಯಿಂದ ಅಭಿವೃದ್ಧಿ ಅಧಿಕಾರಿಗಳ ಮೂಲಕ ಸದಸ್ಯರಾದ ಸಂತೋಷ್ ಪ್ರಭು, ಚಂದ್ರ ಪೂಜಾರಿ ತಮ್ಮ ಪಂಚಾಯಿತಿ ವಾಹನಗಳ ಮೂಲಕ ವಿವಿಧ ಕಡೆಗಳಲ್ಲಿ ಸಂಚರಿಸಿ ಜಾಗೃತಿ ಜಾಥಾ ನಡೆಸಿದರು.

    ಹೋಟೆಲ್, ಬಟ್ಟೆ ಮಳಿಗೆಗಳಲ್ಲಿ ನಿಯಮ ಉಲ್ಲಂಘನೆ
    ತಹಸೀಲ್ದಾರ್ ನೇತೃತ್ವದಲ್ಲಿ ಬ್ರಹ್ಮಾವರದ ಕುಂಜಾಲುಗಿರಿಯಿಂದ ಕಾಲ್ನಡಿಗೆ ಮೂಲಕ ಅಗತ್ಯ ವಸ್ತಯಗಳನ್ನು ಹೊರತುಪಡಿಸಿ ಇನ್ನುಳಿದ ವಿವಿಧ ಬಗೆಯ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಕೋಟ ಪೇಟೆಯ ಪ್ರಸಿದ್ಧ ಹೋಟೆಲ್, ಬಟ್ಟೆ ಮಳಿಗಳು ಬಂದ್ ಮಾಡಿ ಒಳಗೆ ವ್ಯವಹರಿಸುವುದರ ವಿರುದ್ಧ ಮಾಲೀಕರ ವಿರುದ್ಧ ಹರಿಹಾಯ್ದರು. ಕೋಟ ಪೇಟೆಯ ಹೋಟೆಲ್ ಮಾಲೀಕರು ಮಾನವೀಯ ನೆಲೆಯಲ್ಲಿ ಹೋಟೆಲ್ ವ್ಯವಹಾರ ನಡೆಸುತ್ತಿದ್ದೇವೆ ಎಂದು ಸಮಜಾಯಿಷಿ ನೀಡಲು ಮುಂದಾದಾಗ, ಸರ್ಕಾರದ ಮಾರ್ಗಸೂಚಿಯಂತೆ ಹೋಟೆಲ್‌ಹಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅದನ್ನು ಮಾತ್ರ ಮಾಡಿ. ಗಿರಾಕಿಗಳನ್ನು ಕೂರಿಸಿ ಊಟ, ತಿಂಡಿ ನೀಡುವಂತಿಲ್ಲ ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts