More

    ಕಲೆ ನಮ್ಮ ಜೀವನ ಶೈಲಿಯ ಪ್ರತೀಕ: ಡಾ. ಬಿ.ಪಿ.ವೀರಭದ್ರಪ್ಪಅಭಿಮತ

    ಶಿವಮೊಗ್ಗ: ಕಲಾ ಪ್ರದರ್ಶನ, ಛಾಯಾ ಪ್ರದರ್ಶನಗಳು ನಮ್ಮ ನೋವು, ನಲಿವು, ಸಂಕಷ್ಟಗಳನ್ನು ಪ್ರತಿಬಿಂಬಿಸುತ್ತವೆ ಎಂದು ಕುವೆಂಪು ವಿವಿ ಕುಲಪತಿ ಡಾ. ಬಿ.ಪಿ.ವೀರಭದ್ರಪ್ಪ ಹೇಳಿದರು.
    ದಾವಣಗೆರೆ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಕಲಾವಿದ ಎ.ಮಹಾಲಿಂಗಪ್ಪ ಅವರ ಏಕವ್ಯಕ್ತಿ ಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಒಬ್ಬ ವ್ಯಕ್ತಿ ಸಂಸ್ಥೆಯಾಗಿ ಬೆಳೆಯಲು ಸಾಧ್ಯವಿದೆ. ಅದು ಏಕವ್ಯಕ್ತಿ ಚಿತ್ರಕಲೆಗಳು ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯತ್ತವೆ ಎಂದರು.
    ದೇವರು ಕೆಲವರಿಗೆ ಮಾತ್ರ ವಿದ್ವತ್ ಶಕ್ತಿ ಕೊಡುತ್ತಾನೆ. ಅದು ಕಲಾವಿದ ಮಹಾಲಿಂಗಪ್ಪ ಅವರಿಗೆ ಒಲಿದಿದೆ. ಬೆಂಗಳೂರು, ದಾವಣಗೆರೆ, ನವದೆಹಲಿಯಲ್ಲಿ ಅವರ ಕಲಾ ಪ್ರದರ್ಶನಗಳು ಕಂಡಿವೆ. ಈ ಮೂಲಕ ನಾಡಿನೆಲ್ಲೆಡೆ ಭಾರತೀಯ ಕಲೆಯನ್ನು ಪಸರಿಸಿದ್ದಾರೆ ಎಂದು ಹೇಳಿದರು.
    ಕಲಾವಿದ ಎ.ಮಹಾಲಿಂಗಪ್ಪ ಪ್ರಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿರುವ ಕಲೆಯನ್ನು ಹೊರತರುವ ಕೆಲಸ ಶಿಕ್ಷಕರು ಮಾಡಬೇಕು. ವಿದೇಶಗಳಲ್ಲಿ ಬಾಲ್ಯದಿಂದಲೇ ಕಲೆ ಬಗ್ಗೆ ಪ್ರೋತ್ಸಾಹ ನೀಡಲಾಗುತ್ತದೆ. ಆದರೆ ನಮ್ಮಲ್ಲಿ ಆ ಕೆಲಸ ಆಗುತ್ತಿಲ್ಲ. ಅದು ಸಾಧ್ಯವಾದರೆ ಚಿತ್ರಕಲೆಗೆ ಭವಿಷ್ಯ ಇರಲಿದೆ ಎಂದರು.
    ಕಲಾವಿದರನ್ನು ಪ್ರತಿವರ್ಷ ಆಯ್ಕೆ ಮಾಡಿ ವಿವಿಧ ಕಲಾ ಪ್ರಕಾರಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸಿಕೊಂಡು ಬರುತ್ತಿದೆ. ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅವಕಾಶ ಕಲ್ಪಿಸಿದೆ. ಈ ಬಾರಿ ಜಿಲ್ಲಾಮಟ್ಟದಲ್ಲಿ ಪ್ರದರ್ಶನ ಮಾಡಲಾಗುತ್ತಿದೆ. ಶಿವಮೊಗ್ಗದಲ್ಲಿ ಕಲಾ ಪ್ರದರ್ಶನಕ್ಕೆ ಸಾಕಷ್ಟು ಅನುಕೂಲಗಳಿವೆ. ಅದನ್ನು ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
    ವಿವಿಧ ಶಾಲೆಗಳ ಮಕ್ಕಳಿಂದ ಚಿತ್ರಕಲಾ ಪ್ರದರ್ಶನ ನಡೆಯಿತು. ಕಲಾ ಸಂಘದ ಪದಾಧಿಕಾರಿ ಪದ್ಮಾ ದೇಸಾಯಿ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಸಂಘದ ಅಧ್ಯಕ್ಷ ಎನ್.ಎಂ.ಸುಂದರರಾಜ್ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ಜಿಲ್ಲಾ ಕಮಾಡೆಂಟ್ ಹಾಲಪ್ಪ, ಜಿಲ್ಲಾ ಕಲಾ ಸಂಘ ಅಧ್ಯಕ್ಷ ದೀಪು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts