More

    ಮರೆಯಾಗುತ್ತಿದೆ ಜಾನಪದ ಸಾಹಿತ್ಯ: ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಬೇಸರ

    ಮಂಡ್ಯ: ನಮ್ಮ ಬದುಕಿನೊಂದಿಗೆ ಹಾಸುಹೊಕ್ಕಾಗಿದ್ದ ಜಾನಪದ ಸಾಹಿತ್ಯ ದಿನ ಕಳೆದಂತೆ ಮರೆಯಾಗುತ್ತಿರುವುದು ಬೇಸರದ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.
    ನಗರದ ಕರ್ನಾಟಕ ಸಂಘದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಎಂ.ಎಲ್.ಶ್ರೀಕಂಠೇಗೌಡ ರಂಗ ಪ್ರಶಸ್ತಿ ಪ್ರದಾನ ಸವಾರಂಭ ಉದ್ಘಾಟಿಸಿ ವಾತನಾಡಿದರು. ನಾಟಿ, ಒಕ್ಕಣೆ, ಶುಭ ಸವಾರಂಭಗಳಲ್ಲಿ ಮೇಳೈಸುತ್ತಿದ್ದ ಜಾನಪದ ನಮ್ಮ ಸಾಂಸ್ಕೃತಿಕ ಬದುಕಾಗಿತ್ತು. ಆದರೆ ಇಂದು ಅದು ದೂರವಾಗುತ್ತಿರುವುದು ದುರಂತ. ಆರೋಗ್ಯಪೂರ್ಣ ಸವಾಜ ಕಟ್ಟುವ ದಿಸೆಯಲ್ಲಿ ಜಾನಪದ, ಸಾಹಿತ್ಯ ಮತ್ತು ಕಲೆಯ ಹಿನ್ನೆಲೆಯಲ್ಲಿ ಜಿಲ್ಲೆಯನ್ನೇ ಆವರಿಸಬೇಕು ಎಂದರು.
    ಇಂತಹ ಸಾವಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಾಡುವ ಮೂಲಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಶಕ್ತಿ ಪಡೆದುಕೊಳ್ಳುತ್ತಿವೆ. ನಾಟಕಗಳ ನಿರ್ದೇಶಕರಾಗಿ, ಕರ್ತೃವಾಗಿರುವ ಜಯರಾಂ ರಾಯಪುರ ಅವರು ಹಲವು ವಷರ್ದಿಂದ ಸಾವಾಜಿಕ ಸೇವೆಯಲ್ಲಿ ತೊಡಗಿದ್ದಾರೆ. ಸ್ವಚ್ಛತೆಯ ಆಂದೋಲನಕ್ಕೂ ಜಿಲ್ಲೆಯಲ್ಲಿ ಕಾರ್ಯಪ್ರವತ್ತರಾಗಿದ್ದಾರೆ. ಶಾಲಾ- ಕಟ್ಟಡಗಳಿಗೆ ಸುಣ್ಣಬಣ್ಣ ಬಳಿಯುವ ಕಾಯಕಕ್ಕೂ ನಿರತರಾಗಿದ್ದಾರೆ. ನಾವು ಸಹ ಇವರ ಜತೆ ಕೈಜೋಡಿಸಬೇಕಿದೆ. ಇಂತಹ ವ್ಯಕ್ತಿಗೆ ಎಂ.ಎಲ್.ಶ್ರೀಕಂಠೇಗೌಡ ರಂಗ ಪ್ರಶಸ್ತಿ ಸಿಕ್ಕಿರುವುದು ಸಂತಸದ ವಿಷಯ ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಶಾಸಕ ಎಂ.ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿ.ಪಂ ಸಿಇಒ ಶಾಂತಾ ಎಲ್.ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಕರ್ನಾಟಕ ಸಂದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ, ಜಾನಪದ ಪರಿಷತ್‌ನ ಇ.ಸಿ.ರಾಮಚಂದ್ರೇಗೌಡ ಇತರರಿದ್ದರು.
    ಇದೇ ವೇಳೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ ಅವರಿಗೆ 25 ಸಾವಿರ ರೂ. ನಗದು ಜತೆಗೆ ಎಂ.ಎಲ್.ಶ್ರೀಕಂಠೇಗೌಡ ರಂಗ ಪ್ರಶಸ್ತಿ ಪ್ರದಾನ ವಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts