More

    ಫ್ರೀ ಫೈಯರ್​ ಗೇಮ್​ ಗೀಳಿಗೆ ಬಿದ್ದ ಬಾಲಕನಿಂದ ತಾಯಿಗೆ ಕಾದಿತ್ತು ಶಾಕ್​!

    ಹೈದರಾಬಾದ್​: ಮೊಬೈಲ್​ ಎಷ್ಟು ಸಹಕಾರಿಯೋ ಅಷ್ಟೇ ಅಪಾಯಕಾರಿಯೂ ಹೌದು ಎನ್ನುವುದಕ್ಕೆ ಇಲ್ಲೊಂದು ನಿರ್ದೇಶನ ಸಿಕ್ಕಿದೆ. ಮಕ್ಕಳಿಗೆ ಮೊಬೈಲ್​ ಕೊಟ್ಟರೆ ಏನಾಗಬಹುದು. ಹೆಚ್ಚೆಂದರೆ ಮೊಬೈಲ್​ ಹಾಳಾಗಬಹುದು ಎಂದುಕೊಳ್ಳಬಹುದು. ಆದರೆ ಇಲ್ಲಿ ಆಗಿರುವುದೇ ಬೇರೆ.

    16 ವರ್ಷದ ಬಾಲಕನೊಬ್ಬ ತನ್ನ ತಾಯಿಯ ಮೊಬೈಲ್​ನಲ್ಲಿ ಗೇಮ್​ ಆಡಲು ಹೋಗಿ ಭಾರೀ ಮೊತ್ತದ ಹಣವನ್ನೇ ಖಾಲಿ ಮಾಡಿದ್ದಾನೆ. ಆನ್​ಲೈನ್​ ಗೇಮ್​ ಆಡುತ್ತಿದ್ದ ಈ ಬಾಲಕ ತನ್ನ ತಾಯಿಯ ಖಾತೆಯಿಂದ ಬರೋಬ್ಬರಿ 36 ಲಕ್ಷ ರೂ. ಹಣವನ್ನು ವ್ಯಯಿಸಿದ್ದಾನೆ. ಹೈದರಾನಾದ್​ ಅಂಬಾರಪೇಟೆಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ತನ್ನ ಮಗನಿಂದ ಈಗ ಇರುವ ಹಣವನ್ನೂ ಕಳೆದುಕೊಂಡಿದ್ದಾರೆ.

    ದುಡ್ಡು ಹೇಗೆ ಖಾಲಿಯಾಯಿತು ಎಂಬ ಬಗ್ಗೆ ಮಹಿಳೆ ಸೈಬರ್​ ಕ್ರೈಂ ಗೆ ದೂರು ನೀಡುತ್ತಾಳೆ. ತನಿಖೆ ಕೈಗೊಂಡ ಪೊಲೀಸರಿಗೆ ಈಕೆಲಸ ಯಾರದ್ದು ಎಂದು ತಿಳಿದುಬಿಡುತ್ತದೆ. ಆ ವೇಳೆ ಮೊಬೈಲ್​ನಲ್ಲೇ ಗೇಮ್​ಗಾಗಿ ಈ ಬಾಲಕ ತಾಯಿಯ ಖಾತೆಯಲ್ಲಿರುವ ಹಣ ಬಳಸಿರುವುದು ಪತ್ತೆಯಾಗಿದೆ.

    ಒಂದೊಂದು ಗೇಮ್​​ಗೆ 1500 ರೂ.ನಿಂದ 10,000 ರೂ.ವರೆಗೂ ಪಾವತಿ ಮಾಡಿದ್ದಾನೆ. 11ನೇ ತರಗತಿಯಲ್ಲಿ ಓದುತ್ತಿರವ ಈತ ತನ್ನ ತಾಯಿಯ ಖಾತೆಯಿಂದ 1 ರಿಂದ 2 ಲಕ್ಷದವರೆಗೂ ಹಣವನ್ನು ಡ್ರಾ ಮಾಡಿಕೊಂಡಿದ್ದಾನೆ. ಹೀಗೆ ಆನ್​ಲೈನ್​ ಗೇಮ್​ ಹುಚ್ಚಿಗೆ ಬಿದ್ದ ಯುವಕ ಬರೋಬ್ಬರಿ 36 ಲಕ್ಷ ರೂ.ಹಣವನ್ನು ಹಾಳುಮಾಡಿದ್ದಾನೆ. (ಏಜೆನ್ಸೀಸ್​)

    https://www.vijayavani.net/promoting-rape-ads-of-body-spray-layerr-shot-action/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts