More

    ಜೂಡೋ ಕ್ಲಾಸಲ್ಲಿ ಪೆಟ್ಟುತಿಂದು ಕೋಮಾಗೆ ಜಾರಿದ್ದ ಬಾಲಕನ ಸಾವು; ಶಿಕ್ಷಕನಿಂದ ನಡೆದಿತ್ತು ಘೋರ ಅನರ್ಥ!

    ಟೈವಾನ್ : ಮಕ್ಕಳ ಸುರಕ್ಷಿತ ಭವಿಷ್ಯಕ್ಕಾಗಿ ಕರಾಟೆ, ಜೂಡೋ ಮುಂತಾದ ಆತ್ಮರಕ್ಷಣಾ ವಿಧಾನಗಳನ್ನು ಕಲಿಸುತ್ತಾರೆ. ಆದರೆ ಟೈವಾನ್​ನ 7 ವರ್ಷದ ಬಾಲಕನೊಬ್ಬ ಜೂಡೋ ತರಗತಿಯಲ್ಲಿ ಶಿಕ್ಷಕನ ಕೈಯಿಂದಲೇ ಅಮಾನವೀಯವಾಗಿ ಘಾಸಿಗೊಂಡು ಅರಳುವ ಮುನ್ನವೇ ಕಮರಿ ಹೋಗಿದ್ದಾನೆ.

    ಟೈವಾನಿನ ಟೈಚುಂಗ್ ನಗರದ ನಿವಾಸಿ ಹುಯಂಗ್​ ಎಂಬ ಬಾಲಕ ಹೋ ಎಂಬ ಕೋಚ್​ನ ಬಳಿ ಜೂಡೋ ಕಲಿಯುತ್ತಿದ್ದ. ಏಪ್ರಿಲ್ 21 ರಂದು ತರಗತಿಯ ವೇಳೆಯಲ್ಲಿ ಶಿಕ್ಷಕ ಹೋ, ಬಾಲಕನ ಮೇಲೆ ಇತರ ವಿದ್ಯಾರ್ಥಿಗಳಿಗೆ ತಮ್ಮ ಥ್ರೋ(ಎಸೆತ)ಗಳನ್ನು ಅಭ್ಯಸಿಸಲು ಹೇಳಿದ್ದಲ್ಲದೆ, ಖುದ್ದು ತಾನೂ ಹಲವು ಬಾರಿ ಅವನನ್ನು ನೆಲಕ್ಕೆ ಕುಕ್ಕಿದ್ದ. ಹುಡುಗ ತನ್ನ ತಲೆ ನೋಯುತ್ತಿದೆ ಎಂದರೂ ಕೇಳದೆ ಮತ್ತೆ ಮತ್ತೆ ನೆಲಕ್ಕೆ ಎಸೆದಿದ್ದು, ಆತ ಕೊನೆಗೆ ಮೂರ್ಛೆ ಬಿದ್ದ. ಆಗ ಅವನನ್ನು ಅಲ್ಲಿನ ಫೆಂಗ್​ ಯುವಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎನ್ನಲಾಗಿದೆ.

    ಇದನ್ನೂ ಓದಿ: ಎರಡನೇ ಹೆಂಡತಿ ಜತೆ ಸೇರಿ ಮೊದಲನೇ ಹೆಂಡತಿಗೇ ಸ್ಕೆಚ್! ಹೊಲದಲ್ಲಿ ಎದ್ದುಬಂದಿತ್ತು ಡೆಡ್ ಬಾಡಿ!

    ಬಾಲಕನನ್ನು ಪರೀಕ್ಷಿಸಿದ ವೈದ್ಯರಿಗೆ ಆತನ ತಲೆಗೆ ಕಾರ್​ಕ್ರ್ಯಾಶ್​ನಲ್ಲಿ ಆಗುವಂತೆ ತೀವ್ರ ಪೆಟ್ಟು ಬಿದ್ದಿರುವುದು ಕಂಡುಬಂದಿತು. ಮೆದುಳಲ್ಲಿ ತೀವ್ರ ಹೆಮರೇಜ್​ಗಳಾದ ಕಾರಣ ತಕ್ಷಣ ಕ್ರ್ಯಾನಿಯೊಟಮಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಆದರೆ ನಂತರ ಅವನು ಕೋಮಾಗೆ ಜಾರಿದ್ದು, ಕಳೆದ 70 ದಿನಗಳಿಂದ ಲೈಫ್​ ಸಪೋರ್ಟ್​ ಮೇಲಿದ್ದ. ಕ್ರಮೇಣ ಬಾಲಕನಲ್ಲಿ ಉಸಿರಾಟದ ಸಮಸ್ಯೆ ಮತ್ತು ಅನೇಕ ಅಂಗಾಂಗಗಳ ವೈಫಲ್ಯ ಕಂಡುಬಂದ ಹಿನ್ನೆಲೆಯಲ್ಲಿ ನಿನ್ನೆ ಆತನ ಪಾಲಕರು ಅವನ ಲೈಫ್​ ಸಪೋರ್ಟನ್ನು ತೆಗೆಸುವ ನಿರ್ಧಾರ ಕೈಗೊಂಡಿದ್ದು, ಆತ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.

    ಮೃತ ಹುಯಂಗ್​​ನ ಪಾಲಕರ ಪ್ರಕಾರ ಅಂದಿನ ಜೂಡೋ ಕ್ಲಾಸಲ್ಲಿ ಅವನನ್ನು ಒಟ್ಟು 27 ಬಾರಿ ನೆಲಕ್ಕೆ ಎಸೆಯಲಾಗಿತ್ತು. ಬಾಲಕನ ಈ ಸ್ಥಿತಿಗೆ ಕಾರಣನಾದ ಶಿಕ್ಷಕ ಹೋ ಮೇಲೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದು, ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ಪತಿಯ ಅಕ್ರಮ ಸಂಬಂಧ ಪ್ರಶ್ನಿಸಿದ ಮಹಿಳೆ; ನಡೆದೇ ಹೋಯಿತು ದುರಂತ!

    ಕರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಮೊತ್ತ ನಿಗದಿಪಡಿಸಿ: ಸರ್ಕಾರಕ್ಕೆ ಸುಪ್ರೀಂ ಕೋರ್ಟ್​ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts