More

    ಬೋರ್​ವೆಲ್​ಗೆ ಬಿದ್ದ 4 ವರ್ಷದ ಬಾಲಕ; ರಕ್ಷಣಾ ಕಾರ್ಯದಲ್ಲಿ ಯೋಧರು..!

    ನಿವಾರಿ: ತೆರೆದ ಕೊಳವೆ ಬಾವಿಗೆ ಮಕ್ಕಳು ಬಿದ್ದ ಪ್ರಕರಣಗಳ ಸಾಲಿಗೆ ಈಗ ಮತ್ತೊಂದು ಪ್ರಕರಣ ಸೇರ್ಪಡೆ ಆಗಿದೆ. 200 ಅಡಿ ಆಳದ ಕೊಳವೆ ಬಾವಿಯೊಂದಕ್ಕೆ ನಾಲ್ಕು ವರ್ಷ ವಯಸ್ಸಿನ ಬಾಲಕನೊಬ್ಬ ಬಿದ್ದು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.

    ಕೊಳವೆ ಬಾವಿಯೊಳಕ್ಕೆ ಬಿದ್ದಿರುವ ಹುಡುಗ ಸುಮಾರು 50 ಅಡಿ ಆಳದಲ್ಲಿ ಸಿಲುಕಿದ್ದಾಗಿ ರಕ್ಷಣಾ ಕಾರ್ಯನಿರತರು ಅಂದಾಜಿಸಿದ್ದು, ಬಾಲಕನ ರಕ್ಷಣೆಗಾಗಿ ಸಮಾನಾಂತರವಾಗಿ ಮತ್ತೊಂದು ಬೋರ್​ವೆಲ್​ ಕೊರೆಯಲಾಗುತ್ತಿದ್ದು, 45 ಅಡಿ ಆಳದವರೆಗೆ ತಲುಪಲಾಗಿದೆ. ಅಲ್ಲದೆ ಬಾಲಕನ ಉಸಿರಾಟಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಆಮ್ಲಜನಕವನ್ನೂ ಪೂರೈಸಲಾಗಿದೆ.

    ಮಧ್ಯಪ್ರದೇಶದ ಸೇತುಪುರ ಗ್ರಾಮದಲ್ಲಿ ಈ ಅವಘಡ ಸಂಭವಿಸಿದ್ದು, ಸ್ಥಳೀಯ ನಿವಾಸಿ ಹರಿಕಿಶನ್ ಎಂಬವರ ಪುತ್ರ ನಾಲ್ಕು ವರ್ಷದ ಪ್ರಹ್ಲಾದ್ ತೆರೆದ ಕೊಳವೆ ಬಾವಿಗೆ ಬಿದ್ದು ಸಿಲುಕಿಕೊಂಡಿದ್ದಾನೆ. ಬುಧವಾರದಿಂದಲೇ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ಮುಖ್ಯಮಂತ್ರಿ ಶಿವರಾಜ್​ ಸಿಂಗ್ ಚೌಹಾಣ್​ ಕೂಡ ಬಾಲಕ ಸುರಕ್ಷಿತವಾಗಿ ಪಾರಾಗಲಿ ಎಂದು ಪ್ರಾರ್ಥಿಸಿದ್ದಾರೆ. ಬಾಲಕನ ರಕ್ಷಣೆಗೆ ಸೇನೆಯ ಸಿಬ್ಬಂದಿ ಕೂಡ ಪಾಲ್ಗೊಂಡಿದ್ದು, ಪ್ರಹ್ಲಾದ್ ಅತಿ ಶೀಘ್ರದಲ್ಲಿ ರಕ್ಷಿಸಲ್ಪಡಲಿದ್ದಾನೆ ಎಂದು ಚೌಹಾಣ್​ ಭರವಸೆ ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts