More

    ತಾಯಿಯಿಂದ ಹಣ ಸುಲಿಗೆಗೆ ಸ್ವ ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ಬಾಲಕ

    ಬಿಹಾರ: ಆನ್‌ಲೈನ್ ಗೇಮ್ ವ್ಯಸನಿಯಾಗಿರುವ ಬಾಲಕನೋರ್ವ ತನ್ನ ತಾಯಿಯಿಂದ ಹಣ ಸುಲಿಗೆ ಮಾಡಲೆತ್ನಿಸಿ ಸಿಕ್ಕಿಬಿದ್ದ ಘಟನೆ ನಡೆದಿದೆ.
    ಆತ 14 ವರ್ಷದ ಬಾಲಕ. ಸ್ವ ಅಪಹರಣದ ನಾಟಕವಾಗಿ 5 ಲಕ್ಷ ರೂ.ಗಳನ್ನು ನೀಡಬೇಕೆಂದು ತಾಯಿಯ ಮೊಬೈಲ್ ಫೋನ್‌ಗೆ ಮೆಸೇಜ್ ಕಳುಹಿಸಿದ್ದ. ಮೆಸೇಜ್ ನೋಡಿದ ಆ ತಾಯಿ, ಪತ್ರಾ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಅಪಹರಣದ ದೂರು ದಾಖಲಿಸಿದ್ದರು.

    ಇದನ್ನೂ ಓದಿ: ಎಫ್‌ಐಆರ್‌ ದಾಖಲಿಸಿಕೊಳ್ಳಬೇಕೆಂದರೆ ಡಾನ್ಸ್‌ ಮಾಡು: ನೋವು ಬಿಚ್ಚಿಟ್ಟ 16ರ ಬಾಲಕಿ!

    ಆತ 10 ನೇ ತರಗತಿ ವಿದ್ಯಾರ್ಥಿ, ಆಗಸ್ಟ್ 10 ರಂದು ಸ್ನೇಹಿತನನ್ನು ಭೇಟಿಯಾಗಲು ಹೋಗುತ್ತಿದ್ದೇನೆ ಎಂದು ಮನೆಯಿಂದ ಹೊರಟುಹೋದನು. ಆತ 2,000 ರೂ. ಮತ್ತು ಮೊಬೈಲ್ ಫೋನ್ ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದ. ನಂತರ, ತಾಯಿಗೆ ಮೊಬೈಲ್ ಫೋನ್‌ನಲ್ಲಿ ಸುಲಿಗೆಗಾಗಿ ಸಂದೇಶ ಬಂದಿತು. ದೂರು ಸ್ವೀಕರಿಸಿದ ಕೂಡಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅಧಿಕಾರಿಗಳು ಬುಧವಾರ ರಾತ್ರಿ ಪುರ್ನಿಯ ಬಸ್ ನಿಲ್ದಾಣದಿಂದ ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

    ಇದನ್ನೂ ಓದಿ:ಬಿಎಸ್​ಎಫ್ ಕಾರ್ಯಾಚರಣೆ : ಇಂಡೋ- ಬಾಂಗ್ಲಾದೇಶ ಗಡಿ ಬಳಿ 1500 ನಿಷೇಧಿತ ಕೆಮ್ಮು ಔಷಧಿ ಫೆನ್‌ಸೆಡಿಲಿನ್ ವಶ 

    ತನ್ನ ತಾಯಿ 3.5 ಲಕ್ಷ ರೂ.ಗಳ ಸಾಲವನ್ನು ತೆಗೆದುಕೊಂಡಿದ್ದನ್ನು ತಿಳಿದ ಆತ ಅದನ್ನು ಕಿತ್ತುಕೊಳ್ಳಲು ಸ್ವ ಅಪಹರಣದ ನಾಟಕವಾಡಿದ್ದಾನೆ ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಸುಲಿಗೆ ಹಣದಿಂದ ದೆಹಲಿ ಅಥವಾ ಮುಂಬೈನ ಕ್ರಿಕೆಟ್ ಅಕಾಡೆಮಿಯಲ್ಲಿ ಪ್ರವೇಶ ಪಡೆಯಲು ಆತ ಯೋಜಿಸಿದ್ದ ಹಾಗೂ ವಿಡಿಯೋ ಗೇಮ್‌ ಆಡಲು ದುಬಾರಿ ಮೊತ್ತದ ಸ್ಮಾರ್ಟ್ ಫೋನ್ ಖರೀದಿಸಲೂ ಆತ ಯೋಚಿಸಿದ್ದ ಎಂದು ಪತ್ರಾ ನಗರ ಪೊಲೀಸ್ ಠಾಣೆ ಠಾಣಾಧಿಕಾರಿ ಪ್ರಮೋದ್ ಕುಮಾರ್ ತಿಳಿಸಿದ್ದಾರೆ.
    ಪೊಲೀಸರು ಬಾಲಕನನ್ನು ತಾಯಿಗೆ ಒಪ್ಪಿಸಿದ್ದಾರೆ. ಹಿರಿಯ ಅಧಿಕಾರಿಗಳ ನಿರ್ದೇಶನದ ಆಧಾರದ ಮೇಲೆ ಪ್ರಕರಣದ ಕುರಿತು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಅನುಮಾನಾಸ್ಪದ ವರ್ತನೆ: ಅವಮಾನಕ್ಕೆ ಪ್ರತೀಕಾರವಾಗಿ ನಡೆಯಿತಾ ಕೊಲೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts