More

    ಗಡಿಗ್ರಾಮಾಭಿವೃದ್ಧಿಗೆ ಹೆಚ್ಚಿನ ಅಧ್ಯತೆ ಅಗತ್ಯ

    ಕಾನಹೊಸಹಳ್ಳಿ: ತಾಲೂಕು ಕೇಂದ್ರದಿಂದ ದೂರದಲ್ಲಿರುವ ಗಡಿ ಗ್ರಾಮಗಳ ಅಭಿವೃದ್ಧಿಯ ನಿರ್ಲಕ್ಷೃ ಎದ್ದು ಕಾಣುತ್ತಿದೆ. ಹೀಗಾಗಿ, ಕ್ಷೇತ್ರದ ಗಡಿ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.

    ಇದನ್ನೂ ಓದಿ: ಬಟ್ಟೆ ಅಂಗಡಿಗೆ ಬಂದಿದ್ದ ಯುವತಿಗೆ ಬ್ಲಾೃಕ್‌ಮೇಲ್; ಟ್ರಯಲ್ ರೂಮ್‌ನಲ್ಲಿ ಅಶ್ಲೀಲ ಫೋಟೋ ತೆಗೆದುಕೊಂಡಿದ್ದ ಮೈನುದ್ದೀನ್

    ಸಮೀಪದ ಹುಡೇಂ ಗ್ರಾಮದಲ್ಲಿ ಗ್ರಾಪಂ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ನೂತನ ಕಟ್ಟಡವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿದರು.
    ಶಿಕ್ಷಣ, ಕುಡಿವ ನೀರು, ರಸ್ತೆ ಸೇರಿ ಮೂಲಸೌವಲಭ್ಯಗಳನ್ನು ಕಲ್ಪಿಸಲಾಗುವುದು.

    ತಾಯಕನಹಳ್ಳಿ- ಹುಡೇಂ ಚಿತ್ರದುರ್ಗ ಜಿಲ್ಲೆಯ ಗಡಿ ಮುಷ್ಟಲಗುಮ್ಮಿಯವರೆಗಿನ ರಸ್ತೆಗೆ ಗುಣಮಟ್ಟದ ಸಿಸಿ ಹಾಕಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಹುಡೇಂ ಗ್ರಾಮಕ್ಕೆ ಕೆರೆ ನಿರ್ಮಾಣ ಮಾಡುವ ಗ್ರಾಮಸ್ಥರ ಬೇಡಿಕೆಗೆ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ನೀರಾವರಿ, ಅರಣ್ಯ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಸಾಕಾರಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

    ಗ್ರಾಪಂ ಅಧ್ಯಕ್ಷ ರಾಮಚಂದ್ರಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾಯಕನಹಳ್ಳಿ ಮಹಂತಪ್ಪ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೋಣನವರ ಮೂರ್ತೆಪ್ಪ, ತಾಪಂ ಮಾಜಿ ಸದಸ್ಯ ಹುಡೇಂ ಪಾಪನಾಯಕ,

    ಜಿಲ್ಲಾ ಪಂಚಾಯತ್‌ರಾಜ್ ಎಂಜನಿಯರಿಂಗ್ ಎಇಇ ಮಲ್ಲಿಕಾರ್ಜುನ, ಶಾಸಕರ ಆಪ್ತ ಸಹಾಯಕ ಮರುಳಸಿದ್ದಪ್ಪ, ಗ್ರಾಪಂ ಸದಸ್ಯರಾದ ಶಶಿಕಲಾ ಜಯಣ್ಣ, ಅಜ್ಜಣ್ಣ, ತಾಯಕನಹಳ್ಳಿ ಕೆ.ಎನ್.ರಾಘವೇಂದ್ರ, ಮುಖಂಡರಾದ ಕೆ.ರಾಜಶೇಖರಪ್ಪ, ಗುಡ್ಡದ ಬೋಸಯ್ಯ, ಬಿ.ಎಸ್.ಪಾಪಣ್ಣ, ಬೋಸೆಮಲ್ಲಯ್ಯ,

    ಕೋಣನವರ ಮಲ್ಲಿಕಾರ್ಜುನ, ಕೊಟ್ರೇಶ್, ಗದ್ದಿಗೆಸ್ವಾಮಿ, ಕಳ್ಳಜ್ಜರ ಮಲ್ಲಿಕಾರ್ಜುನ, ಗುತ್ತಿಗೆದಾರ ಜಿ.ಪಿ.ಅಶೋಕ್, ಗ್ರಂಥಾಲಯ ಮೇಲ್ವಿಚಾರಕ ತುಡುಮ ಗುರುರಾಜ್, ಕನಕ ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಟಿ.ಮಂಜುನಾಥ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts