More

    ಪುಸ್ತಕ ಮಾರಾಟ-ಪ್ರಕಾಶನ ಸುಲಭದ ಮಾತಲ್ಲ; ವೈ.ಎಸ್.ವಿ.ದತ್ತ ಕಳವಳ

    ಶಿವಮೊಗ್ಗ: ಪ್ರಸ್ತುತ ಬಾರ್ ತೆರೆಯಬಹುದು, ಹೋಟೆಲ್ ಉದ್ಯಮ ಸ್ಥಾಪಿಸಬಹುದು, ರಿಯಲ್ ಎಸ್ಟೇಟ್‌ನ್ನೂ ಮಾಡಬಹುದು. ಆದರೆ ಇಂದಿನ ದಿನಮಾನದಲ್ಲಿ ಪುಸ್ತಕ ಮಾರಾಟ ಮತ್ತು ಪ್ರಕಾಶನ ಸುಲಭದ ಮಾತಲ್ಲ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಕಳವಳ ವ್ಯಕ್ತಪಡಿಸಿದರು.
    ನಗರದ ಪಾರ್ಕ್ ಬಡಾವಣೆಯ ಪ್ರಜ್ಞಾ ಬುಕ್ ಗ್ಯಾಲರಿಯಲ್ಲಿ ಮಂಗಳವಾರ ರಿಯಾಯಿತಿ ದರದ ಪುಸ್ತಕ ಮಾರಾಟ ಮತ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಂತಹವರು ರಾಜಕಾರಣ ಮಾಡುವುದೂ ಕಷ್ಟ. ಅದೇ ರೀತಿ ಪುಸ್ತಕ ವ್ಯಾಪಾರ ಮಾಡುವುದೂ ಕಷ್ಟದಾಯಕ ಎಂದರು.
    ಹೊಸ ಆವಿಷ್ಕಾರ, ಆಲೋಚನೆಗಳಲ್ಲಿ ಮುಳುಗಿರುವ ಯುವ ಪಡೆ ಮುಂದೆ ಕುವೆಂಪು, ಎಸ್.ಎಲ್.ಭೈರಪ್ಪ, ಶಿವರಾಮ ಕಾರಂತ, ತರಾಸು ಮೊದಲಾದವರು ಓದಿಗೆ ರುಚಿಸುವುದಿಲ್ಲ. ಹೊಸ ಪೀಳಿಗೆಗೆ ಪುಸ್ತಕಗಳು ಬೇಕಿಲ್ಲ. ಮೊಬೈಲ್, ವಾಟ್ಸ್‌ಆ್ಯಪ್ ಯುಗದಲ್ಲಿ ಪುಸ್ತಕ ಮಾರಾಟ ಮಳಿಗೆ ನಡೆಸಲು ಎಂಟೆದೆಬೇಕು ಎಂದರು.
    ಹಿರಿಯ ಪತ್ರಕರ್ತ ಎಸ್.ಚಂದ್ರಕಾಂತ್ ಮಾತನಾಡಿ, ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಕೆಲಸವಾಗಬೇಕು. ಪುಸ್ತಕಗಳು ಮನಸ್ಸನ್ನು ಶಾಂತಿಯೆಡೆಗೆ ಕೊಂಡೊಯ್ಯುತ್ತವೆ. ಸತ್ಯ, ಧರ್ಮ, ನ್ಯಾಯದ ದಾರಿಯಲ್ಲಿ ನಡೆಯಲು ಸಹಕಾರವಾಗುತ್ತವೆ. ಹೆಚ್ಚು ಪುಸ್ತಕಗಳನ್ನು ಖರೀದಿ ಮಾಡುವ ಮೂಲಕ ಕನ್ನಡ ಸಾಹಿತ್ಯ ಬೆಳವಣಿಗೆಗೆ ನಾವು ಕೈಜೋಡಿಸಬೇಕು ಎಂದರು.
    ಬುಕ್ ಗ್ಯಾಲರಿ ಮಾಲಕಿ ಸೌಮ್ಯ ಮಾತನಾಡಿ, ನಾಡಿನ ಬಹುತೇಕ ಲೇಖಕರ ಪುಸ್ತಕಗಳನ್ನು ಸಂಗ್ರಹಿಸಿ ಪ್ರದರ್ಸಿಸುವ ಪ್ರಯತ್ನ ಇದಾಗಿದ್ದು ಅನುಭವ ಇಲ್ಲದೇ ಈ ಉದ್ಯಮಕ್ಕೆ ಬಂದೆವು. ಯುವ ಪೀಳಿಗೆಯ ಆಸಕ್ತಿ ಗುರುತಿಸಿ ಇಲ್ಲಿ ಪುಸ್ತಕ ಇಟ್ಟಿದ್ದೇವೆ. ನ.30ರವರೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಇರುತ್ತದೆ ಎಂದರು. ಸಾಮಾಜಿಕ ಕಾರ್ಯಕರ್ತ ತ್ಯಾಗರಾಜ್, ಕೃಷ್ಣಮೂರ್ತಿ, ಸೂರ್ಯಪ್ರಕಾಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts