More

    ಜೂ.4ರಂದು ಮರುಳಶಂಕರದೇವರುಕಾದಂಬರಿ ಲೋಕಾರ್ಪಣೆ


    ಬೆಳಗಾವಿ: ಇಲ್ಲಿನ ಶಿವಬಸವ ನಗರದ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ಸಭಾಂಗಣದಲ್ಲಿ ಜೂ.4ರಂದು ಬೆಳಗ್ಗೆ 10ಗಂಟೆಗೆ ಡಾ. ದಯಾನಂದ ನೂಲಿ ರಚಿತ ಮರುಳಶಂಕರ ದೇವರು ಅನುಭಾವಯಾತ್ರೆ ಮಹಾ ಕಾದಂಬರಿ ಲೋಕಾರ್ಪಣೆ ಮತ್ತು ಚಿಂತನೆ ಕಾರ್ಯಕ್ರಮ ಜರುಗಲಿದೆ.
    ಸಂಕೇಶ್ವರದ ಪ್ರಾ. ಬಿ.ಎಸ್.ಗವಿಮಠ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಜಿಲ್ಲಾ ಲೇಖಕಿಯರ ಸಂಘ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ  ಬೆಳಗಾವಿ ಜಿಲ್ಲಾ ಘಟಕದ ಸಹಯೋಗದಲ್ಲಿ ಕಾರ್ಯಕ್ರಮ ಜರುಗಲಿದೆ. ನಿಡಸೋಸಿ ಸಿದ್ಧಸಂಸ್ಥಾನ ಮಠದ ಡಾ.ಪಂಚಮಲಿಂಗೇಶ್ವರ ಸ್ವಾಮೀಜಿ, ಹಾಗೂ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಗದಗ- ಡಂಬಳದ ತೋಂಟದಾರ್ಯ ಮಠದ  ತೋಂಟದ ಸಿದ್ಧರಾಮ ಸ್ವಾಮೀಜಿ ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ.
     ಸಾಹಿತಿ ಡಾ.ಬಸವರಾಜ ಜಗಜಂಪಿ ಅಧ್ಯಕ್ಷತೆ ವಹಿಸುವರು. ಹಾರೂಗೇರಿಯ  ಹಿರಿಯ ಸಾಹಿತಿ ಡಾ. ವಿ.ಎಸ್. ಮಾಳಿ  ಅವರು ಕೃತಿಯ ವಸ್ತು ವಿವೇಚನೆ ಕುರಿತು ಉಪನ್ಯಾಸ ನೀಡುವರು. ಸಂಕೇಶ್ವರದ ವಿಮರ್ಶಕ ಡಾ. ಗುರುಪಾದ ಮರಿಗುದ್ದಿ  ಅವರು ಕೃತಿಯ ಅಭಿವ್ಯಕ್ತಿ, ವಿಧಾನ ಮತ್ತು ವಿನ್ಯಾಸ ಕುರಿತು ಉಪನ್ಯಾಸ ನೀಡುವರು.
    ಚಿಕ್ಕೋಡಿಯ ಡಾ. ದಯಾನಂದ ನೂಲಿ ಹಾಗೂ ಕೆಎಲ್ಇ ಕ್ಯಾನ್ಸರ್ ಆಸ್ಪತ್ರೆಯ ಎಂಡಿ ಡಾ. ಎಂ.ವಿ. ಜಾಲಿ ಅವರನ್ನು ಸನ್ಮಾನಿಸಲಾಗುವುದು.ವಿಶೇಷ  ಆಮಂತ್ರಿತರಾಗಿ ಬೆಳಗಾವಿ ಕೆಎಲ್ಇ ಯುಎಸ್‌ಎಂ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ಎಚ್.ಬಿ. ರಾಜಶೇಖರ, ಕವಿ ಡಾ. ಸರಜೂ ಕಾಟ್ಕರ,ಸಾಹಿತಿ ಡಾ. ಗುರುದೇವಿ ಹುಲ್ಲೆಪ್ಪನವರಮಠ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts