ಸ್ಟಾರ್ ಹೀರೋಯಿನ್ ಮಗಳ ಜೊತೆ ರಾಮ್ ಚರಣ್ ರೊಮ್ಯಾನ್ಸ್…!

ram
Published on

ಹೈದರಾಬಾದ್​: ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ಗೆ ಇದೀಗ ಎಲ್ಲಿಲ್ಲದ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಬಾಲಿವುಡ್ ಬ್ಯೂಟಿ ಇದೀಗ ಮೆಗಸ್ಟಾರ್​ ಚಿರಂಜೀವಿ ಪುತ್ರ ರಾಮ್​ಚರಣ್​ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ.

ಟಾಲಿವುಡ್​ ನಟ ರಾಮ್‌ ಚರಣ್‌ 'ಆರ್‌ಆರ್‌ಆರ್‌'ನಂತರ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಆ ಸಿನಿಮಾವು 1100 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಬಾಚಿಕೊಂಡಿದೆ. ಈ ಮಧ್ಯೆ ತಮಿಳು ನಿರ್ದೇಶಕ ಶಂಕರ್ ಜೊತೆಗೆ ಒಂದು ಸಿನಿಮಾವನ್ನು ರಾಮ್ ಚರಣ್ ಮಾಡುತ್ತಿದ್ದಾರೆ. ಅದರ ಶೂಟಿಂಗ್ ಬಿರುಸಿನಿಂದ ಸಾಗಿದೆ. ಈ ನಡುವೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾವನ್ನು ರಾಮ್ ಚರಣ್ ಅನೌನ್ಸ್ ಮಾಡಿದ್ದಾರೆ. ಈ ಸಿನಿಮಾವನ್ನು 'ಉಪ್ಪೆನ' ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನ ಮಾಡುತ್ತಿದ್ದಾರೆ.

ಬ್ಯೂಟಿ ಜಾನ್ವಿ ಕಪೂರ್​ ಪ್ರಸ್ತುತ ಜೂನಿಯರ್ ಎನ್‌ಟಿಆರ್ ಜೊತೆ ಕೊರಟಾಲ ಶಿವ ಅವರ ದೇವರ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಮುಂದಿನ ತೆಲುಗು ಪ್ರಾಜೆಕ್ಟ್‌ಗಳ ಬಗ್ಗೆ ಮಾತನಾಡಿದ ಬೋನಿ, ನನ್ನ ಮಗಳು ಈಗಾಗಲೇ ಜೂನಿಯರ್ ಎನ್‌ಟಿಆರ್ ಜೊತೆಗಿನ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಳೆ. ಸದ್ಯದಲ್ಲೇ ರಾಮ್ ಚರಣ್ ಜೊತೆಗೂ ಸಿನಿಮಾದಲ್ಲಿ ನಟಿಸಲಿದ್ದಾರೆ. ಜಾನ್ವಿ ಹೆಚ್ಚು ತೆಲುಗು ಚಲನಚಿತ್ರಗಳನ್ನು ನೋಡುತ್ತಿದ್ದಾಳೆ. ಯಂಗ್​ ಹಿರೋಗಳ ಜೊತೆ ಕೆಲಸ ಮಾಡುತ್ತಿರುವುದು ಹೆಮ್ಮಯ ವಿಷಯ ಎಂದಿದ್ದಾರೆ. ನನ್ನ ಪತ್ನಿ (ಶ್ರೀದೇವಿ) ಬಹು ಭಾಷೆಗಳಲ್ಲಿ ನಟಿಸಿದ್ದಾರೆ. ನನ್ನ ಮಗಳೂ ಅದೇ ರೀತಿ ನಟಸಲಿದ್ದಾಳೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಂಧ್ರ ಆಹಾರ ಶೈಲಿ ಇಷ್ಟ: ಈ ಹಿಂದೆ ಶ್ರೀದೇವಿಗಾಗಿ ಹೈದರಾಬಾದ್​ನಲ್ಲಿ ಮನೆ ಖರೀದಿಸಲು ಬಯಸಿದ್ದೆ. ಆದರೆ ಹಲವು ಕಾರಣಗಳಿಂದ ಸಾಧ್ಯವಾಗಲಿಲ್ಲ ಎಂದರು. “ನಾನು ನನ್ನ 12 ಚಲನಚಿತ್ರಗಳನ್ನು ಹೈದರಾಬಾದ್‌ನಲ್ಲಿ ಚಿತ್ರೀಕರಿಸಿದ್ದೇನೆ, ಆಗ ಅದು ಬೆಳೆಯುತ್ತಿರುವ ನಗರವಾಗಿತ್ತು. ಕೆಲವು ವರ್ಷಗಳ ನಂತರ ಹಿಂತಿರುಗಿ ಬಂದಾಗ ಇಡೀ ನಗರವೇ ಬದಲಾಗಿತ್ತು. ನಾನೇ ಓಡಾಡುತ್ತಿದ್ದೆ, ಈಗ ನನಗೆ ಮಾರ್ಗದರ್ಶನ ನೀಡಲು ಸ್ಥಳೀಯರೊಬ್ಬರು ಬೇಕು. ನನ್ನ ಹೆಂಡತಿ ಇಲ್ಲಿ ಹೆಚ್ಚು ಕೆಲಸ ಮಾಡಿದ್ದರಿಂದ ನಾನು ಹೈದರಾಬಾದ್‌ನಲ್ಲಿ ಮನೆ ಖರೀದಿಸಲು ಬಯಸಿದ್ದೆ. ನಾವು ಶೂಟಿಂಗ್​ಗೆ ಬಂದಾಗ ಹೆಚ್ಚು ಆಂಧ್ರ ಆಹಾರ ಶೈಲಿ ಇಷ್ಟುಪಟ್ಟು ಸವಿಯುತ್ತಿದ್ದೆವು ಎಂದು ಹಳೆ ನೆನಪು ನೆನಪು ಮಾಡಿಕೊಂಡರು.

ಈ ಬಿಗ್ ಬಜೆಟ್ ಸಿನಿಮಾಗೆ ನಿರ್ಮಾಪಕರು ಯಾರು?: ನಟ ರಾಮ್ ಚರಣ್ ಅವರ ಈ ಸಿನಿಮಾವನ್ನು ಮೈತ್ರಿ ಮೂವೀ ಮೇಕರ್ಸ್ ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿದ್ದು, ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ಅವರು ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಸುಕುಮಾರ್ ಅವರ ಸುಕುಮಾರ್ ರೈಟಿಂಗ್ಸ್ ಬ್ಯಾನರ್‌ ನಿರ್ಮಾಣದಲ್ಲಿ ಪಾಲುದಾರಿಕೆಯಲ್ಲಿ ಈ ಅದ್ದೂರಿ ಬಜೆಟ್ನ ಸಿನಿಮಾ ಟೇಕ್‌ ಆಫ್ ಆಗಲಿದೆ. ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣ ಇದೇ ವರ್ಷ ಪ್ರಾರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net