More

    ಎಲ್​ಗಾರ್ ಪರಿಷದ್​ ಪ್ರಕರಣದ ಆರೋಪಿ ಗೌತಮ್ ನವಲಖಗೆ ಜಾಮೀನು ಇಲ್ಲ

    ಮುಂಬೈ: ಎಲ್​ಗಾರ್​ ಪರಿಷದ್ ಪ್ರಕರಣದಲ್ಲಿ ಆರೋಪಿಯಾಗಿರುವ ಗೌತಮ್ ನವಲಖ ಅವರಿಗೆ ಜಾಮೀನು ನಿರಾಕರಿಸಿದ್ದ ನ್ಯಾಷನಲ್ ಇನ್​ವೆಸ್ಟಿಗೇಷನ್ ಏಜೆನ್ಸಿ(ಎನ್​ಐಎ)ಯ ಸ್ಪೆಷಲ್ ಕೋರ್ಟ್​ನ ಆದೇಶದ ವಿರುದ್ಧದ ಮೇಲ್ಮನವಿಯನ್ನು ಬಾಂಬೆ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.

    2017ರ ಡಿಸೆಂಬರ್​ 31 ರಂದು ಪುಣೆಯಲ್ಲಿ ನಡೆದ ಎಲ್​ಗಾರ್ ಪರಿಷದ್​ ಎಂಬ ಸಮ್ಮೇಳನವು ಮಾರನೆಯ ದಿನ ನಡೆದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿತ್ತು ಎಂದು ಪುಣೆ ಪೊಲೀಸರು ತನಿಖೆ ಆರಂಭಿಸಿದ್ದರು. ಈ ಸಮ್ಮೇಳನವನ್ನು ಆಯೋಜಿಸಿದ ಹಲವು ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಈ ರೀತಿಯಾಗಿ ನಕ್ಸಲರೊಂದಿಗೆ ಲಿಂಕ್ ಹೊಂದಿರುವ ಆರೋಪದ ಮೇಲೆ ದೆಹಲಿಯ ನಾಗರೀಕ ಹಕ್ಕು ಚಳುವಳಿಕಾರ ಗೌತಮ್ ನವಲಖ ಅವರನ್ನು 2018 ರ ಜೂನ್ ತಿಂಗಳಲ್ಲಿ ಪೊಲೀಸರು ಬಂಧಿಸಿದ್ದರು.

    ಇದನ್ನೂ ಓದಿ: ಮಗುವಿನ ಸಾಕ್ಷಿ ಸರಿ ಇಲ್ಲದಿದ್ದರೇನು… ತಾಯಿಯ ಮಾತು ಕೇಳಿ ಎಂದ ಹೈಕೋರ್ಟ್

    ನವಲಖ ಅವರು ಅಪರಾಧಿಕ ಪ್ರಕ್ರಿಯೆ ಸಂಹಿತೆಯ 167 ನೇ ಸೆಕ್ಷನ್ ಅಡಿಯಲ್ಲಿ ನೀಡಬಹುದಾದ ಡಿಫಾಲ್ಟ್ ಬೇಲ್ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಎನ್​ಐಎ ಕೋರ್ಟ್​ 2020ರ ಜುಲೈ 12 ಕ್ಕೆ ತಿರಸ್ಕರಿಸಿದ್ದು, ಈ ಆದೇಶದ ವಿರುದ್ಧ ಬಾಂಬೆ ಹೈಕೋರ್ಟ್​ನಲ್ಲಿ ನವಲಖ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಬಂಧನದ 90 ದಿನಗಳೊಳಗೆ ಚಾರ್ಜ್​ಶೀಟ್​ ಸಲ್ಲಿಸದೆ ಇರುವುದರಿಂದ ಡೀಫಾಲ್ಟ್ ಜಾಮೀನು ನೀಡಬೇಕೆಂದು ನವಲಖ ವಕೀಲರು ವಾದಿಸಿದ್ದರು. ಸರ್ಕಾರಿ ವಕೀಲರು ಆರೋಪಿಯು 2018 ರಲ್ಲಿ ಹೌಸ್ ಅರೆಸ್ಟ್​ನಲ್ಲಿದ್ದ ಅವಧಿಯನ್ನು ಬಂಧನದ ಅವಧಿಯಾಗಿ ಎಣಿಸಲು ಸಾಧ್ಯವಿಲ್ಲ; ಆದ್ದರಿಂದ 90 ದಿನಗಳ ಅವಧಿ ಮೀರಿಲ್ಲ ಎಂದು ವಾದಿಸಿದ್ದರು.

    ವಿಚಾರಣೆಯ ನಂತರ 2020ರ ಡಿಸೆಂಬರ್ 16 ರಂದು ಈ ಮೇಲ್ಮನವಿಯ ಮೇಲೆ ವಾದಗಳನ್ನು ಆಲಿಸಿದ್ದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಮೇಲ್ಮನವಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಎಸ್.ಎಸ್.ಶಿಂದೆ ಮತ್ತು ನ್ಯಾಯಮೂರ್ತಿ ಎಂ.ಎಸ್.ಕರಣಿಕ್ ಅವರ ವಿಭಾಗೀಯ ಪೀಠವು, ಎನ್ಐಎ ಕೋರ್ಟ್​ನ ಆದೇಶದಲ್ಲಿ ಬದಲಾವಣೆ ಮಾಡಲು ಯಾವುದೇ ಕಾರಣ ಕಂಡುಬಂದಿಲ್ಲ ಎಂದು ಅಭಿಪ್ರಾಯಪಟ್ಟಿದೆ.(ಏಜೆನ್ಸೀಸ್)

    ‘ಕೃಷಿ ಕಾನೂನುಗಳಲ್ಲಿ ಲೋಪವೇನು ತೋರಿಸಿ’ ಎಂದು ಸವಾಲು ಹಾಕಿದ ತೋಮರ್

    ದಿನವೊಂದರಲ್ಲಿ ಈಕೆಗೆ 19 ಸಾವಿರ ಭಾರತೀಯರು ‘ಐ ಲವ್​ ಯು’ ಹೇಳ್ತಾರಂತೆ! ನಿಮ್ಮ ಮನೆಗೂ ಬರಲು ಸಿದ್ಧವಿದ್ದಾಳಂತೆ ಈ ಸುಂದರಿ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts