More

    ಎಐಸಿಟಿಇಗೆ ಬಾಂಬೇ ಹೈಕೋರ್ಟ್ ನೋಟಿಸ್: ಇದಕ್ಕೆ ಕರ್ನಾಟಕ ಸರ್ಕಾರ ಉತ್ತರವೇನು?

    ಬೆಂಗಳೂರು ಬಿಬಿಎ, ಬಿಸಿಎ ಮತ್ತು ಬಿಎಂಎಸ್ ಸೇರಿ ಇತರೆ ತಾಂತ್ರಿಕ ಕೋರ್ಸ್‌ಗಳನ್ನು ತನ್ನ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಇತ್ತೀಚೆಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಹೊರಡಿಸಿರುವ ನಿರ್ದೇಶನಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಬಾಂಬೆ ಹೈಕೋರ್ಟ್ ಎಐಸಿಟಿಇಗೆ ನೋಟಿಸ್ ಜಾರಿಗೊಳಿಸಿದೆ.

    ಎಐಸಿಟಿಇ ನಿರ್ದೇಶನದ ವಿರುದ್ಧ ಮಹಾರಾಷ್ಟ್ರ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಂಘವು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯವು ಒಂದು ವಾರದೊಳಗೆ ಉತ್ತರ ನೀಡುವಂತೆ ಗಡುವು ನೀಡಿದೆ.

    ಈ ಕೋರ್ಸ್‌ಗಳನ್ನು ಇಲ್ಲಿಯವರೆಗೂ ವಿಶ್ವವಿದ್ಯಾಲಯದ ಧನ ಸಹಾಯ ಆಯೋಗ (ಯುಜಿಸಿ) ನಿಯಂತ್ರಿಸುತ್ತಿತ್ತು. ವಿಶ್ವವಿದ್ಯಾಲಯಗಳಿಗೆ ಸಲಹೆ ನೀಡುವುದು ಎಐಸಿಟಿಇ ಪಾತ್ರವಾಗಿತ್ತು. ಈಗ ಅಸ್ತಿತ್ವದಲ್ಲಿರುವ ಸಂಸ್ಥೆಗಳಿಗೆ ಯಾವುದೇ ಪೂರ್ವಮುನ್ಸೂಚನೆ ನೀಡದೆ ಹಾಗೂ ಚರ್ಚಿಸದೆ ತನ್ನ ನಿರ್ಧಾರವನ್ನು ೋಷಿಸಿದೆ.

    ಅಧ್ಯಾಪಕ ಮತ್ತು ವಿದ್ಯಾರ್ಥಿಗಳ ಅನುಪಾತ, ಮೂಲಸೌಕರ್ಯಗಳ ನಿಯಮದಲ್ಲಿ ಯುಜಿಸಿ ಮತ್ತು ಎಐಸಿಟಿಇ ಮಾನದಂಡಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಅಲ್ಲದೆ, ಬಿಬಿಎ, ಬಿಸಿಎ ಕೋರ್ಸ್‌ಗಳು ವೃತ್ತಿಪರ ಕೋರ್ಸ್‌ಗಳಲ್ಲ. ಆದ್ದರಿಂದ ಎಐಸಿಟಿಇ ನಿಯಂತ್ರಿಸುವ ಅಗತ್ಯವಿಲ್ಲ. ಹಲವಾರು ವರ್ಷಗಳಿಂದ ಯುಜಿಸಿ ಉತ್ತಮವಾಗಿ ನಿರ್ವಹಿಹಿಕೊಂಡು ಬರುತ್ತಿದೆ ಎಂಬುದು ಕಾಲೇಜುಗಳ ವಾದವಾಗಿದೆ.

    ಒಮ್ಮೆ ಈ ಮಾನದಂಡಗಳನ್ನು ಒಪ್ಪಿಕೊಂಡರೆ, ಪ್ರತ್ಯೇಕ ಕಟ್ಟಡಗಳನ್ನು ಹೊಂದುವುದು ಸೇರಿ ಅನೇಕ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ವಿವೇಚನಾರಹಿತ ಶಿಕ್ಷಕರ ಅನುಪಾತ, ಪ್ರವೇಶ ಪರೀಕ್ಷೆಗಳು ಮತ್ತು ಶುಲ್ಕ ನಿಯಂತ್ರಣ ನಿಯಮಗಳು ಕಾಲೇಜುಗಳ ಮೇಲೆ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತವೆ ಎಂದು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.

    ಯಾರು ನಿಯಂತ್ರಿಸಬೇಕೆಂದು ಯುಜಿಸಿ.ಎಐಸಿಟಿಇ ನಿರ್ಧರಿಸಲಿ

    ಈಗಾಗಲೇ ಎಂಸಿಎ ಸೇರಿ ತಾಂತ್ರಿಕ ಸ್ನಾತಕೋತ್ತರ ವೃತ್ತಿಪರ ಕೋರ್ಸ್‌ಗಳನ್ನು ಎಐಸಿಟಿಇ ನಿಯಂತ್ರಿಸುತ್ತಿದೆ. ಈಗ ಗುಣಮಟ್ಟ ಕಾಪಾಡಲು ಸ್ನಾತಕ ಕೋರ್ಸ್‌ಗಳನ್ನು ತಾವೇ ನಿಯಂತ್ರಣ ಮಾಡುವುದಾಗಿ ತಿಳಿಸಿದೆ. ಹೊಸ ಆದೇಶವನ್ನು ಈ ಕೋರ್ಸ್‌ಗಳನ್ನು ಹಾಲಿ ನಿಯಂತ್ರಿಸುತ್ತಿರುವ ಯುಜಿಸಿ ಪ್ರಶ್ನಿಸಬೇಕು. ಇಲ್ಲವಾದಲ್ಲಿ ಸರ್ಕಾರವು ನೇರವಾಗಿ ಎಐಸಿಟಿಇ ನಿರ್ದೇಶನವನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಯುಜಿಸಿ/ಎಐಸಿಟಿಇ ಈ ಎರಡು ಸಂಸ್ಥೆಗಳಲ್ಲಿ ಯಾವುದಾದರೂ ಒಂದು ಸಂಸ್ಥೆ ಕೋರ್ಸ್‌ಗಳನ್ನು ನಿಯಂತ್ರಿಸಬೇಕಿದ್ದು, ಯಾವುದು ಎಂಬುದನ್ನು ಆ ಸಂಸ್ಥೆಗಳೇ ನಿರ್ಧರಿಸಬೇಕು ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts