More

    ಬಿಜೆಪಿ ಕಾರ್ಯಕರ್ತರ ಮೇಲೆ ಬಾಂಬ್ ಧಾಳಿ

    ಕೊಲ್ಕತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಬಿಸಿ ಏರುತ್ತಿರುವಂತೆ, ಪಕ್ಷಗಳ ನಡುವಿನ ಸಂಘರ್ಷವು ಹಿಂಸಾತ್ಮಕ ತಿರುವು ಪಡೆಯುತ್ತಿದೆ. ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಆರು ಬಿಜೆಪಿ ಕಾರ್ಯಕರ್ತರ ಮೇಲೆ ಕ್ರೂಡ್​ ಬಾಂಬ್‌ಗಳಿಂದ ಹಲ್ಲೆ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಕಾರ್ಯಕರ್ತರು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ತಮ್ಮ ಮೇಲೆ ಈ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

    ಶುಕ್ರವಾರ ರಾತ್ರಿ, ಆರು ಬಿಜೆಪಿ ಕಾರ್ಯಕರ್ತರು ವಿವಾಹ ಸಮಾರಂಭವೊಂದನ್ನು ಮುಗಿಸಿ ವಾಪಸಾಗುತ್ತಿದ್ದಾಗ, ದುಷ್ಕರ್ಮಿಗಳು ಅವರ ಮೇಲೆ ಕ್ರೂಡ್ ಬಾಂಬ್​ಗಳನ್ನು ಎಸೆದಿದ್ದಾರೆ. ಈ ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡ ಕಾರ್ಯಕರ್ತರನ್ನು ತಕ್ಷಣ ಕಾನ್ನಿಂಗ್ ಉಪವಿಭಾಗೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಕೋ-ವಿನ್ ಸರ್ಟಿಫಿಕೇಟ್​ : ಟಿಎಂಸಿ ಕಣ್ಣು ಕುಕ್ಕಿದ ಪ್ರಧಾನಿ ಮೋದಿ ಫೋಟೋ !

    ಶೋವನ್ ದೇಬನಾಥ್, ವಿಕ್ರಮ್ ಶಿಲ್, ಅರ್ಪಣ್ ದೇಬನಾಥ್, ಸ್ವಪನ್ ಕುರಳಿ, ಮಹಾದೇವ್ ನಾಯಕ್ ಮತ್ತು ಮತ್ತೊಬ್ಬರು ಗಾಯಗೊಂಡಿರುವ ಕಾರ್ಯಕರ್ತರು. ತಮ್ಮೆಡೆಗೆ ಬಾಂಬ್ ಎಸೆದದ್ದು ಟಿಎಂಸಿ ಕಾರ್ಯಕರ್ತರು ಎಂದು ಅವರು ಆರೋಪಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

    ಮತ್ತೊಂದೆಡೆ, ಗೊಸಬ ವಿಧಾನಸಭೆಯ ಟಿಎಂಸಿ ಚುನಾವಣಾ ಅಭ್ಯರ್ಥಿ ಜಯಂತ್ ನಸ್ಕರ್, ಬಿಜೆಪಿ ನಾಯಕ ವರುಣ್ ಪ್ರಮಾಣಿಕ್ ಅವರು ದುಷ್ಕರ್ಮಿಗಳೊಂದಿಗೆ ಬಾಂಬ್ ಇಡಲು ಪ್ರಯತ್ನಿಸಿದಾಗ, ಆರು ಜನರು ಗಾಯಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಕರೊನಾ ಲಸಿಕಾ ಪ್ರಮಾಣಪತ್ರದಿಂದ ಪ್ರಧಾನಿ ಫೋಟೋ ತೆಗೆಯಿರಿ: ಕೇಂದ್ರಕ್ಕೆ ಚುನಾವಣಾ ಆಯೋಗ ಸೂಚನೆ

    ‘ಜಿಂದಗಿ ನಾ ಮಿಲೇಗಿ ದೋಬಾರಾ 2’ ಚಿತ್ರಕ್ಕೆ ಆಲಿಯಾ ಭಟ್ ನಾಯಕಿ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts